Advertisement

Ram Mandir; ನಾನು ಈ ಭೂಮಿ ಮೇಲಿನ ಅತ್ಯಂತ ಅದೃಷ್ಟವಂತ..: ಶಿಲ್ಪಿ ಅರುಣ್ ಯೋಗಿರಾಜ್

02:28 PM Jan 22, 2024 | Team Udayavani |

ಅಯೋಧ್ಯೆ: “ಬಹುಶಃ ಇಂದು ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟ ವ್ಯಕ್ತಿ” ಹೀಗೆಂದು ಹೆಮ್ಮೆಯಿಂದ ಹೇಳಿದವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ರಾಮಲಲ್ಲಾ ಮೂರ್ತಿಯನ್ನು ರಚಿಸಿದ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್.

Advertisement

“ನಾನು ಈಗ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ರಾಮಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗಿದೆ. ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ” ಎಂದು ಅರುಣ್ ಯೋಗಿರಾಜ್ ಸುದ್ದಿ ಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಿತು. 11 ದಿನಗಳ ಕಟ್ಟುನಿಟ್ಟಾದ ಧಾರ್ಮಿಕ ವಿಧಿಗಳನ್ನು ಅನುಸರಿಸುತ್ತಿದ್ದ ಪ್ರಧಾನಿ ಮೋದಿ ಅವರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು.

ಗಣೇಶ್ವರ್ ದ್ರಾವಿಡ್, ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪೇಜಾವರ ವಿಶ್ವಪ್ರಸನ್ನ ತೀರ್ಥರು ಭಾಗಿಯಾಗಿದ್ದರು.

ಕಳೆದ ವಾರ ರಾಮ್ ಲಲ್ಲಾನ ಹೊಸ ವಿಗ್ರಹವನ್ನು ದೇವಾಲಯದ ಒಳಗೆ ಇರಿಸಲಾಗಿತ್ತು. ವಿಗ್ರಹವು ಕಮಲದ ಮೇಲೆ ನಿಂತಿರುವ ಐದು ವರ್ಷದ ರಾಮ ದೇವರನ್ನು ತೋರಿಸುತ್ತದೆ.

Advertisement

ಅರುಣ್ ಯೋಗಿರಾಜ್ ಅವರು ಕೃಷ್ಣ ಶಿಲೆಯಿಂದ ಕೆತ್ತಿದ 51 ಇಂಚಿನ ವಿಗ್ರಹವನ್ನು ಇಂದಿನ ಸಮಾರಂಭದವರಗೆ ಬಟ್ಟೆಯಿಂದ ಮುಚ್ಚಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next