Advertisement
ಬಿಹಾರದ ಸೀತಾಮಡಿಯಲ್ಲಿ ಗುರುವಾರ ಚುನಾವಣ ಪ್ರಚಾರ ರ್ಯಾಲಿಯನ್ನು ಉದ್ದೇ ಶಿಸಿ ಮಾತನಾಡಿದ ಅವರು, ನಾವು ವೋಟ್ ಬ್ಯಾಂಕ್‌ಗೆ ಹೆದ ರುವುದಿಲ್ಲ. ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಿದರು. ಈಗ ಸೀತಾಮಾತೆಯ ಜನ್ಮಸ್ಥಳವಾದ ಸೀತಾಮಡಿಯಲ್ಲಿ ಸೀತಾ ದೇಗುಲ ನಿರ್ಮಾಣ ಮಾಡುವ ಕೆಲಸ ಬಾಕಿಯಿದೆ. ರಾಮಮಂದಿರದಿಂದ ದೂರ ಉಳಿದವರಿಂದ ಇದು ಅಸಾಧ್ಯ. ಅದು ಮೋದಿ ಅವರಿಂದ ಮಾತ್ರ ಸಾಧ್ಯ. ಸೀತಾಮಾತೆಯ ಜನ್ಮಸ್ಥಳ ಪುನೌರ ಧಾಮ ವನ್ನು ಅಂತಾರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡಲು ಎನ್‌ಡಿಎ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ನಿತೀಶ್ ಕುಮಾರ್ ಸರಕಾರ 72.47 ಕೋಟಿ ರೂ. ಮೀಸಲಿಟ್ಟಿದೆ ಎಂದರು.
ಮಧುಬನಿಯಲ್ಲಿ ಮಾತನಾಡಿದ ಅಮಿತ್ ಶಾ, ವಿಪಕ್ಷಗಳ ಒಕ್ಕೂಟವಾದ ಐಎನ್‌ಡಿಐಎ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ವರ್ಷಕ್ಕೊಬ್ಬರು ಪ್ರಧಾನಿಯಾಗಲಿದ್ದಾರೆ. ಮಮತಾ ಬ್ಯಾನರ್ಜಿ, ಸ್ಟಾಲಿನ್, ಲಾಲು ಪ್ರಸಾದ್ ಇವರಲ್ಲಿ ಯಾರು ಪ್ರಧಾನಿಯಾಗಬಹುದು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದನ್ನು ಭಾರತಕ್ಕೆ ಸೇರಿಸಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿದಾಗ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದರು. ಈ 5 ವರ್ಷಗಳ ಅವಧಿಯಲ್ಲಿ ಏನೂ ಆಗಲಿಲ್ಲ ಎಂದರು.