Advertisement

ರಾಮನ ಅಸ್ತಿತ್ವದ ಬಗ್ಗೆ ಶೋಧ; ಇರಾಕ್ ನಲ್ಲಿ ಸಿಕ್ಕಿದೆ ರಾಮನ ಪುರಾತನ ಭಿತ್ತಿಚಿತ್ರ

09:07 AM Jun 27, 2019 | Nagendra Trasi |

ಲಕ್ನೋ:2000 ಸಾವಿರ ವರ್ಷಗಳಷ್ಟು ಪುರಾತನ ಬಂಡೆಯ ಮೇಲೆ ಭಗವಾನ್ ಶ್ರೀರಾಮನ ಕೆತ್ತನೆಯ ಭಿತ್ತಿಚಿತ್ರವೊಂದು ಇರಾಕ್ ನಲ್ಲಿ ಪತ್ತೆಹಚ್ಚಿರುವುದಾಗಿ ಅಯೋಧ್ಯೆ ಶೋಧ ಸಂಸ್ಥಾನ ತಿಳಿಸಿದೆ.

Advertisement

ಕಳೆದ ಜೂನ್ ತಿಂಗಳಲ್ಲಿ ರಾಮನ ಅಸ್ತಿತ್ವದ ಬಗ್ಗೆ ಶೋಧ ನಡೆಸುತ್ತಿರುವ ಭಾರತದ ಅಯೋಧ್ಯೆ ಶೋಧ ಸಂಸ್ಥಾನ ನಿಯೋಗ ಇರಾಕ್ ಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಇರಾಕ್ ನ ಹೋರೆನ್ ಶೇಖನ್ ಪ್ರದೇಶದಲ್ಲಿನ ದರ್ಬಾಂದ್ ಐ ಬೇಲುಲಾ ಬಂಡೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಮನನ್ನೇ ಹೋಲುವ ಭಿತ್ತಿಚಿತ್ರ ಕಂಡು ಬಂದಿರುವುದಾಗಿ ತಿಳಿಸಿದೆ.

ಬೆತ್ತಲೆ ಎದೆಯನ್ನು ಹೊಂದಿರುವ ರಾಜ ಕೈಯಲ್ಲಿ ಬಿಲ್ಲನ್ನು ಹಿಡಿದುಕೊಂಡಿದ್ದು, ಬಾಣದ ಬತ್ತಳಿಕೆ ಆತನ ಪಕ್ಕದಲ್ಲಿದೆ. ಸಣ್ಣ ಖಡ್ಗವೊಂದು ಸೊಂಟದಲ್ಲಿದ್ದಿರುವುದಾಗಿ ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ವಿವರಿಸಿದ್ದಾರೆ. ಅಲ್ಲದೇ ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಬಿಂಬವಿದ್ದು, ಇದು ಹನುಮಂತನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇರಾಕ್ ತಜ್ಞರ ಪ್ರಕಾರ ಈ ಭಿತ್ತಿಚಿತ್ರ ಪರ್ವತ ಬುಡಕಟ್ಟು ಮುಖ್ಯಸ್ಥನದ್ದಾಗಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ಇರಾಕ್ ನಾದ್ಯಂತ ರಾಜರುಗಳ ಮತ್ತು ಕೈದಿಗಳ ಭಿತ್ತಿಚಿತ್ರಗಳು ಕಾಣಸಿಗುತ್ತದೆ ಎಂದು ವರದಿ ತಿಳಿಸಿದೆ.

Advertisement

ಇದೀಗ ಇರಾಕ್ ನಲ್ಲಿ ರಾಮನನ್ನು ಹೋಲುವ ಭಿತ್ತಿಚಿತ್ರದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲು ಅಯೋಧ್ಯೆ ಶೋಧ ಸಂಸ್ಥಾನದ ಮುಖ್ಯಸ್ಥರು ನಿರ್ಧರಿಸಿದ್ದಾರೆ ಎಂದು ವರದಿ ಹೇಳಿದೆ.

ಇರಾಕ್ ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜ್ ಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಭೇಟಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next