Advertisement

ಏಪ್ರಿಲ್ 10ರಂದು ಪದ್ಮನಾಭನಗರದಲ್ಲಿ ರಾಮ ರಥಯಾತ್ರೆ : ಸಚಿವ ಆರ್.ಅಶೋಕ್

03:37 PM Apr 07, 2022 | Team Udayavani |

ಬೆಂಗಳೂರು: ಏಪ್ರಿಲ್ 10ರಂದು ರಾಮನವಮಿಯಂದು ಬೆಂಗಳೂರಿನ  ಪದ್ಮನಾಭನಗರದಲ್ಲಿ ರಾಮರಥಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

Advertisement

ಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ”ರಾಮರಥಯಾತ್ರೆ ಅಲ್ಲದೆ ಶನಿವಾರ ಮತ್ತು ಭಾನುವಾರ ಜಾನಪದ ಜಾತ್ರೆ ಹಮ್ಮಿಕೊಂಡಿದ್ದೇವೆ. ರಾಮರಥ ಯಾತ್ರೆಗೆ ರಾಮನನ್ನು ಪ್ರೀತಿಸುವ ಪ್ರತಿಯೊಬ್ಬರೂ ಪಾಲ್ಗೊಳ್ಳಬಹುದು.ನನ್ನ ಮನೆ ದೇವರು ಆಂಜನೇಯ.ಹಾಗಾಗಿ ನಾನು ರಾಮಭಕ್ತ.ಸರ್ವಧರ್ಮದ ಯಾರು ಬೇಕಾದರೂ ಭಾಗಿಯಾಗಬಹುದು.ಯಾರಿಗೂ ನಿರ್ಬಂಧವಿಲ್ಲ” ಎಂದರು.

”ಅಪಘಾತ, ಕೊಲೆ ಯಾವುದೇ ಅಪರಾಧ ಆದರೂ ಕಾನೂನಿನ ವ್ಯಾಪ್ತಿಯಲ್ಲಿ ತನಿಖೆ ಆಗುತ್ತದೆ.ಅದಕ್ಕೆ ಯಾವುದೇ ಧರ್ಮದ ಬಣ್ಣಕೊಡುವುದು ಬೇಡ.ಹಿಜಾಬ್ ವಿಚಾರದಲ್ಲಿ ವಿದೇಶಿ ಕೈವಾಡ ಇರುವುದು ಸಾಬೀತಾಗಿದೆ.ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.

ಮಂತ್ರಾಲಯ ಶ್ರೀಗಳ ಭೇಟಿ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಜಯನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಶ್ರೀ  ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಸಂಸದ ಪ್ರತಾಪ ಸಿಂಹ, ಬಿಜೆಪಿ ಮುಖಂಡ ಸುಬ್ಬಣ್ಣ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

Advertisement

ಸ್ವಾಮೀಜಿ ಭೇಟಿ ಮಾಡಿದ ಬಳಿಕ ಹೇಳಿಕೆ ನೀಡಿದ ಸಚಿವ ಅಶೋಕ್, ಮಂತ್ರಾಲಯದಲ್ಲಿ ದಾಸೋಹ ಭವನ ನಿರ್ಮಾಣ ಮಾಡಲು ಹಾಗೂ ಕುಡಿಯುವ ನೀರು ಒದಗಿಸಲು ಐದು ಕೋಟಿ ಕೊಡಲು ಮತ್ತು ಬೆಂಗಳೂರಿನಲ್ಲಿ ಒಂದೂವರೆ ಎಕರೆ ಜಮೀನು ಕೊಡಲು ಸಿಎಂ ಸಮ್ಮತಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next