Advertisement

ಅ.17ರಿಂದ ‘ರಾಮಲೀಲಾ’ಶೋ

02:35 AM Sep 21, 2020 | Hari Prasad |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ‘ರಾಮಲೀಲಾ’ ಶೋ ಏರ್ಪಡಿಸಲಾಗಿದೆ.

Advertisement

ಅ.17- 25ರವರೆಗೆ ನಡೆಯುವ ಈ ಭಕ್ತಿಪೂರ್ಣ ನಾಟಕದಲ್ಲಿ ಪ್ರಸಿದ್ಧ ನಟ- ನಟಿಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಕಿರುತೆರೆ ಕಲಾವಿದರಾದ ಸೋನು ದಾಗರ್‌ ರಾಮನಾಗಿ, ಕವಿತಾ ಜೋಶಿ ಸೀತೆಯಾಗಿ ಗಮನ ಸೆಳೆಯಲಿದ್ದಾರೆ.

ವಿಂದು ದಾರಾ ಸಿಂಗ್‌ ಹನುಮಾನ್‌ ಪಾತ್ರದಲ್ಲಿ, ದಿಲ್ಲಿಯ ಬಿಜೆಪಿ ಸಂಸದ ಮನೋಜ್‌ ತಿವಾರಿ ಅಂಗದನಾಗಿ ನಟಿಸಲಿದ್ದಾರೆ.

ರಿತು ಶಿವಪುರಿ (ಕೈಕೇಯಿ), ಅಸರಾನಿ (ನಾರದ), ಶಹಬಾಜ್‌ ಖಾನ್‌ (ರಾವಣ), ರಾಕೇಶ್‌ ಬೇಡಿ (ವಿಭೀಷಣ), ರಾಕೇಶ್‌ ಪುರಿ (ನಿಷದರಾಜ), ಅವತಾರ್‌ ಗಿಲ್‌ (ಜನಕ) ಅವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಮಂದಿರ ನಿರ್ಮಾಣ ಜಾಗದಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಲಕ್ಷ್ಮಣ ಖೀಲಾದಲ್ಲಿ ‘ರಾಮಲೀಲಾ’ಗೆ ವೇದಿಕೆ ಸಿದ್ಧಗೊಂಡಿದೆ. ದಿಲ್ಲಿ ಮೂಲದ ಮೇರಿ ಮಾ ಫೌಂಡೇಶನ್‌ ಹಾಗೂ ಅಯೋಧ್ಯಾ ರಾಮಲೀಲಾ ಕಮಿಟಿ ಏರ್ಪಡಿಸಿರುವ 9 ದಿನಗಳ ಈ ಶೋವನ್ನು ಟಿವಿ ಚಾನೆಲ್‌ಗ‌ಳು, ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.

ಮೆಕ್ಕಾ ಮಸೀದಿ ಶೈಲಿಯಲ್ಲಿ ಅಯೋಧ್ಯೆ ಮಸೀದಿ?
ಲಕ್ನೋ: ಅಯೋಧ್ಯೆ ಬಳಿಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯನ್ನು, ಮೆಕ್ಕಾದಲ್ಲಿರುವ ಕಅಬಾ ಶರೀಫ್ ಮಸೀದಿಯಂತೆ ಚೌಕಾಕಾರದಲ್ಲಿ ನಿರ್ಮಿಸಲು ಆಲೋಚಿಸಲಾಗಿದೆ ಎಂದು ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ (IICF) ಕಾರ್ಯದರ್ಶಿ ಹಾಗೂ ವಕ್ತಾರ ಅಥರ್‌ ಹುಸೇನ್‌ ತಿಳಿಸಿದ್ದಾರೆ.

“ಒಟ್ಟು 15 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಬಾಬ್ರಿ ಮಸೀದಿಯಷ್ಟೇ ದೊಡ್ಡದಾದ ಮಸೀದಿ ನಿರ್ಮಾಣವಾಗಲಿದೆ. ಆಕಾರ ಮಾತ್ರ ಕಅಬಾ ಮಸೀದಿಯಂತಿರಬೇಕೆಂದು ಉದ್ದೇಶಿಸಲಾಗಿದೆ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next