Advertisement
“ರಾಮ’ ಎನ್ನುವ ಶಬ್ಧದ ಅರ್ಥವೇ ಎಲ್ಲರನ್ನು ಆರಾಮದಲ್ಲಿ ಇರುವಂತೆ ನೋಡಿಕೊಳ್ಳುವವನು. ಸುಖ ಸಂತೋಷದಿಂದ ಬಾಳುವಂತೆ ಮಾಡುವವನು “ರಾಮ’. ಅದೇ ರೀತಿ ರಾವಣ ಎನ್ನುವ ಶಬ್ಧದ ಅರ್ಥವೇ ಎಲ್ಲರನ್ನು ಅಳುವಂತೆ ಮಾಡುವವನು. ಹೀಗಾಗಿ ರಾಮ ಮತ್ತು ರಾವಣನ ಹೆಸರು ಪ್ರಸ್ತುತ ಸಮಾಜದಲ್ಲಿ ನಾವು ಹೇಗಿರಬೇಕು ಎನ್ನುವುದಕ್ಕೆ ಅನ್ವರ್ಥಕವಾಗಿದೆ. ರಾಮನಂತೆ ಇರಬೇಕು. ರಾವಣನಂತೆ ಇರಬಾರದು.
ದುಃಖಕ್ಕೆ ಕಾರಣವಾಗಬಾರದು. ಅದು ಪಕ್ಕದ ಮನೆಯವರ ದುಃಖಕ್ಕೂ ಎಡೆಮಾಡಿಕೊಡಬಾರದು. ನನ್ನ ಸುಖಕ್ಕಾಗಿ ನಾನು ಪಡುವ ಪ್ರಯತ್ನವು ಅಕ್ಕಪಕ್ಕದ ಮನೆಯ ಇಬ್ಬರಿಗೆ ದುಃಖ ತರಿಸಿದರೆ, ಅವರು ತಮ್ಮ ಸುಖಕ್ಕಾಗಿ ನಮ್ಮಂತೆ ನಡೆದುಕೊಳ್ಳಲು ಆರಂಭಿಸಿದರೆ, ಅದರಿಂದ ಅವರ ಅಕ್ಕಪಕ್ಕದ ಮನೆಯವರಿಗೆ ದುಃಖ ಆಗುತ್ತದೆ. ಹೀಗಾದರೆ ಸುಖಕ್ಕಾಗಿ ಅವರೊಬ್ಬರಿಂದಲೇ ಪ್ರಯತ್ನ. ದುಃಖಕ್ಕೆ ಅಕ್ಕಪಕ್ಕದ ಮನೆಯ ಇಬ್ಬರ ಪ್ರಯತ್ನ. ಆಗ ಸುಖಕ್ಕೆ ಪ್ರಯತ್ನ ಪಡುವವರು ಕಡಿಮೆಯಾಗಿ, ದುಃಖಕ್ಕೆ ಪ್ರಯತ್ನ ಪಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತದೆ. ಹಾಗಾಗಬಾರದು. ಹೀಗಾದರೆ ಅದು “ರಾವಣ’ ಪ್ರಯತ್ನವಾಗುತ್ತದೆ. ಮತ್ತೂಬ್ಬರಿಗೆ ಏನೇ ತೊಂದರೆಯಾದರೂ ಚಿಂತೆಯಿಲ್ಲ. ತಾನು ಸುಖವಾಗಿರಬೇಕು ಎಂಬುದು “ರಾವಣ’ನ ಸ್ವಭಾವ. ರಾಮನ ಮಡದಿಯೂ ತನಗೆ ಬೇಕು ಎಂದು ರಾವಣ ಬಯಸಿದ್ದ. ಆದರೆ ರಾಮನ ಪ್ರಯತ್ನ ಹಾಗಲ್ಲ. ತಾನೂ ಕಷ್ಟಪಟ್ಟರೂ ಚಿಂತೆಯಿಲ್ಲ ಊರಿಗೆ ಒಳಿತಾಲಿ, ಮತ್ತೂಬ್ಬರಿಗೆ ಒಳಿತಾಗಲಿ ಎಂಬಂತೆ ಬದುಕಿ ನಮಗೆ ಆದರ್ಶವಾಗಿದ್ದಾರೆ. ನಾವು ಕೂಡ ಸುಖಕ್ಕಾಗಿ ಪ್ರಯತ್ನ ಪಡುವುದು ಇದ್ದೇ ಇರುತ್ತದೆ. ಅದೇ ಪ್ರಯತ್ನವನ್ನು ನನಗೆ ಮಾತ್ರವಲ್ಲದೇ ಅಕ್ಕಪಕ್ಕದ ಮನೆ ಯವರಿಗೂ ಸುಖವಾಗಲಿ ಎಂಬ ನಿಲುವಿನೊಂದಿಗೆ ನಡೆದು ಕೊಂಡರೆ ಮತ್ತು ಸಮಾಜದಲ್ಲಿ ಎಲ್ಲರೂ ಇದೇ ಚಿಂತನೆಯಲ್ಲಿ ಮುಂದುವರಿದರೆ ಸುಖಕ್ಕಾಗಿ ಪ್ರಯತ್ನಿಸುವವರ ಸಂಖ್ಯೆಯೇ ಹೆಚ್ಚಾಗಲಿದೆ. ನನ್ನ ಪ್ರಯತ್ನದ ಜತೆಗೆ ಅಕ್ಕಪಕ್ಕದ ಮನೆಯವರ ಪ್ರಯತ್ನವೂ ಸೇರಲಿದೆ. ಇದು “ರಾಮ’ನ ಆದರ್ಶ. ಎಲ್ಲರೂ ಹೀಗೆ ನಡೆದರೆ ಆ ರಾಜ್ಯ ರಾಮ ರಾಜ್ಯವಾಗಲಿದೆ. ನಮ್ಮ ಸುಖಕ್ಕಾಗಿ ನಾವು ಪ್ರಯತ್ನಿಸುವುದು ದೊಡ್ಡ ವಿಚಾರವಲ್ಲ. ಮತ್ತೂಬ್ಬರ ಸುಖಕ್ಕಾಗಿ ನಾವು ಪ್ರಯತ್ನಿಸಿದರೆ ರಾಮ ರಾಜ್ಯದ ಪರಿಕಲ್ಪನೆ ಸನ್ನಿಹಿತವಾಗಲಿದೆ. ನಾವೆಲ್ಲರೂ ಅದೇ ರೀತಿಯಲ್ಲಿ ನಡೆದುಕೊಳ್ಳಲು ಪ್ರಯತ್ನಿಸೋಣ, ಹಾಗೆಯೇ ಬದುಕುವ ಸಂಕಲ್ಪ ಮಾಡೋಣ. ಎಲ್ಲರಿಗೂ ಒಳಿತಾಗಲಿ.
