ಮುಂಬಯಿ: ಇತ್ತೀಚೆಗೆ ಬಂದ ಬಿಟೌನ್ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಹಾಗೂ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ದಕ್ಷಿಣ ಸಿನಿಮಾಗಳ ಮಂಕಾಗಿದ್ದ ಬಾಲಿವುಡ್ ನಲ್ಲಿ ಮತ್ತೆ ಸಿನಿಮಾಗಳು ಹಿಟ್ ಆಗಲು ಆರಂಭಿಸಿದೆ.
ಈ ವರ್ಷ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾ ದೊಡ್ಡ ಹಿಟ್ ಆಗಿದೆ. ಭಾರತದಲ್ಲಿ ಬರೋಬ್ಬರಿ 543 ಕೋಟಿ ರೂಪಾಯಿಯ ಕಮಾಯಿಯನ್ನು ಸಿನಿಮಾ ಮಾಡಿದೆ. ಆ ಮೂಲಕ ಬಾಲಿವುಡ್ ಮತ್ತೆ ವಿನ್ನಿಂಗ್ ಟ್ರ್ಯಾಕ್ ಗೆ ಬಂದಿದೆ.
ಸೌತ್ vs ನಾರ್ತ್ ಸಿನಿಮಾಗಳ ಪೈಪೋಟಿ ಬಗ್ಗೆ ಚರ್ಚೆಯ ಬಗ್ಗೆ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತನ್ನ ವ್ಯಾಖ್ಯಾನವನ್ನು ನೀಡಿದ್ದಾರೆ.
“ಬಾಲಿವುಡ್ ಹಂಗಾಮ” ಸಂದರ್ಶನದಲ್ಲಿ ಮಾತನಾಡಿರುವ ಶಾರುಖ್ ಖಾನ್ ದಕ್ಷಿಣ ಸಿನಿಮಾಗಳ ಅಲೆಗೆ ಬ್ರೇಕ್ ಹಾಕಿದ್ದಾರೆ ಎಂದಿದ್ದಾರೆ.
“ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾ ಮಾಡಿದ ಒಂದು ಕೆಲಸವೆಂದರೆ ಅದು ಸೌತ್ ಸಿನಿಮಾಗಳ ಅಲೆಯನ್ನು ಬ್ರೇಕ್ ಹಾಕಿದ್ದು. ಈ ಹಿಂದಿನ ದಿನಗಳಲ್ಲಿ ದಕ್ಷಿಣದ ಸಿನಿಮಾಗಳ ಪ್ರಾಬಲ್ಯ ಎಷ್ಟಿತ್ತು ಎಂದರೆ, ʼಕಾಂತಾರʼ, ಆರ್ ಆರ್ ಆರ್, ಕೆಜಿಎಫ್, ಕೆಜಿಎಫ್ -2ʼ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿತ್ತು. ಈ ವೇಳೆ ಇನ್ನೇನು ಬಾಲಿವುಡ್ ಸಿನಿಮಾಗಳು ವರ್ಕೌಟ್ ಆಗುವುದಿಲ್ಲ ಎನ್ನುವ ಮಟ್ಟಿಗಿತ್ತು. ಆ ಬಳಿಕ ಬಾಲಿವುಡ್ ಸ್ಟಾರ್, ಹಿಂದಿ ನಿರ್ದೇಶಕ, ಹಿಂದಿ ನಿರ್ಮಾಪಕರಿಂದ ಬಂದ ʼಪಠಾಣ್ʼ ಸಿನಿಮಾ ದಕ್ಷಿಣದ ಅಲೆಯನ್ನು ನಿಲ್ಲಿಸಿತು” ಎಂದು ರಾಮ್ ಗೋಪಾಳ್ ವರ್ಮಾ ಮಾತನಾಡಿದ್ದಾರೆ.
“ಅಂತಿಮವಾಗಿ ಇದು ಸಾಧ್ಯವಾಗುವುದು ಸಿನಿಮಾದ ಕೆಲಸದಿಂದ ವಿನಃ ಸೌತ್ , ನಾರ್ತ್ ಎನ್ನುವ ಅಂಶದಿಂದ ಸಿನಿಮಾಗಳು ನಡೆಯುವುದಲ್ಲ. ನಾವು ವಸ್ತುಗಳನ್ನು ಲೇಬಲ್ ಮಾಡುವ ಪ್ರವೃತ್ತಿಯನ್ನು ಹೊಂದಿದ್ದೇವೆ. ಎಸ್ ಎಸ್ ರಾಜಮೌಳಿ ಗುಜರಾತ್ ಅಥವಾ ಒಡಿಶಾದಲ್ಲಿ ಹುಟ್ಟಿದ್ದರೂ ಅವರು ಅದೇ ಚಿತ್ರವನ್ನು ಮಾಡುತ್ತಾರೆ” ಎಂದು ಹೇಳಿದರು.
ʼಪಠಾಣ್ʼ ಸಿನಿಮಾಕ್ಕೆ ಮೊದಲು ಬಾಯ್ಕಾಟ್ ಕೂಗು ಕೇಳಿ ಬಂತಾದರೂ, ಸಿನಿಮಾ ಭಾರತದಲ್ಲಿ 543 ಕೋಟಿ, ಗ್ಲೋಬಲ್ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತು.
ಸದ್ಯ ಶಾರುಖ್ ಖಾನ್ ಅಟ್ಲಿ ಅವರ ʼಜವಾನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಬಳಿಕ ರಾಜ್‌ಕುಮಾರ್ ಹಿರಾನಿಯವರ ʼಡಂಕಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.