Advertisement

ಪವನ್‌ ಕಲ್ಯಾಣ್‌ ಎದುರು ರಾಮ್‌ ಗೋಪಾಲ್‌ ಸ್ಪರ್ಧೆ? ರಾಜಕೀಯ ಅಖಾಡಕ್ಕೆ ಧುಮುಕಿದ ನಿರ್ದೇಶಕ

05:28 PM Mar 14, 2024 | Team Udayavani |

ಅಮರಾವತಿ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಜಕೀಯ ರಂಗಕ್ಕೆ ಪ್ರವೇಶಿಸುವುದಾಗಿ ಗುರುವಾರ(ಮಾ.14 ರಂದು) ಅನೌನ್ಸ್‌ ಮಾಡಿದ್ದಾರೆ.

Advertisement

ಈ ವರ್ಷ ಆಂಧ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇತ್ತ ಲೋಕಸಭೆ ಚುನಾವಣೆಯೂ ನಡೆಯಲಿದ್ದು, ರಾಜಕೀಯ ಪಕ್ಷಗಳು ಅಖಾಡಕ್ಕಿಳಿಯುವ ಮುನ್ನವೇ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದೆ.

ಆಂಧ್ರದಲ್ಲಿ ಹೇಗಾದರೂ ಮಾಡಿ ಅಧಿಕಾರವನ್ನು ವಹಿಸಿಕೊಳ್ಳಬೇಕೆನ್ನುವ ಹಟ ಹಿಡಿದಿರುವ ನಟ ಪವನ್‌ ಕಲ್ಯಾಣ್‌ ತನ್ನ ಜನ ಸೇನಾ ಪಕ್ಷದ ಜೊತೆ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಬಿಜೆಪಿ ಜತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದೀಗ ಪವನ್‌ ಕಲ್ಯಾಣ್‌ ತಾವು ವಿಧಾನಸಭೆ ಚುನಾವಣೆಗೆ ಪೀಠಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಅವರು ತಮ್ಮ ಕ್ಷೇತ್ರವನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಾವು ರಾಜಕೀಯ ರಂಗಕ್ಕೆ ಎಂಟ್ರಿ ಆಗುವುದಾಗಿ ಘೋಷಿಸಿದ್ದು ಆಂಧ್ರ ರಾಜಕೀಯ ಅಖಾಡದಲ್ಲಿ ಸಂಚಲನ ಸೃಷ್ಟಿಸಿದೆ.

“ದಿಢೀರ್ ನಿರ್ಧಾರ… ನಾನು ಪೀಠಂಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಲು ಹರ್ಷಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Advertisement

ರಾಮ್‌ ಗೋಪಾಲ್‌ ಈ ಹಿಂದಿನಿಂದಲೂ ಪವನ್‌ ಕಲ್ಯಾಣ್‌ ಅವರ ರಾಜಕೀಯ ಪಕ್ಷ ಹಾಗೂ ಅವರ ಸಿನಿಮಾಗಳ ಕುರಿತಾಗಿ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರು ರಾಜಕೀಯಕ್ಕೆ ಪವನ್‌ ಕಲ್ಯಾಣ್‌ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿರುವುದಾಗಿ ಹೇಳಿರುವುದಾಗಿ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ಕೆಲ ನೆಟ್ಟಿಗರು ರಾಮ್‌ ಗೋಪಾಲ್‌ ಬೇಕಂತಲೇ ಈ ರೀತಿ ಹೇಳಿದ್ದಾರೆ. ಅವರು ಲೋಕಸಭೆಯಿಂದ ಸ್ಪರ್ಧಿಸುತ್ತಾರೋ ಅಥವಾ ವಿಧಾನಸಭೆಯಿಂದಲೋ ಎನ್ನುವುದನ್ನು ಹೇಳಿಲ್ಲ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

2019ರ ಚುನಾವಣೆಯಲ್ಲಿ ಜನಸೇನಾ ಪಕ್ಷ ಸ್ಪರ್ಧಿಸಿತ್ತು. ಈ ಚುನಾವಣೆಯಲ್ಲಿ ಪವನ್‌ ಕಲ್ಯಾಣ್‌ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆ ವೈಎಸ್‌ ಆರ್‌ ಅಭ್ಯರ್ಥಿಗಳ ಎದುರು ಸೋತಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next