Advertisement
ಚಾಮರಾಜನಗರ ಪಟ್ಟಣ ವನ್ನೇ ತೆಗೆದುಕೊಂಡರೆ, ಅಗ್ರ ಹಾರದ ಬೀದಿಯ ಪಟ್ಟಾಭಿ ರಾಮಮಂದಿರ, ಶಂಕರಪುರ ರಾಮಮಂದಿರ ಮಾತ್ರವೇ ಅಲ್ಲದೇ, ಬಣಜಿಗರ ಬೀದಿ, ಡಾ. ಅಂಬೇಡ್ಕರ್ ಬೀದಿ, ಕುರುಬ ಸಮಾಜದ ಬೀದಿ, ಕುಂಬಾರ ಸಮಾಜದ ಬೀದಿ ಮುಂತಾದೆಡೆ ರಾಮ ಮಂದಿ ರಗಳಿವೆ. ಹೀಗೆಯೇ ಅನೇಕ ಗ್ರಾಮಗಳಲ್ಲಿ ರಾಮ ಮಂದಿರಗಳು ಅಸ್ತಿತ್ವ ಹೊಂದಿವೆ. ಇವುಗಳಲ್ಲಿ ಕೆಲವು ಪ್ರಾಚೀನವಾದವು. ರಾಮ ಭಾರತೀಯರ ಸಾಕ್ಷಿ ಪ್ರಜ್ಞೆಯಲ್ಲಿ ಅಂತರ್ಗತ ನಾಗಿ ದ್ದಾನೆ. ಉತ್ತರ ಭಾರತ ದಲ್ಲಿ ಜನರು ಪರಸ್ಪರ ಎದುರಾದಾಗ ನಮಸ್ಕಾರವನ್ನು ರಾಮ್ ರಾಮ್ ಎಂದೇ ಹೇಳುತ್ತಾರೆ.
Related Articles
Advertisement
ಎಪ್ಪತ್ತೈದು ವರ್ಷಗಳ ಇತಿಹಾಸದ ಚಾ.ಜನಗರ ಪಟ್ಟಾಭಿರಾಮಮಂದಿರ : ಚಾಮರಾಜನಗರ ಪಟ್ಟಣದ ಅಗ್ರಹಾರದ ಬೀದಿಯಲ್ಲಿ ಇರುವ ಪಟ್ಟಾಭಿರಾಮ ಮಂದಿರ ಪ್ರಾಚೀನವಾದುದು ಭವ್ಯ ಇತಿಹಾಸ ಹೊಂದಿರುವಂಥದು. ಇದನ್ನು 1943 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಪೂಜೆಗೊಳ್ಳುತ್ತಿರುವುದು ಕೋದಂಡರಾಮ ಅಲ್ಲ, ಪ್ರಸನ್ನರಾಮ ಅಲ್ಲ, ಸೀತಾರಾಮ ಅಲ್ಲ, ಜಾನಕಿರಾಮ ಅಲ್ಲ, ಪಟ್ಟಾಭಿರಾಮ. ಪಟ್ಟಾಭಿರಾಮ ಎಂದರೆ ಪಟ್ಟಾಭಿಷೇಕಕ್ಕೆ ಕುಳಿತ ರಾಮ. ಈ ರಾಮಮಂದಿರದ ಕಲ್ಪನೆ ಮಾಡಿ, ಇದನ್ನು ಕಟ್ಟಿದ ಹಿರಿಯರು ತಮ್ಮ ಪೂಜೆಗೆ, ಪಟ್ಟಾಭಿರಾಮನನ್ನೇ ಆಯ್ಕೆ ಮಾಡಿಕೊಂಡರು. ಪಟ್ಟಾಭಿರಾಮ, ಕುಟುಂಬ ವತ್ಸ, ಆತನ ಪಕ್ಕದಲ್ಲಿ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಇದ್ದಾರೆ. ರಾಮನ ಪದತಲದಲ್ಲಿ ಆಂಜನೇಯ ಇದ್ದಾನೆ. ಚಾಮರಾಜನಗರದ ಪಟ್ಟಾಭಿ ರಾಮಮಂದಿರ ಕ್ಕೆ ಸ್ವಂತಕಟ್ಟಡ ಕಟ್ಟುವ ಯೋಜನೆ ರೂಪು ಗೊಂಡಿತು. ಅದಕ್ಕಾಗಿ ಹಣ ಕೂಡಿಸಲು ಆ ಕಾಲದ ಯುವಕರು ಬೆನಿಫಿಟ್ ನಾಟಕ ಮಾಡಿ ಹಣ ಕೂಡಿಸಲು ನಿರ್ಧರಿಸಿದರು. ದಿ.ಎ. ವಾಸುದೇವರಾವ್ ,ಬಿ. ಸೀನಪ್ಪ ಅವರ ನೇತೃತ್ವದಲ್ಲಿ ಪ್ರಹ್ಲಾದಚರಿತ್ರೆ, ಧ್ರುವಚರಿತ್ರೆ, ಬುದೊœàದಯ, ಕಿಸಾಗೌತಮಿ ನಾಟಕಗಳನ್ನು ಪ್ರದರ್ಶಿಸಿ ಹಣ ಸಂಗ್ರಹಿಸಲಾಯಿತು. ಹಣ ಸಾಲದೇ ಬಂದಾಗಲೂ ಮತ್ತೆ ಎರಡನೆಯ ಬಾರಿಯೂ ನಾಟಕ ಪ್ರದರ್ಶಿಸಿದರೆಂದು ತಿಳಿದು ಬಂದಿದೆ.
