Advertisement
ಬಾರಾಬಂಕಿಯಲ್ಲಿ ಆಯೋಜಿಸಲಾಗಿದ್ದ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ಅಸ್ಥಿರತೆಯನ್ನು ಸೃಷ್ಟಿಸು ವುದಕ್ಕಾಗಿ ಐಎನ್‌ಡಿಐಎ ಪಕ್ಷಗಳು ಕಚ್ಚಾಡುತ್ತಿವೆ. ಚುನಾವಣೆಯ ಬಳಿಕ ಈ ಒಕ್ಕೂಟವು ಇಸ್ಪೀಟ್ ಎಲೆಯಂತೆ ಉರುಳಲಿವೆ ಎಂದು ಹೇಳಿದರು.
Related Articles
ಅಖೀಲೇಶ್ ವಿರುದ್ಧ ಹರಿಹಾಯ್ದ ಮೋದಿ, ಸಮಾಜವಾದಿ ರಾಜಕುಮಾರ (ಅಖೀಲೇಶ್) ನಿಗೆ ಹೊಸ ಬುವಾ(ಸೋದರತ್ತೆ) ಸಿಕ್ಕಿದ್ದಾರೆ. ಈ ಸೋದರತ್ತೆ ಪಶ್ಚಿಮ ಬಂಗಾಲದಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಈ ಮೊದಲು ಬಿಎಸ್‌ಪಿ ನಾಯಕಿ ಮಾಯವತಿಯನ್ನು ಅಖೀಲೇಶ್ ಯಾದವ್ ಅವರು ಬುವಾ ಎಂದು ಕರೆಯುತ್ತಿದ್ದರು.
Advertisement
ಆಗಲೇ ಕಾಂಗ್ರೆಸ್ ವಿಸರ್ಜನೆಯಾಗಿದ್ದರೆ ಒಳ್ಳೆಯದಿತ್ತು: ಮೋದಿಮುಂಬಯಿ: ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ಅಂದ ರೆ 1947ರಲ್ಲೇ ವಿಸರ್ಜನೆಗೊಂಡಿದ್ದರೆ ಭಾರತ ಈಗ ಐದು ದಶಕಗಳಷ್ಟು ಮುಂದೆ ಇರುತ್ತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ಚುನಾವಣೆ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಭಾರತೀಯರ ಸಾಮರ್ಥ್ಯದ ಮೇಲೆ ವಿಶ್ವಾಸವಿಡದ ಸರಕಾರ ಅಸಮರ್ಥ. ಭಾರತೀಯರು ಸೋಮಾರಿಗಳೆಂದು ಕೆಂಪುಕೋಟೆಯ ಮೇಲೆ ಪ್ರಧಾನ ಮಂತ್ರಿಗಳು ಹೇಳಿರುವುದನ್ನು ನೋಡಿದ್ದೇನೆ. ಗಾಂಧೀಜಿಯವರ ನೇತೃತ್ವದಲ್ಲಿ ಅಂದೇ ಕಾಂಗ್ರೆಸ್ ವಿಸರ್ಜನೆಗೊಂಡಿದ್ದರೆ, ಭಾರತವು ಈಗ ಇರುವುದಕ್ಕಿಂತ 5 ದಶಕಗಳಷ್ಟು ಮುಂದೆ ಇರುತ್ತಿತ್ತು ಎಂದಿದ್ದಾರೆ. ಜತೆಗೆ, “2047ಕ್ಕೆ ಮೋದಿ 24×7′ ಎನ್ನುವುದು ಭಾರತದ ಅಭಿವೃದ್ಧಿಯ ಮಂತ್ರವಾಗಿದೆ ಎಂದು ಮೋದಿ ಹೇಳಿದ್ದಾರೆ.