Advertisement

ಇನ್ನೂ ಎಷ್ಟು ಕಾಲ ‘ಮಂದಿರ್‌ ವಹೀಂ ಬನಾಯೇಂಗೇ?’ಉದ್ಧವ್‌ ಪ್ರಶ್ನೆ

06:51 PM Nov 22, 2018 | Team Udayavani |

ಮುಂಬಯಿ : ”ಪ್ರತೀ ಸಲ ಚುನಾವಣೆ ಬಂದಾಗ ರಾಮ ಮಂದಿರ ವಿಷಯವನ್ನು ಎತ್ತಲಾಗುತ್ತದೆ. ರಾಮ ಮಂದಿರವನ್ನು ಅಲ್ಲೇ ಕಟ್ಟುವೆವು ಎಂದು ಇನ್ನೂ ಎಷ್ಟು ಕಾಲ ನೀವು ಜನರನ್ನು ಮೂರ್ಖರನ್ನಾಗಿ ಮಾಡಬಹುದು ?” ಎಂದು ಶಿವ ಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಪ್ರಶ್ನಿಸಿದ್ದಾರೆ.

Advertisement

”ನ.25ರಂದು ನಾನು ಅಯೋಧ್ಯೆಗೆ ಭೇಟಿ ನೀಡಿದಾಗ ಜನರಿಗೆ ಇನ್ನೂ ಎಷ್ಟು ಕಾಲ ಮೂರ್ಖರನ್ನಾಗಿ ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರವನ್ನು ಕೇಳುವೆ” ಎಂದು ಠಾಕ್ರೆ ತನ್ನ ಅಯೋಧ್ಯೆ ಭೇಟಿಗೆ ಮುನ್ನ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

”ಇದೇ ಭಾನುವಾರ ನಾನು ಅಯೋಧ್ಯೆಗೆ ಭೇಟಿ ನೀಡುವ ಸಂದರ್ಭದಲ್ಲಿ “ಮರಾಠ ಸೇನಾನಿ ದೊರೆ ಛತ್ರಪತಿ ಶಿವಾಜಿ ಮಹಾರಾಜ್‌ ಜನಿಸಿದ್ದ ಪುಣೆ ಜಿಲ್ಲೆಯ ಜುನ್ನಾರ್‌ ತೆಹಶೀಲ್‌ ನಲ್ಲಿರುವ ಶಿವನೇರಿ ಕೋಟೆಯ ಮಣ್ಣನ್ನು ಸಂಗ್ರಹಿಸಿ ಒಯ್ಯುತ್ತೇನೆ” ಎಂದು ಠಾಕ್ರೆ ಹೇಳಿದರು. 

”ಶಿವನೇರಿ ಕೋಟೆಯ ಮಣ್ಣಿನಲ್ಲಿ ಎಲ್ಲ  ಹಿಂದುಗಳ ಭಾವನೆಗಳು ಅಂತರ್ಗತವಾಗಿವೆ. ಈ ಮಣ್ಣನ್ನು ಅಯೋಧ್ಯೆಗೆ ಒಯ್ಯುವ ಮೂಲಕ ಅಲ್ಲಿ ರಾಮ ಮಂದಿ ನಿರ್ಮಾಣ ಪ್ರಕ್ರಿಯೆಗೆ ವೇಗ ದೊರೆಯುವುದೆಂದು ಹಾರೈಸುತ್ತೇನೆ” ಎಂದು ಠಾಕ್ರೆ ಹೇಳಿದರು. 

Advertisement

ಅಯೋಧ್ಯೆಯಲ್ಲಿನ ನಿಮ್ಮ ಪ್ರಸ್ತಾವಿತ ರಾಲಿಗೆ ಅನುಮತಿ ದೊರಕುವುದೇ ಎಂದು ಕೇಳಲಾದ ಪ್ರಶ್ನೆಗೆ ಠಾಕ್ರೆ, “ರಾಲಿಯಲ್ಲಿ ನಾವು ಈ ಮೊದಲು ಪ್ರಕಟಿಸಿದಂತೆ, ನಮ್ಮ ಮೂಲ ಕಾರ್ಯಕ್ರಮವು ಅಯೋಧ್ಯೆ ಭೇಟಿಯನ್ನು ಒಳಗೊಂಡಿದ್ದು ಭಗವಾನ್‌ ಶ್ರೀ ರಾಮನ ಆಶೀರ್ವಾದವನ್ನು ಕೋರುವ ಉದ್ದೇಶ ಹೊಂದಿರುತ್ತದೆ” ಎಂದು ಹೇಳಿದರು. 

“ಅಯೋಧ್ಯೆಯಲ್ಲಿನ ಸಾಧು ಸಂತರು ನಾನು ಅಲ್ಲಿಗೆ ಭೇಟಿ ನೀಡಬೇಕೆಂದು ಬಯಸಿದ್ದಾರೆ. ಆ ಪ್ರಕಾರ ನಾನು ಅಲ್ಲಿಗೆ ಹೋಗಿ ಅವರ ಆಶೀರ್ವಾದ ಪಡೆದು ಸರಯೂ ನದೀ ತೀರದಲ್ಲಿ ನಡೆಯುವ ಸಂಜೆ ವೇಳೆಯ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗುವೆ’ ಎಂದು ಠಾಕ್ರೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next