ನವದೆಹಲಿ: ಅಯೋಧ್ಯೆಯ ರಾಮ್ ದೇವಸ್ಥಾನ ಟ್ರಸ್ಟ್ ರಾಮಮಂದಿರದ ಭೂಮಿ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ(ಜೂನ್ 16) ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ
ನಂಬಿಕೆಯ ಅವಕಾಶದಲ್ಲಿ ದ್ರೋಹ ಎಸಗುವುದು ಕೋಟ್ಯಂತರ ಭಾರತೀಯರ ಮೇಲಿನ ನಂಬಿಕೆಗೆ ನೀಡಿದ ಆಘಾತ ಮತ್ತು ದೊಡ್ಡ ಪಾಪಕೃತ್ಯವಾಗಿದೆ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಫೇಸ್ ಬುಕ್ ಪುಟದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಶ್ರೀರಾಮ್ ಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ರಚಿಸಿಲ್ಲ. ಅಲ್ಲದೇ ಅವರಿಗೆ ಆಪ್ತರಾಗಿರುವ ಜನರನ್ನೇ ಟ್ರಸ್ಟಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಶ್ರೀರಾಮನ ಹೆಸರಿನಲ್ಲಿ ಭಕ್ತರಿಂದ ಸಂಗ್ರಹಿಸುವ ಒಂದೂ ಪೈಸೆಯನ್ನೂ ನಂಬಿಕೆಗೆ ಸಂಬಂಧಿಸಿದ ಕಾರ್ಯದಲ್ಲಿ ಬಳಸಿಕೊಳ್ಳಬೇಕಾಗಿದೆಯೇ ಹೊರತು, ಯಾವುದೇ ಹಗರಣಕ್ಕೆ ಬಳಸಿಕೊಳ್ಳಬಾರದು. ಇದು ಪ್ರಧಾನಿ ನರೇಂದ್ರ ಮೋದಿಯವರ ಜವಾಬ್ದಾರಿಯಾಗಿದೆ ಎಂದು ಪ್ರಿಯಾಂಕಾ ಅಭಿಪ್ರಾಯವ್ಯಕ್ತಡಿಸಿದ್ದಾರೆ.