Advertisement
ಇದನ್ನೂ ಓದಿ:ತಡರಾತ್ರಿ ವಿಧಾನಸೌಧದ ಕಚೇರಿಯಲ್ಲಿ ಹೋಮ-ಹವನ ಮಾಡಿಸಿದ ಸಚಿವ ಎಸ್.ಅಂಗಾರ
Related Articles
Advertisement
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ; ಯೋಧ ಹುತಾತ್ಮ
ಈ ದೃಷ್ಟಿಕೋನದ ನಿಟ್ಟಿನಲ್ಲಿಯೂ ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭಕ್ತರು ಭೇಟಿ ನೀಡಲು ಅವಕಾಶ ನೀಡದಿರಲು ನಿರ್ಧಾರ ತೆಗೆದುಕೊಂಡಿದ್ದೇವೆ. ಇಂತಹ ಸನ್ನಿವೇಶದಲ್ಲಿ ಭಕ್ತರಿಗೆ ರಾಮಮಂದಿರ ನಿರ್ಮಾಣ ಸ್ಥಳಕ್ಕೆ ಹೋಗುವುದನ್ನು ನಿರ್ಬಂಧಿಸುವ ಮೂಲಕ ಆಕಸ್ಮಿಕವಾಗಿ ಸಂಭವಿಸುವ ಘಟನೆಗಳನ್ನು ತಡೆಯಬಹುದಾಗಿದೆ ಎಂದು ರಾಯ್ ವಿವರಿಸಿದ್ದಾರೆ.
ಈ ಮೊದಲು ರಾಮಮಂದಿರ ನಿರ್ಮಾಣ ಕಾರ್ಯವನ್ನು ನಿಗದಿತ ಸ್ಥಳದಿಂದ ವೀಕ್ಷಿಸಲು ರಾಮ ಭಕ್ತರಿಗೆ ಅವಕಾಶ ನೀಡಲು ಟ್ರಸ್ಟ್ ಒಪ್ಪಿಗೆ ನೀಡಿತ್ತು. ಆದರೆ ಈಗ ಅದು ಸಾಧ್ಯವಿಲ್ಲ. ಆದರೂ ರಾಮಮಂದಿರ ನಿರ್ಮಾಣ ಕಾರ್ಯದ ವಿವರವನ್ನು ಭಕ್ತರಿಗೆ ಮಾಧ್ಯಮದ ಮೂಲಕ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇವೆಲ್ಲವುಗಳ ನಡುವೆ ಮುಖ್ಯವಾಗಿ ಭದ್ರತಾ ಕಾರಣದಿಂದಾಗಿ ರಾಮಮಂದಿರ ನಿರ್ಮಾಣ ಕಾರ್ಯ ವೀಕ್ಷಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿರುವ ಟ್ರಸ್ಟ್, ಈಗಾಗಲೇ ಲಾರ್ಸನ್ ಆ್ಯಂಡ್ ಟರ್ಬೊ ಕಂಪನಿ ಮತ್ತು ಇಂಜಿನಿಯರ್ ಗಳು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಅಂದಾಜು 75 ದಿನಗಳೊಳಗೆ ಉತ್ಖನನ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ.
ರಾಮಮಂದಿರ ಫೌಂಡೇಶನ್ ಕೆಲಸ ಏಪ್ರಿಲ್ ನಿಂದ ಆರಂಭವಾಗಲಿದೆ ಎಂದು ತಿಳಿಸಿರುವ ಕಂಪನಿ, ಮಂದಿರದ ಮೊದಲ ಮಹಡಿ ಕಾರ್ಯ ಮುಂದಿನ ಒಂದೂವರೆ ವರ್ಷದೊಳಗೆ ಆರಂಭಿಸಲಾಗುವುದು ಎಂದು ತಿಳಿಸಿದೆ. ಸಂಪೂರ್ಣ ರಾಮಮಂದಿರ ನಿರ್ಮಾಣ ಕಾರ್ಯ 36-40 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದೆ.