Advertisement
ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಹಾಗೂ ತಾಂತ್ರಿಕ ವಿಭಾಗದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿರುವ ಯುವ ಪ್ರತಿಭೆ ಎನ್. ಎನ್ ಜಾಕಿ ಈಡಿಗರ್, “ರಕ್ತದೋಕುಳಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ “ರಕ್ತದೋಕುಳಿ’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಇದೇ ವೇಳೆ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಸ್ಪೆನ್ಸ್ ಕಂ ಆ್ಯಕ್ಷನ್-ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಪ್ರತಿ ಹಂತದಲ್ಲೂ ಪ್ರೇಕ್ಷಕರಿಗೆ ಥ್ರಿಲ್ ನೀಡುವ ಕಂಟೆಂಟ್ ಸಿನಿಮಾದಲ್ಲಿದೆ’ ಎಂದು ಮಾಹಿತಿ ನೀಡಿದರು. ಬೆಂಗಳೂರು ಸುತ್ತಮುತ್ತ “ರಕ್ತದೋಕುಳಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಸಿನಿಮಾಕ್ಕೆ ಎಂ. ನಾಗರಾಜು ಬಂಡವಾಳ ಹೂಡಿದ್ದಾರೆ. ಕಿರುತೆರೆಯ “ಕಾಮಿಡಿ ಕಿಲಾಡಿಗಳು’ ಶೋ ಖ್ಯಾತಿಯ ನಯನಾ, ನಾಗೇಂದ್ರ ಅರಸ್ ಮೊದಲಾದವರು “ರಕ್ತದೋಕುಳಿ’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ನಾಲ್ಕು ಹಾಡುಗಳಿಗೆ ಅನಿಲ್ ಸಿ. ಜೆ ಸಂಗೀತ ಸಂಯೋಜಿಸಿದ್ದು, ಲೋಕಲ್ ಲೋಕಿ ಸಾಹಿತ್ಯವಿದೆ. ಚಿತ್ರಕ್ಕೆ ರಂಗಸ್ವಾಮಿ ಎಲ್. ಛಾಯಾಗ್ರಹಣ, ಗಂಗಮ್ ರಾಜು ನೃತ್ಯ ನಿರ್ದೇಶನ, ಚಂದ್ರು ಬಂಡೆ ಸಾಹಸ ಸಂಯೋಜನೆಯಿದೆ.