Advertisement

ರಾಮನವಮಿ ಉತ್ಸವಕ್ಕೆ ಚಾಲನೆ

09:30 PM Apr 11, 2019 | Sriram |

ಕುಳಾಯಿ: ಶ್ರೀ ರಾಮನವಮಿ ಆರಾಧನ ಮಂಡಳಿ ಕುಳಾಯಿ ಇದರ ವತಿಯಿಂದ ನಡೆಯುವ 17ನೇ ವರ್ಷದ ರಾಮನವಮಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಶಂಕರನ್‌ ಕುಟ್ಟಿ ಕುಚ್ಚಿಗುಡ್ಡೆ ಕುಳಾಯಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಸಭಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ನ್ಯಾಯಾಲಯದ ನಿವೃತ್ತ ಶಿರಸ್ತೇದಾರ ಪದ್ಮನಾಭ ಕೆ., ನಿವೃತ್ತ ನ್ಯಾಯಾಂಗ ಅಧಿಕಾರಿ, ನ್ಯಾಯವಾದಿ ವಿಜಯಕುಮಾರ್‌ ಕೋಡಿಕೆರೆ ಅವರನ್ನು ಸಮ್ಮಾನಿಸಲಾಯಿತು. ಯಕ್ಷಗಾನ ಕಲಾವಿದ ಉಜಿರೆ ಅಶೋಕ್‌ ಭಟ್‌ ಅವರ ಸರಣಿ ಪ್ರವಚನ ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್‌ನನಿವೃತ್ತ ಪ್ರಬಂಧಕ ಎಂ. ಸದಾಶಿವ ಉದ್ಘಾಟಿಸಿದರು. ರಾಮನವಮಿ ಆರಾಧನ ಮಂಡಳಿಯ ಅಧ್ಯಕ್ಷ ಎಂ. ವಿಷ್ಣುಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಕೆ. ನರಸಿಂಹ ಉಪಸ್ಥಿತ ರಿದ್ದರು. ಕಾರ್ಯದರ್ಶಿ ಯೋಗೀಶ್‌ ಕಾಂಚನ್‌ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್‌ ಸದಾನಂದ್‌ ವಂದಿಸಿ ದರು. ಉಜಿರೆ ಅಶೋಕ್‌ ಭಟ್‌ ಅವರಿಂದ ಎ. 13ರ ವರೆಗೆ ಕೃಷ್ಣ ¤ ಭಗವಾನ್‌ ಸ್ವಯಂ ಸರಣಿ ಪ್ರವಚನ ಪ್ರತಿದಿನ ಸಂಜೆ 5 ಗಂಟೆಗೆ ಜರಗಲಿದ್ದು , ನಿತ್ಯವೂ ಯಕ್ಷಗಾನ ಬಯಲಾಟ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next