ಪಾಟ್ನಾ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮಮಂದಿರ ಧ್ವಂಸಗೊಳಿಸುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಕೈವಾಡ ಶಂಕೆಯ ಮೇಲೆ, ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ಮೂವರು ಸದಸ್ಯರನ್ನು ರಾಷ್ಟ್ರೀಯಾ ತನಿಖಾ ಸಂಸ್ಥೆ(ಎನ್‌ಐಎ) ಶನಿವಾರ ಬಂಧಿಸಿದೆ.
ಬಿಹಾರದ ಮೋತಿವಾರಿ ಜಿಲ್ಲೆಯ ಕೌನ್ವಾನ್ ಎನ್ನುವ ಗ್ರಾಮದಲ್ಲಿ ಬಿಹಾರ ಪೊಲೀಸರ ಜತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಎನ್‌ಐಎ ಅಧಿಕಾರಿಗಳು, ಮೂವರು ಶಂಕಿತರನ್ನು ಬಂಧಿಸಿದೆ. ಬಂಧಿತರನ್ನು ಇನ್ನಿತರ ತನಿಖಾ ಸಂಸ್ಥೆಗಳು ಕೂಡ ವಿಚಾರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೇಪಾಳದಿಂದ ಅಯೋಧ್ಯೆಗೆ ಸಾಲಿಗ್ರಾಮ ಶಿಲೆ ಸಾಗಿಸುತ್ತಿದ್ದ ಯಾತ್ರೆ ಮೋತಿವಾರಿ ತಲುಪಿದ ವೇಳೆ ಉಸ್ಮಾನ್ ಎನ್ನುವ ವ್ಯಕ್ತಿ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಅದರಲ್ಲಿ ಮಂದಿರವನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಸಂಬಂಧಿಸಿದ ಬಿರುಸಿನ ತನಿಖೆ ಆರಂಭಗೊಂಡಿದೆ.