ಲಕ್ನೋ(ಅಯೋಧ್ಯೆ): ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಈಗಾಗಲೇ ವಿರಾಜಮಾನಗೊಂಡಿರುವ ಬಾಲರಾಮನ ಮುಖದ ಚಿತ್ರವನ್ನು ಬಹಿರಂಗಗೊಳಿಸಲಾಗಿದೆ. ಜನವರಿ 22ರಂದು ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಲಿದೆ.
ಇದನ್ನೂ ಓದಿ:Ayodhya ರಾಮ ಮಂದಿರಕ್ಕೆ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡಿದರೆ? ಇಲ್ಲಿದೆ ಅಸಲೀಯತ್ತು
ಐದು ವರ್ಷದ ಬಾಲರಾಮನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಪ್ಪುಶಿಲೆಯಲ್ಲಿ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು 51 ಇಂಚಿನ ಬಾಲರಾಮನ ವಿಗ್ರಹವನ್ನು ಕೆತ್ತಿದ್ದಾರೆ.
ಗುರುವಾರ ವಿವಿಧ ಪೂಜೆ, ಹೋಮ ಹವನದ ಮೂಲಕ ರಾಮಲಲ್ಲಾ ವಿಗ್ರಹವನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಲಾಗಿತ್ತು. ಜನವರಿ 22ರಂದು ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕಾಗಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿರುವುದಾಗಿ ಉತ್ತರಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.
ಸೋಮವಾರ ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯಾತೀಗಣ್ಯರು ಪಾಲ್ಗೊಳ್ಳಲಿದ್ದಾರೆ.