ಚಾಮರಾಜನಗರ, ನಂಜನಗೂಡು, ಮೈಸೂರು, ಮಾಲೂರು ಕಾಗಲವಾಡಿ, ತಿ. ನರಸೀಪುರಗಳಲ್ಲಿ ನಾಟಕಗಳನ್ನು ರಾಮಮಂದಿರ ನಿರ್ಮಿಸಲು ಪ್ರದರ್ಶಿಸಲಾಯಿತು. ಈ ಹಣದಲ್ಲಿ ಈಗಿರುವ ಕಟ್ಟಡ ನಿರ್ಮಿಸಲಾಯಿತು.
ಸಂಗೀತೋತ್ಸವ: ಈ ರಾಮಮಂದಿರದಲ್ಲಿ ರಾಮನವಮಿ ಸಂದರ್ಭದಲ್ಲಿ ಸುಮಾರು 15 ದಿವಸ ರಾಮೋತ್ಸವದ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಅರುವತ್ತು ಎಪ್ಪತ್ತರ ದಶಕದಲ್ಲಿ ದಿ.ಕೃಷ್ಣಸ್ವಾಮಿ ನಂತರ ಟಿ. ನಾಗರಾಜ್ ಅವರ ನೇತೃತ್ವದಲ್ಲಿ ಭರಪೂರ ಸಂಗೀತೋತ್ಸವ ನಡೆಯುತ್ತಿತ್ತು. ಆ ಕಾಲದ ಕರ್ನಾಟಕದ ಶ್ರೇಷ್ಠ ಸಂಗೀತ ವಿದ್ವಾಂಸರು ಇಲ್ಲಿ ಕಚೇರಿ ನಡೆಸಿದ್ದಾರೆ. ಟಿ. ಚೌಡಯ್ಯ ,ಲಾಲಗುಡಿ ಜಯರಾಮ್ ಅವರಂತಹ್ ಕಲಾವಿದರು ಒಂದು ದಿವಸ ಅವರ ಮಟ್ಟದ ಗಾಯಕರಿಗೆ ಪಕ್ವವಾದ್ಯ ಮಾರನೆಯ ದಿವಸ ಸೋಲೋ ಕಚೇರಿ ನಡೆಸಿಕೊಡುತ್ತಿದ್ದರು.
ಹೊನ್ನಪ್ಪ ಭಾಗವತರ ಕಚೇರಿ ವೀಕ್ಷಿಸಿದ ಡಾ.ರಾಜ್‌ಕುಮಾರ್ : ಪಟ್ಟಾಭಿರಾಮಮಂದಿರದ ಸಂಗೀತ ಕಾರ್ಯಕ್ರಮದಲ್ಲಿ ಸಿ.ಹೊನ್ನಪ್ಪಭಾಗವತರ ಕಚೇರಿ ರಾತ್ರಿ ವೇಳೆ ನಡೆಯುತ್ತಿತ್ತು. ಬೆಂಗಳೂರಿನಿಂದ ಗಾಜನೂರಿಗೆ ಚಾಮರಾಜನಗರದ ಮಾರ್ಗ ಹೋಗುತ್ತಿದ್ದ ರಾಜ್‌ಕುಮಾರ್ ಅವರಿಗೆ ಈ ಕಚೇರಿ ನೋಡಬೇಕೆನಿಸಿ, ಯಾರಿಗೂ ಗೊತ್ತಾಗದಂತೆ ತಲೆ ಮೇಲೆ ಪೇಟ ಕಟ್ಟಿಕೊಂಡು, ಮುಸುಕು ಹೊದ್ದುಕೊಂಡು ನೋಡುತ್ತಿದ್ದರು. ಆ ಸಂದರ್ಭದಲ್ಲಿ ಯಾರೋ ಬೆಂಕಿ ಕಡ್ಡಿ ಗೀರಿದಾಗ ರಾಜ್‌ಕುಮಾರ್ ಮುಖ ಕಂಡು, ರಾಜ್‌ಕುಮಾರ್ ರಾಜ್‌ಕುಮಾರ್ ಎಂದು ಕೂಗಿಕೊಂಡರು. ಆಗ ರಾಜ್‌ಕುಮಾರ್ ಕಾರ್ಯಕ್ರಮ ಅಸ್ತವ್ಯಸ್ತವಾಗಬಾರದೆಂದು ಹೇಗೋ ನುಸುಳಿಕೊಂಡು ಕಾರುಹತ್ತಿದರೆಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
– ಕೆ.ಎಸ್. ಬನಶಂಕರ ಆರಾಧ್ಯ