Advertisement

ಇತಿಹಾಸ ಸೃಷ್ಟಿಸಲಿದೆ ರಾಮಮಂದಿರ; ಅಯೋಧ್ಯೆಯಿಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನುಭವ

03:01 AM Aug 06, 2020 | Hari Prasad |

ಅಯೋಧ್ಯೆ: ರಾಮಜನ್ಮಭೂಮಿ ಹೋರಾಟ ಆರಂಭವಾದಾಗ ನಾವಿನ್ನೂ ಹುಟ್ಟಿರಲಿಲ್ಲ.

Advertisement

ಆದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಡೆಯುವ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರ ಸುವರ್ಣಾಕ್ಷರ ಗಳಲ್ಲಿ ಬರೆದಿಡುವಂತಹ ದಿನ.

ಮಂಗಳವಾರ ರಾತ್ರಿ ಅಯೋಧ್ಯೆ ತಲುಪಿದ ನಮ್ಮನ್ನು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್‌ ಸ್ವಾಗತಿಸಿದರು.

ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ದತ್ತಾತ್ರೇಯ ಹೊಸಬಾಳೆ ಬಂದು ಮಾತನಾಡಿಸಿ ಉಪಚರಿಸಿದರು.

ಬುಧವಾರ ಬೆಳಗ್ಗೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳ ಜತೆಗೆ ರಾಮಲಲ್ಲಾನ ದರ್ಶನ ಅವಕಾಶ ಒದಗಿ ಬಂತು.

Advertisement

ದೇಶದ ಬಹು ಜನರ ಭಾವನೆಯಂತೆ ಮಂದಿರ ನಿರ್ಮಾಣ ಕಾರ್ಯಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆತಿದೆ.

ಒಂದಂತೂ ಸತ್ಯ, ಕೋವಿಡ್ 19 ಸಂದರ್ಭದಲ್ಲೂ ಶಂಕುಸ್ಥಾಪನೆ ಇಷ್ಟು ಚೆನ್ನಾಗಿ ಆಗಿರುವುದರಿಂದ ಮುಂದೆ ಮಂದಿರದ ಲೋಕಾರ್ಪಣೆ ಹೊಸ ಇತಿಹಾಸ ಸೃಷ್ಟಿಸುತ್ತದೆ.

ಇಡೀ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿತ್ತು. ಈ ವ್ಯವಸ್ಥೆಗಳನ್ನು ನೋಡಿಯೇ ಕಲಿಯುವುದು ಸಾಕಷ್ಟಿದೆ. ದೇಶದ ವಿವಿಧ ಭಾಗಗಳಿಂದ ಅನೇಕ ಸಾಧು, ಸಂತರು ಆಗಮಿಸಿದ್ದರೂ ಯಾರಿಗೂ ಸಮಸ್ಯೆ ಆಗಿಲ್ಲ.

ಮೊದಲ ಭೇಟಿಯಲ್ಲೇ ರಾಮಲಲ್ಲಾ ದರ್ಶನ ಸಂತಸ ತಂದಿದೆ.
– ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next