ಅಯೋಧ್ಯಾ: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಜನವರಿ 22 ರಂದು ರಾಮಲಾಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಜತೆಗೆ ಮಂದಿರ ಉದ್ಘಾಟನೆಗೆ ಸಂಬಂಧಿಸಿ ರಾಜಕೀಯ ವಾಗ್ದಾಳಿಯೂ ಜೋರಾಗಿದೆ. ಈ ಸರಣಿಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತು ಮಾತನಾಡಿದ ಸಚಿವ ತೇಜ್ ಪ್ರತಾಪ್ ಯಾದವ್, ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠೆ ವೇಳೆ ಭಗವಾನ್ ಶ್ರೀರಾಮ ಅಯೋಧ್ಯೆಗೆ ಬರುವುದಿಲ್ಲವಂತೆ ಈ ಬಗ್ಗೆ ಸ್ಪಷ್ಟನೆ ನೀಡಿದ ಯಾದವ್ ನನ್ನ ಕನಸಿನಲ್ಲಿ ಭಗವಾನ್ ಶ್ರೀರಾಮ್ ಬಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ ನನ್ನ ಹೆಸರು ಹೇಳಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಹಾಗಾಗಿ ನಾನು ಅಯೋಧ್ಯೆಗೆ ಬರಲ್ಲ ಎಂದು ಕನಸಿನಲ್ಲಿ ಹೇಳಿದ್ದಾನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ ಅಲ್ಲದೆ ಈ ಹೇಳಿಕೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದು ಕೇವಲ ಮುಂಬರುವ ಚುನಾವಣೆ ವರೆಗೆ ಮಾತ್ರ ಬಿಜೆಪಿಯವರು ಎಮ್ಮ ರಾಮ ಎಂದು ಹೇಳುತ್ತಿದ್ದಾರೆ, ಒಮ್ಮೆ ಚುನಾವಣೆ ನಡೆದು ಹೋಗಲಿ ಆಮೇಲೆ ರಾಮನ ಸುದ್ದಿಯೇ ಇರುವುದಿಲ್ಲ ಬೇಕಿದ್ದರೆ ನೀವೇ ಆಲೋಚನೆ ಮಾಡಿ ನೋಡಿ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಹೇಳಿಕೆ ನೀಡಿದ್ದಾರೆ.
ಇತ್ತ ಯಾದವ್ ಹೇಳಿಕೆ ನೀಡುತಿದ್ದಂತೆ ಕೆಲವರು ತೇಜ್ ಪ್ರತಾಪ್ ಹೇಳಿಕೆ ನಿಜ ಎಂದು ಹೇಳಿದರೆ ಇನ್ನೂ ಕೆಲವರು ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.