Advertisement

ಚಾರ್ಲಿಯಲ್ಲಿ ರಕ್ಷಿತ್‌ ಶೆಟ್ಟಿ ಬಿಝಿ

12:42 PM Oct 07, 2020 | Suhan S |

ಲಾಕ್‌ಡೌನ್‌ ತೆರವಾಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಹೊಸಬರು ಮೊದಲು ಚಿತ್ರೀಕರಣಕ್ಕೆ ಮುಂದಾಗಿದ್ದರು. ಆದರೆ, ಸ್ಟಾರ್‌ಗಳು ಮಾತ್ರ ಹೋಗಿರಲಿಲ್ಲ. ಈಗ ಎಲ್ಲರೂ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಕೂಡಾ ಬರೋಬ್ಬರಿ ಏಳು ತಿಂಗಳ ನಂತರ ಚಿತ್ರೀಕರಣಕ್ಕೆ ಮರಳಿದ್ದಾರೆ. “777 ಚಾರ್ಲಿ’ ಚಿತ್ರೀಕರಣ ಆರಂಭವಾಗಿದ್ದು, ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣಕ್ಕೆ ಸೆಟ್‌ಹಾಕಲಾ ಗಿದೆ.

Advertisement

ಸೋಮವಾರದಿಂದ ಚಿತ್ರೀಕರಣ ಆರಂಭವಾಗಿದ್ದು, ಡಾಗ್‌ ಶೋ ದೃಶ್ಯವನ್ನು ಚಿತ್ರತಂಡ ಸೆರೆಹಿಡಿದಿದೆ. ಇದು ಮನುಷ್ಯ ಮತ್ತು ಶ್ವಾನವೊಂದರ ನಡುವಿನ ಬಾಂಧವ್ಯದಕಥೆಯ ಜೊತೆಗೆ ಹಲವು ಅಂಶಗಳನ್ನು ಹೊಂದಿರುವುದರಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಬೇಕಿದೆ. ಮುಖ್ಯವಾಗಿ “777 ಚಾರ್ಲಿ’ ಒಂದು ಜರ್ನಿ ಸಬೆjಕ್ಟ್. ಅದೇ ಕಾರಣದಿಂದ ರಕ್ಷಿತ್‌ ಹಲವು ರಾಜ್ಯಗಳನ್ನು ಸುತ್ತುತ್ತಿದ್ದಾರೆ. “777 ಚಾರ್ಲಿ’ ಒಂದು ಜರ್ನಿ ಸಬ್ಜೆಕ್ಟ್. ಹಾಗಾಗಿ, ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿಕೊಂಡೇ ಬರಬೇಕಾದ ಅನಿವಾರ್ಯತೆ ಕತೆಯಲ್ಲಿರುವ ಕಾರಣ ಚಿತ್ರೀಕರಣ ದಿನಗಳುಕೂಡಾ ಹೆಚ್ಚಾಗುತ್ತಿವೆ. ಗೋವಾ, ಗುಜರಾತ್‌, ರಾಜಸ್ತಾನ್‌, ಪಂಜಾಬ್‌, ಹಿಮಾಚಲ ಪ್ರದೇಶ, ಕಾಶ್ಮೀರಗಳಲ್ಲಿ “777 ಚಾರ್ಲಿ’ ಚಿತ್ರೀಕರಣ ನಡೆಯಲಿದೆ.

ಬೆಂಗಳೂರಿನಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ಮಾಡಲಿರುವ ಚಿತ್ರತಂಡ, ಆ ನಂತರ ಕೊಡೈಕೆನಾಲ್‌ಗೆ ಪ್ರಯಾಣ ಬೆಳೆಸಲಿದೆ. ತುಂಬಾ ದಿನಗಳ ನಂತರ ಚಿತ್ರೀಕರಣದಲ್ಲಿ ಭಾಗಿಯಾದ ರಕ್ಷಿತ್‌, “ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರೀಕರಣ ಮಾಡುತ್ತಿದ್ದೇವೆ. ಇನ್ನೂ ಒಂದಷ್ಟು ದಿನಗಳ ಚಿತ್ರೀಕರಣ ಬಾಕಿ ಇದೆ. ಇದು ಮುಗಿಸಿಕೊಂಡು ಸಪ್ತ ಸಾಗರದಾಚೆ ಎಲ್ಲೋ’ ಶೂಟಿಂಗ್‌ ಆರಂಭವಾಗಲಿದೆ’ ಎನ್ನುವುದು ರಕ್ಷಿತ್‌ ಮಾತು. ಈ ಚಿತ್ರವನ್ನು ಕಿರಣ್‌ ರಾಜ್‌ ನಿರ್ದೇಶನ ಮಾಡುತ್ತಿದ್ದು, ಪುಷ್ಕರ್‌ ಬ್ಯಾನರ್‌ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next