ಹೈದರಾಬಾದ್: ʼಆರ್ ಆರ್ ಆರ್ʼ ಸಿನಿಮಾ ಭಾರತೀಯ ಸಿನಿಮಾ ಲೋಕದಲ್ಲಿ ದಾಖಲೆ ಬರೆದು, ಆಸ್ಕರ್ ಗೆದ್ದು ಇತಿಹಾಸ ಬರೆದಿರುವುದು ಗೊತ್ತೇ ಇದೆ. ʼಆರ್ ಆರ್ ಆರ್ʼ ಸಿನಿಮಾದ ಎರಡನೇ ಭಾಗ ತೆರೆಗ ಬರಲಿದೆ ಎನ್ನುವ ಸುದ್ದಿ ಹಬ್ಬಿದ ದಿನದಿಂದಲೇ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
ಎಸ್.ಎಸ್.ರಾಜಮೌಳಿ ಅವರ ತಂದೆ, ಬರಹಗಾರ ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ತೆಲುಗು ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ಕೊಟ್ಟಿದ್ದು, ಅದರಲ್ಲಿ ʼಆರ್ ಆರ್ ಆರ್-2” ಬಗ್ಗೆ ಮಾತನಾಡಿದ್ದಾರೆ.
“ನಾವು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ʼಆರ್ ಆರ್ ಆರ್ʼ ಸೀಕ್ವೆಲ್ ಮಾಡಲು ಯೋಜಿಸುತ್ತಿದ್ದೇವೆ. ಈ ಚಿತ್ರವು ಇಬ್ಬರು ತಾರೆಯರನ್ನು ಒಳಗೊಂಡಿದ್ದು ಹಾಲಿವುಡ್ ಗುಣಮಟ್ಟದಲ್ಲಿ ತಯಾರಾಗಲಿದೆ. ಹಾಲಿವುಡ್ ನಿರ್ಮಾಪಕರೊಬ್ಬರು ಈ ಸಿನಿಮಾವನ್ನು ನಿರ್ಮಾಣ ಮಾಡುವ ಸಾಧ್ಯತೆಯಿದೆ. ಈ ಚಿತ್ರವನ್ನು ಎಸ್‌ಎಸ್ ರಾಜಮೌಳಿ ಅಥವಾ ಅವರ ಮೇಲ್ವಿಚಾರಣೆಯಲ್ಲಿ ಯಾರಾದರೂ ನಿರ್ದೇಶಿಸಬಹುದು” ಎಂದಿದ್ದಾರೆ.
ಇದನ್ನೂ ಓದಿ: Jawan Prevue out: ನಾನು ಪಾಪವೋ ಪುಣ್ಯವೋ.. ʼಜವಾನ್ʼ ಪ್ರಿವ್ಯೂನಲ್ಲಿ ಜಬರ್ದಸ್ತ್ ಆ್ಯಕ್ಷನ್
ರಾಜಮೌಳಿ ಸದ್ಯ ಮಹೇಶ್ ಬಾಬು ಅವರ ಎಸ್ ಎಸ್ ಎಂಬಿ29 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಇಂಡಿಯಾನಾ ಜೋನ್ಸ್ ಮಾದರಿಯ ಭಾರತೀಯ ಸಿನಿಮಾ ಆಗಿರುವುದರಿಂದ ಈ ಸಿನಿಮಾಕ್ಕಾಗಿ ಸಾಕಷ್ಟು ಸಮಯದೊಂದಿಗೆ ತಯಾರಿಯೂ ಬೇಕಾಗುತ್ತದೆ. ಈ ಸಿನಿಮಾ ʼಆರ್ ಆರ್ ಆರ್ʼ ಗಿಂತ ದೊಡ್ಡಮಟ್ಟದ್ದಾಗಿರಲಿದೆ. ಇದಾದ ಬಳಿಕ ರಾಜಮೌಳಿ ʼಮಹಾಭಾರತʼ ಸಿನಿಮಾದ ತಯಾರಿಯಲ್ಲಿ ನಿರತರಾಗಿರಲಿದ್ದಾರೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
95ನೇ ಅಕಾಡೆಮಿ ಆವಾರ್ಡ್‌ನಲ್ಲಿ ʼಆರ್ ಆರ್ ಆರ್ʼ ಸಿನಿಮಾದ ʼನಾಟು ನಾಟುʼ ಹಾಡು ಅತ್ಯುತ್ತಮ ಹಾಡಿನ ಕೆಟಗರಿಯಲ್ಲಿ ಪ್ರಶಸ್ತಿ ಗೆದ್ದಿತ್ತು.