Advertisement

ಭಜನ ಶಕ್ತಿಯ ಮೂಲಕ ರಾಮ ರಾಜ್ಯ: ಸಚಿವ ಸಾರಂಗಿ

10:04 AM Dec 31, 2019 | mahesh |

ಈಶ್ವರಮಂಗಲ: ಆತ್ಮ ನಿವೇದನೆಯ ಮಾರ್ಗವಾಗಿರುವ ಭಜನೆಗೆ ಪರಂಪರೆಯಿದೆ. ಭಜನ ಶಕ್ತಿಯ ಮೂಲಕ ಮೂಡುವ ಸ್ನೇಹ, ದಯೆ ಸಮರ್ಪಣಾ ಭಾವದಿಂದ ರಾಮ ರಾಜ್ಯ ನಿರ್ಮಾಣ ಸಾಧ್ಯ ಎಂದು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆಯ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಹೇಳಿದರು.

Advertisement

ಅವರು ರವಿವಾರ ಹನುಮಗಿರಿ ಕ್ಷೇತ್ರದಲ್ಲಿ ಭಜನ ಮಹಾಮಂಡಲ ಮಂಗಳೂರು ವಿಭಾಗ ಮತ್ತು ಶ್ರೀ ಕ್ಷೇತ್ರ ಹನುಮಗಿರಿ ಇದರ ಸಹಯೋಗದಲ್ಲಿ ನಡೆದ “ಭಜನ ಸಮರ್ಪಣೆ 2019’ರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆ ಸುಲಭ ಮಾರ್ಗ. ಅದು ಅಹಂಕಾರವನ್ನು ತೊಲಗಿಸಿ ನಮ್ಮನ್ನು ತೃಣಸಮಾನರಾಗಿ ಮಾಡುತ್ತದೆ. ಹಲವು ಜನ್ಮಗಳ ಕರ್ಮದ ಬಳಿಕ ಸಿಗುವ ಪವಿತ್ರ ವಾದ ಮನುಷ್ಯ ಜನ್ಮವನ್ನು ಪಾವನಗೊಳಿಸಲು ಭಜನೆಯು ಭಕ್ತಿ ಮಾರ್ಗ
ವನ್ನು ತೋರಿಸುತ್ತದೆ ಎಂದರು.

ಆರೆಸ್ಸೆಸ್‌ ಸಹಸರಕಾರ್ಯವಾಹ ಮುಕುಂದ್‌ ಮಾತನಾಡಿ, ಸಾವಿರಾರು ವರ್ಷಗಳ ಸಂಸ್ಕೃತಿ ಪ್ರವಾಹದೊಂದಿಗೆ ಬಂದ ಭಜನೆ ಸಮಷ್ಟಿ ಭಾವ ಉದ್ದೀಪನಗೊಳಿಸುವ ಜತೆಗೆ ವರ್ತಮಾನದ ಆವಶ್ಯಕತೆಯನ್ನು ನೆನಪಿಸುತ್ತದೆ. ಭಕ್ತಿ ಪರಂಪರೆಯಲ್ಲಿ ಬಂದ ಬಹುದೊಡ್ಡ ಕೊಡುಗೆಯಾದ ಭಜನೆಯ ಮುಖ್ಯ ಉದ್ದೇಶ ಸಮ್ಯಕ್‌ ಭಕ್ತಿ ಮತ್ತು ಸಮಾಜ ಸಂಘಟನೆಯಾಗಿದೆ ಎಂದರು.

ಭಜನ ಸಂಭ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ| ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಒಡಿಯೂರು ಸ್ವಾಮೀಜಿ, ಗುರುಪುರ ಸ್ವಾಮೀಜಿ, ಮಾಣಿಲ ಸ್ವಾಮೀಜಿ, ಕಣಿಯೂರು ಸ್ವಾಮೀಜಿ, ಓಂಶ್ರೀ ಮಠದ ಸ್ವಾಮೀಜಿ, ಶಿವಜ್ಞಾನಮಯಿ ಸ್ವಾಮೀಜಿ, ಶಾಸಕರಾದ ಡಾ| ಸುಧಾಕರ, ಹರೀಶ ಪೂಂಜ, ಸಂಜೀವ ಮಠಂದೂರು, ಅಂಗಾರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರಸನ್ನ ದೇಶಪಾಂಡೆ, ಆರೆಸ್ಸೆಸ್‌ ಪ್ರಮುಖರಾದ ಡಾ| ವಾಮನ ಶೆಣೈ, ನಾ. ತಿಪ್ಪೇಸ್ವಾಮಿ, ಗುರುಪ್ರಸಾದ್‌, ಗೋಪಾಲ ಚೆಟ್ಟಿಯಾರ್‌, ಕೊಡ್ಮಣು
ಕಾಂತಪ್ಪ ಶೆಟ್ಟಿ, ಅಜಿಲ ಸೀಮೆಯ ಅರಸು ಪದ್ಮಪ್ರಸಾದ್‌ ಅಜಿಲ, ಕೃಷ್ಣ ಉಪಾಧ್ಯಾಯ , ಕುಂಟಾರು ರವೀಶ್‌ ತಂತ್ರಿ ಉಪಸ್ಥಿತರಿದ್ದರು. ವಿಭಾಗ ಸಂಯೋಜಕ ಪ್ರವೀಣ ಸರಳಾಯ ಸ್ವಾಗತಿಸಿ, ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ವಂದಿಸಿದರು. ಗಜಾನನ ಪೈ ನಿರ್ವಹಿಸಿದರು.

ದಾಖಲೆಯ ಭಜನೆ
1,300ಕ್ಕಿಂತಲೂ ಹೆಚ್ಚು ಭಜನ ತಂಡಗಳ 6,500 ಮಂದಿ ಭಜಕರು ಏಕಕಾಲದಲ್ಲಿ 5 ಭಜನೆ
ಗಳನ್ನು ರಾಮಕೃಷ್ಣ ಕಾಟುಕುಕ್ಕೆ ಮತ್ತು ಜಗದೀಶ್‌ ಆಚಾರ್ಯ ಪುತ್ತೂರು ಮಾರ್ಗದರ್ಶನದಲ್ಲಿ ತಾಳದೊಂದಿಗೆ ಹಾಡಿದರು.

Advertisement

ಪೇಜಾವರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಭಜನ ಸಂಭ್ರಮ ಕಾರ್ಯಕ್ರಮವನ್ನು ಶ್ರೀಗಳಿಗೆ ಭಜನ ಸಮರ್ಪಣೆ ಕಾರ್ಯಕ್ರಮವಾಗಿ ರೂಪಾಂತರಗೊಳಿಸಲಾಯಿತು. ಸಭಾ ಕಾರ್ಯಕ್ರಮದ ಆರಂಭ
ದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಆರೆಸ್ಸೆಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ನುಡಿ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next