Advertisement

Ram Temple: ಶ್ರೀರಾಮ ಪ್ರಾಣಪ್ರತಿಷ್ಠೆಗೆ ಕನ್ನಡ ನಾಡಿನ ಪುರೋಹಿತ

11:10 AM Jan 19, 2024 | Team Udayavani |

ಸುಳ್ಯ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಕ್ರಿಯೆ ಯಲ್ಲಿ ಭಾಗಿಯಾಗಲು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದಾರೆ.

Advertisement

ಜಾಲ್ಸೂರು ಗ್ರಾಮದ ಕೆಮನಬಳ್ಳಿ ಮೂಲದ ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ಕೆ. ಗಣಪತಿ ಭಟ್‌ ಈ ಅಪೂರ್ವ ಅವಕಾಶ ಪಡೆದುಕೊಂಡವರು.

101 ಮಂದಿಯಲ್ಲಿ ಓರ್ವ ಕನ್ನಡಿಗ ಲಭ್ಯ ಮಾಹಿತಿ ಪ್ರಕಾರ ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನೇಮಕವಾಗಿರುವ 101 ಮಂದಿ ಪ್ರಧಾನ ಪುರೋಹಿತರಲ್ಲಿ ಗಣಪತಿ ಭಟ್‌ ಒಬ್ಬರು. ಅವರ ನೇತೃತ್ವದ ತಂಡದಲ್ಲಿ 40 ಮಂದಿ ಆರ್ಚಕರು ಇರಲಿದ್ದಾರೆ. ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪುರೋಹಿತರು.

ಸ್ಥಳೀಯವಾಗಿ ಆರಂಭಿಕ ಶಿಕ್ಷಣವನ್ನು ಪೂರೈಸಿ 1978ರಲ್ಲಿ ಕಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣ
ವನ್ನು ಪಡೆದರು. ಬಳಿಕ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಲ್ಲಿ ಶಾಸ್ತ್ರ ಆಧ್ಯಯನ ವಿಷಯದಲ್ಲಿ ಎಂ.ಎ., ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪಿಎಚ್‌ಡಿ ಪಡೆದರು. ಮದ್ರಾಸ್‌ ವಿ.ವಿ.ಯಲ್ಲಿ ಸಂಸ್ಕತ ವೇದಾಂತ ಮತ್ತು ನ್ಯಾಯಶಾಸ್ತ್ರ ವಿಷಯದಲ್ಲಿ ಮತ್ತೊಂದು ಎಂಎ ಪದವಿ ಪೂರೈಸಿದ್ದಾರೆ.

ಕಾಲಡಿಯ ಶಂಕರಾಚಾರ್ಯ ವಿ.ವಿ.ಯಲ್ಲಿ 8 ವರ್ಷ ಉಪನ್ಯಾಸಕರಾಗಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪ್ರೊಫೆಸರ್‌, ಪರೀಕ್ಷಾಂಗ ಕುಲಸಚಿವ, ಪ್ರಸ್ತುತ ಗುರುಕುಲದ ನಿರ್ದೇಶಕರಾಗಿದ್ದಾರೆ. ಕೇರಳದ ಎಲ್ಲ ವಿಶ್ವ ವಿದ್ಯಾನಿಲಯಗಳ ಪರೀಕ್ಷಾಧಿಕಾರಿಯಾಗಿ, ದೇಶದ ವಿವಿಧ 18 ವಿ.ವಿ.ಗಳ ಪಿಎಚ್‌.ಡಿ ಮೌಲ್ಯಮಾಪಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರೀ ಮತ್ತು ಲಕ್ಷ್ಮೀಕಾಂತ ದೀಕ್ಷಿತರ ಮೂಲಕ ರಾಮ ಜನ್ಮಭೂಮಿಗೆ ಕಾಲಿರಿಸುವ ಅವಕಾಶ ಲಭಿಸಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಧಾರ್ಮಿಕ ವಿಧಿ ನೆರವೇರಿಸಲು ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪವಿತ್ರ ಕ್ಷಣ.
●ಡಾ| ಕೆ. ಗಣಪತಿ ಭಟ್‌

*ದಯಾನಂದ ಕಲ್ನಾರು

ಸೀತೆಯ ತವರಿನಲ್ಲಿ ಸಡಗರ ಆರಂಭ
ಕಠ್ಮಂಡು: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಭಾರತ ಮಾತ್ರವಲ್ಲದೇ, ನೆರೆಯ ನೇಪಾಲವೂ ಕಾತರದಿಂದ ಕಾಯುತ್ತಿದ್ದು, ಸಂಭ್ರಮ ಆಚರಿಸಲು ನೇಪಾಲಿಗರು ಸಜ್ಜುಗೊಂಡಿದ್ದಾರೆ. ನೇಪಾಲದ ಜನಕಪುರ ಸೀತಾದೇವಿಯ ತವರು ಎಂಬ ಪ್ರತೀತಿ ಹೊಂದಿರುವ ಹಿನ್ನೆಲೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ನೇಪಾಲದ ಹಿಂದೂಗಳು ಸಂಭ್ರಮಿಸುತ್ತಿದ್ದಾರೆ.

ವಿಶೇಷವಾಗಿ ಹಿಂದೂಗಳು ಹೆಚ್ಚಿರುವ ಮಾಧೇಶ ಪ್ರಾಂತ್ಯದಲ್ಲಿ ಹಬ್ಬದ ಕಳೆ ಶುರುವಾಗಿದ್ದು ಪ್ರಾಂತದಲ್ಲಿರುವ ರಸ್ತೆಗಳನ್ನೆಲ್ಲ ದೀಪಗಳು, ಫ್ಲೆಕ್ಸ್‌ಗಳನ್ನು ಅಳವಡಿಸಿ ಅಲಂಕರಿಸಲಾಗುತ್ತಿದೆ. ಈಗಾಗಲೇ ಅಯೋಧ್ಯೆಗೆ ನೇಪಾಲದಿಂದ ವಸ್ತ್ರ, ಒಡವೆ ಸೇರಿದಂತೆ ಹಲವು ಉಡುಗೊರೆಗಳನ್ನೂ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next