Related Articles
(ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರು)
Advertisement
– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರು, ಉಡುಪಿ
ಬಾಲಕರಾಮನಿಗೆ 56 ಬಗೆಯ ವಿಶೇಷ ಭಕ್ಷ್ಯಗಳ ನೈವೇದ್ಯ ಇಂದುಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನೂತನ ರಾಮಮಂದಿರ ನಿರ್ಮಾಣವಾಗಿ ಬಾಲಕ ರಾಮನ ಪ್ರತಿಷ್ಠಾಪನೆ ಅನಂತರ ನಡೆಯುತ್ತಿರುವ ಮೊದಲ ರಾಮನವಮಿಯನ್ನು ವೈಭವದಿಂದ ಆಚರಿ ಸಲು ಸಕಲ ಸಿದ್ಧತೆಗಳು ನಡೆದಿವೆ. ಮಂಗಳವಾರ ಮುಂಜಾನೆ 3.30ರಿಂದ ವಿಶೇಷ ಪೂಜೆಗಳು ಆರಂಭ ವಾಗಲಿದೆ. ಬಾಲಕರಾಮನಿಗೆ 56 ಬಗೆಯ ವಿಶೇಷ ಭಕ್ಷ್ಯ ಗಳನ್ನು ನೈವೇದ್ಯವಾಗಿ ಅರ್ಪಿಸ ಲಾಗುತ್ತದೆ. ಇವುಗಳನ್ನು ಮಧ್ಯಾಹ್ನ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾ ಗುತ್ತದೆ. ಅಂದು ಮುಂಜಾನೆ 3.30ರಿಂದ ರಾತ್ರಿ 11 ಗಂಟೆ ವರೆಗೆ ಒಟ್ಟು 19 ಗಂಟೆಗಳು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ನಡುವೆ ಕೆಲವು ಕಾಲ ನೈವೇದ್ಯ ಸಮರ್ಪಣೆಗೆ ಮಾತ್ರ ದರ್ಶನ ಸ್ಥಗಿತಗೊಳಿಸಲಾಗುತ್ತದೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಸೂರ್ಯರಶ್ಮಿ ಸ್ಪರ್ಶ: ಬಾಲಕರಾಮನ ಹಣೆಗೆ ಇಂದು ಸೂರ್ಯರಶ್ಮಿ ಸ್ಪರ್ಶಿಸಲಿದೆ. ಮಧ್ಯಾಹ್ನ 11.58ರಿಂದ ಮಧ್ಯಾಹ್ನ 12.03ವರೆಗೆ 5 ನಿಮಿಷಗಳ ಕಾಲ ಬಾಲಕರಾಮನ ಹಣೆಗೆ ಸೂರ್ಯರಶ್ಮಿ ಮುತ್ತಿಕ್ಕಲಿದೆ. ರಾಮನವಮಿ ಅಂಗವಾಗಿ ಅಯೋಧ್ಯೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ವಿಶೇಷ ಪೂಜೆ, ಹೋಮ, ಹವನ ನಡೆಯಲಿದೆ. ಭಕ್ತರ ಸುಗಮ ದರ್ಶನಕ್ಕೆ ಎಲ್ಲÉ ವ್ಯವಸ್ಥೆ ಮಾಡಲಾಗಿದೆ. ಲೈವ್ ದರ್ಶನಕ್ಕಾಗಿ ಅಯೋಧ್ಯೆ ನಗರದ 100 ಕಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.