Advertisement

ವಡಾಲ ಶ್ರೀ ರಾಮಮಂದಿರದಲ್ಲಿ  ರಾಮನವಮಿ ಉತ್ಸವಕ್ಕೆ ಚಾಲನೆ

04:59 PM Apr 03, 2017 | Team Udayavani |

ಮುಂಬಯಿ: ವಡಾಲದ ಶ್ರೀ ರಾಮಮಂದಿರದ ವಾರ್ಷಿಕ ರಾಮನವಮಿ ಉತ್ಸವವು ಎ. 6ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದ್ದು, ಮಾ. 28ರಂದು ಉತ್ಸವಕ್ಕೆ ಚಾಲನೆ ನೀಡಲಾಯಿತು.

Advertisement

10 ದಿನ ನಡೆಯಲಿರುವ ಉತ್ಸವದಲ್ಲಿ ಅಹೋರಾತ್ರಿ ಶ್ರೀರಾಮ ಜಯರಾಮ ಜಯ ಜಯ ರಾಮ ಅಖಂಡ ರಾಮನಾಮ ಸಂಕೀರ್ತನೆ ನಡೆಯಲಿದೆ. ಮಾ. 28 ರಂದು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ಶಾಖೆಯ ಕಾರ್ಯಾಧ್ಯಕ್ಷ ಗೋವಿಂದ ಭಟ್‌ ಅವರ ವತಿಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ರಾಮ ಸೇವಕ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ, ವಿಭಾಗದ ಸದಸ್ಯರು ಪಾಲ್ಗೊಂಡಿದ್ದರು. ಸಂಜೆ ಧಾರ್ಮಿಕ ಕಾರ್ಯಕ್ರಮವಾಗಿ ಅಷ್ಟಾವಧಾನ ಸಂಗೀತ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. 

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಾ. 28ರಂದು ಸಂಜೆ ಕಿರಣ್‌ ಕಾಮತ್‌ ಅವರಿಂದ ಸಂಗೀತ, ರುಚಿತಾ ಮತ್ತು ರಕ್ಷಿತಾ ಭಟ್‌ ಅವರಿಂದ ನೃತ್ಯ ವೈವಿಧ್ಯ, ಮಾ. 29ರಂದು ಮುಕುಂದ್‌ ಪೈ ಅವರಿಂದ ಸಂಗೀತ, ಧನಶ್ರೀ ಪೈ ಅವರಿಂದ ನೃತ್ಯ ವೈಭವ, ಮಾ. 30ರಂದು ಯು. ಪದ್ಮನಾಭ ಪೈ ಅವರಿಂದ ಸಂಗೀತ, ಧನ್ವಿ ಪ್ರಭು ಅವರಿಂದ ನೃತ್ಯ ವೈವಿಧ್ಯ ನಡೆಯಿತು. ಹಿಮ್ಮೇಳದಲ್ಲಿ ಯು. ಪಿ. ಪೈ, ಜಿ. ಬಿ. ಕಾಮತ್‌ ಅವರು ಸಹಕರಿಸಿದರು. ಜಿಎಸ್‌ಬಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ  ಎನ್‌. ಎನ್‌. ಪಾಲ್‌ ಅವರು ಕಲಾವಿದರನ್ನು ಸಮ್ಮಾನಿಸಿ ಗೌರವಿಸಿದರು.

ಉತ್ಸವದುದ್ದಕ್ಕೂ  ಪ್ರತಿದಿನ ಮುಂಜಾನೆ ಅಭಿಷೇಕ, ನೈವೇದ್ಯ ಪೂಜೆ, ಮಹಾಮಂಗಳಾರತಿ, ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ಸಂಜೆ 6.30ರಿಂದ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ರಾತ್ರಿ ಪೂಜೆ, ಆರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಾ. 31ರಂದು ಗೌತಮಿ ಆಚಾರ್ಯ ಮತ್ತು ಶಿವಾನಿ ಗಾಯೊ¤ಂಡೆ ಅವರಿಂದ ಸಂಗೀತ ಹಾಗೂ ತನಿಷಾ ಭಂಡಾರRರ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎ. 1ರಂದು ಬಾಲಚಂದ್ರ ಪ್ರಭು ಅವರಿಂದ ಸಂಗೀತ, ಸ್ವಾಹ ಮತ್ತು ಸ್ವಾದಾ ಭಟ್‌ ಅವರಿಂದ ನೃತ್ಯ, ಎ. 2ರಂದು ಅಮೃತಾ ಆರ್‌. ಕಾಮತ್‌ ಅವರಿಂದ ಸಂಗೀತ, ಸಹನಾ ನಾಯಕ್‌ ಮತ್ತು ಶಾಲಕಾ ಕಾಮತ್‌ ಅವರಿಂದ ನೃತ್ಯ, ಎ. 3ರಂದು ಶ್ರೀನಿವಾಸ ಮತ್ತು ಬ್ರಾಹ್ಮಿ ಶೆಣೈ ಅವರಿಂದ ಸಂಗೀತ, ಸ್ಮೃತಿ ಪೈ ಅವರಿಂದ ನೃತ್ಯ, ಎ. 4ರಂದು ಯೋಗೇಶ್‌ ಮತ್ತು ಪ್ರಕಾಶ್‌ ಭಟ್‌ ಅವರಿಂದ ಸಂಗೀತ, ತನಿಷಾ ಭಟ್‌ ಅವರಿಂದ ನೃತ್ಯ ವೈವಿಧ್ಯ ಹಾಗೂ ಎ. 5ರಂದು ರಾಮಸೇವಾ ಸಂಘ ವಡಾಲದವರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂದಿರದ ಕಾರ್ಯಾಧ್ಯಕ್ಷ ಗೋವಿಂದ ಎಸ್‌. ಭಟ್‌, ಗೌರವ ಕಾರ್ಯದರ್ಶಿ ಉಲ್ಲಾಸ್‌ ಕಾಮತ್‌, ಕಾರ್ಯದರ್ಶಿ ಅಮೋಲ್‌ ವಿ. ಪೈ, ಕೋಶಾಧಿಕಾರಿ ಶಾಂತಾರಾಮ್‌ ಎ. ಭಟ್‌ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ನೇತೃತ್ವದಲ್ಲಿ ಉತ್ಸವವು ಜರಗಲಿದ್ದು, ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡು ಸಹಕರಿಸುವಂತೆ ಇದೇ ಸಂದರ್ಭ ತಿಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next