Advertisement
ಇದರ ಜತೆಗೆ ಟಿಎಂಸಿ ನಾಯಕರು ಭ್ರಷ್ಟಾ ಚಾರದಲ್ಲಿ ತೊಡಗಿದ್ದಾರೆ ಎಂದೂ ಪ್ರಧಾನಿ ಆರೋಪಿಸಿದ್ದಾರೆ.
ಜಲಪಾಯ್‌ಗಾರಿ: ಪಶ್ಚಿಮ ಬಂಗಾಲದ ಹೌರಾದಲ್ಲಿ ಬುಧವಾರ ರಾಮ ನವಮಿ ಮತ್ತು ಬೃಹತ್ ಶೋಭಾಯಾತ್ರೆ ನಡೆಸಲು ಟಿಎಂಸಿ ತೀರ್ಮಾನಿಸಿದೆ. ಈ ಬಗ್ಗೆ ಹೌರಾದ ಸಂಸದ ಪ್ರಸೂನ್ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಬಾಲುರ್‌ಘಾಟ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಪಶ್ಚಿಮ ಬಂಗಾಲದಲ್ಲಿ ರಾಮ ನವಮಿಗೆ ತಡೆಯೊಡ್ಡಲು ಟಿಎಂಸಿ ಯೋಜಿಸುತ್ತಿದೆ ಎಂದಿದ್ದರು. ಜತೆಗೆ ಕಲ್ಕತ್ತಾ ಹೈಕೋರ್ಟ್ ಕೂಡ ರಾಮ ನವಮಿ ಆಚರಣೆಗಳಿಗೆ ಅಡ್ಡಿ ಮಾಡಕೂಡದು ಎಂದು ತೀರ್ಪು ನೀಡಿದ್ದ ಬೆನ್ನಲ್ಲಿಯೇ ಪಕ್ಷ ಈ ತೀರ್ಮಾನ ಕೈಗೊಂಡು ಘೋಷಣೆ ಮಾಡಿದೆ. ಪಕ್ಷದ ನಾಯಕ ಮತ್ತು ತಾರಾ ಪ್ರಚಾರಕ ಸಯೋನಿ ಘೋಷ್, ಅರೂಪ್ ರಾಯ್, ಸಚಿವ ಮನೋಜ್ ತಿವಾರಿ ಉಪಸ್ಥಿತರಿರಲಿದ್ದಾರೆ ಎಂದು ಸಂಸದ ಪ್ರಸೂನ್ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಸನಾತನಿಗಳ ಸಂವಿಧಾನ
ಸಂವಿಧಾನ ಸಭೆಯಲ್ಲಿದ್ದ ಶೇ.80ರಿಂದ 90ರಷ್ಟು ಸನಾತನಿಗಳೇ ಸಂವಿಧಾನ ರೂಪಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ಸನಾತನ ಧರ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು. ಡಾ| ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನೆಯ ಪ್ರಮುಖ ವ್ಯಕ್ತಿಯಾಗಿದ್ದರೆ, ಡಾ.| ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಕರಡು ರೂಪಿಸಿದರು ಎಂದು ತಿಳಿಸಿದರು.
Related Articles
3 ದಶಕದಿಂದಲೂ ಆರೆಸ್ಸೆಸ್-ಬಿಜೆಪಿ ಸಂವಿ ಧಾನ ವನ್ನು ಬದಲಿಸಲಿವೆ ಎಂದು ವಿಪಕ್ಷಗಳು ಅಪಪ್ರ ಚಾರ ಮಾಡುತ್ತಿವೆ. ಸಂವಿಧಾನವನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಡಿ. ನಮ್ಮ ಸಂವಿಧಾನವು ಪರಿಶು ದ್ಧವಾಗಿದೆ. ಸಂವಿಧಾನ ರಚನಕಾರರು ಸಮೃದ್ಧ ಭಾರತದ ಕನಸು ಕಂಡಿದ್ದರು. ಆದರೆ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಆ ಅವಕಾಶ ವನ್ನು ಹಾಳು ಮಾಡಿತು ಎಂದರು ಮೋದಿ.
Advertisement
ಜಂಗಲ್‌ರಾಜ್ ಆರ್‌ಜೆಡಿ ಬಿಹಾರದಲ್ಲಿ ಆರ್‌ಜೆಡಿ ಜಂಗಲ್ ರಾಜ್‌ನ ಅತೀ ದೊಡ್ಡ ಮುಖವಾಗಿದೆ. ಭ್ರಷ್ಟಾಚಾರ ಮತ್ತು ಜಂಗಲ್‌ರಾಜ್‌ಗೆ ಆರ್‌ಜೆಡಿ ಸಂಕೇತವಾಗಿದೆ. ಘಮಂಡಿಯಾ ಕೂಟಕ್ಕೆ ಯಾವುದೇ ದೂರ ದೃಷ್ಟಿ ಯಾಗಲಿ, ನಂಬಿಕೆಯಾಗಲಿ ಇಲ್ಲ. ಬಿಹಾರ ಮುಖ್ಯ ಮಂತ್ರಿ ನಿತೀಶ್‌ಕುಮಾರ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿವೆ ಎಂದು ಮೋದಿ ಆರೋಪಿಸಿದರು. ಅಕ್ರಮ ವಲಸೆ ತಡೆ
ನೇಪಾಲ, ಬಾಂಗ್ಲಾದೇಶದೊಂದಿಗೆ ಗಡಿ ಹಂಚಿ ಕೊಂಡಿರುವ ಪೂರ್ಣಿಯಾದಲ್ಲಿ ಅಕ್ರಮ ವಲಸೆ ಯನ್ನು ತಡೆಯುತ್ತೇವೆ. ಓಟ್ ಬ್ಯಾಂಕ್ ರಾಜಕಾರ ಣದಿಂದಾಗಿ ಅಕ್ರಮ ವಲಸೆ ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತಿದೆ. ಇದರಿಂದ ಭದ್ರತೆಗೆ ಸವಾಲಾಗಿದೆ. ಅಲ್ಲದೇ ಸೀಮಾಂಚಲ ಪ್ರದೇ ಶದಲ್ಲಿ ಸಾಕಷ್ಟು ತೊಂದರೆಗೆ ಕಾರಣವಾಗಿದೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