Advertisement
ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಐಡಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ಆಗಮಿಸಿದ ರಾಕೇಶ್ ಮಠ ಅವರನ್ನು ತಡರಾತ್ರಿ 9 ಗಂಟೆವರೆಗೂ ಅಧಿಕಾರಿಗಳು ವಿಚಾರಣೆ ನಡೆಸಿದರು.
Related Articles
ಬರೆಯುವುದು ನನ್ನ ಹಕ್ಕು ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
Advertisement
ಇದಕ್ಕೆ ಗರಂ ಆದ ತನಿಖಾಧಿಕಾರಿಗಳು, ಪರಶುರಾಮ ಯಾರೊಂದಿಗೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಎಂಬುದನ್ನು ಬಾಯಿ ಬಿಡಬೇಕು. ಇಲ್ಲವಾದರೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಬಳಿಕ ಕೆಲ ಸನ್ನಿವೇಶಗಳನ್ನು ರಾಕೇಶ್ ಹಂಚಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಪರಶುರಾಮ ಅಮಾಯಕ: ಇದಕ್ಕೂ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ರಾಕೇಶ್ ಮಠ, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಾಜರಾಗಿದ್ದೇನೆ. ದೇಶ ರಕ್ಷಣೆ,ಧರ್ಮ ರಕ್ಷಣೆಗೆ ಹೋರಾಡುವುದು ತಪ್ಪಾ? ಪರಶುರಾಮನನ್ನು ಕೊಲೆಗಾರ ಎಂದು ಬಿಂಬಿಸುವುದು ತಪ್ಪು. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಆತನನ್ನು ಕೊಲೆಗಾರ ಎಂದು ಹೇಳಲು ಸಾಧ್ಯವಿಲ್ಲ. ಪರಶುರಾಮನನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿಲ್ಲ. ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಅದಕ್ಕೆ ಸಹಾಯ ಮಾಡಲು ಕೋರಿ ಪೋಸ್ಟ್ ಮಾಡಿದ್ದೆ. ಎಸ್‌ಐಟಿ ಯಾವುದೇ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದರು.
ಪೋಷಕರ ಆತಂಕಎಸ್ಐಟಿ ಕಚೇರಿಗೆ ಆಗಮಿಸಿದ ಪರಶುರಾಮ ತಂದೆ ಅಶೋಕ ವಾಗ್ಮೋರೆ ಮತ್ತು ಮಾವ ಅಶೋಕ ಕಾಂಬ್ಳೆ ಪುತ್ರನನ್ನು ನೆನೆದು ಭಾವುಕರಾದರು. ಬಳಿಕ ಅಶೋಕ ವಾಗ್ಮೋರೆ ಪುತ್ರನನ್ನು ಭೇಟಿಯಾಗಿ ಬುದಿಟಛಿವಾದ ಹೇಳಿದ್ದಲ್ಲದೇ, ಸಂಘಟನೆ ಎಂದು ಹೇಳಿಕೊಂಡು ಮನೆಯನ್ನೇ ಮರೆತು ಬಿಟ್ಟೆ ನೀನು. ನಮಗೆ ಇನ್ಯಾರು ದಿಕ್ಕು ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಗನನ್ನು ನೋಡಿ ಮಾತನಾಡಿದ್ದೇನೆ. ಐದು ದಿನ ಬಿಟ್ಟು ಮತ್ತೂಮ್ಮೆ ಬರಲು ಹೇಳಿದ್ದಾರೆ. ಆಗ ತಾಯಿಯನ್ನು ಕರೆದುಕೊಂಡು ಬರುವಂತೆ ಮಗ ಪರಶುರಾಮ ಕೇಳಿಕೊಂಡಿದ್ದಾನೆ ಎಂದರು.