Advertisement

ಇದು ನೆಕ್ಸ್ಟ್ ಲೆವೆಲ್‌ ಸಿನಿಮಾ: ‘ಗರುಡ ಗಮನ ವೃಷಭ ವಾಹನ’ಬಗ್ಗೆ ರಕ್ಷಿತ್‌ ಶೆಟ್ಟಿ ವಿಶ್ವಾಸ

11:13 AM Nov 16, 2021 | Team Udayavani |

“ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋ ಮೂಲಕ ಸಾಥ್‌ ನೀಡುತ್ತಿರೋದು ಗೊತ್ತೇ ಇದೆ. ಈಗಾಗಲೇ ಚಿತ್ರರಂಗಕ್ಕೆ ಹೊಸ ಬಗೆಯ ಸಿನಿಮಾಗಳನ್ನು ನೀಡಿರುವ ರಕ್ಷಿತ್‌, ಬೇರೆ ತಂಡಗಳು ಮಾಡಿದ ವಿಭಿನ್ನ ಕಲ್ಪನೆಯ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾರೆ. ಅದರಂತೆ ಈಗ “ಗರುಡ ಗಮನ ವೃಷಭ ವಾಹನ’ ಕೂಡ ‌ ಸಾಥ್‌ ನೀಡಿದ್ದಾರೆ.

Advertisement

ಸಿನಿಮಾ ನೋಡಿದ ರಕ್ಷಿತ್‌ ಶೆಟ್ಟಿಯವರಿಗೆ ಇದು ನೆಕ್ಸ್ಟ್ ಲೆವೆಲ್‌ ಸಿನಿಮಾ ಎಂಬುದು ಗೊತ್ತಾಗಿದೆ. ಈ ಥರದ ಸಿನಿಮಾಕ್ಕೆ ಒಂದು ದೊಡ್ಡ ವೇದಿಕೆ ಒದಗಿಸಿಕೊಡಬೇಕೆಂಬ ಕಾರಣದಿಂದ ರಕ್ಷಿತ್‌ “ಗರುಡ’ನಿಗೆ ಸಾಥ್‌ ನೀಡಿದ್ದಾರೆ.

“ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ನೆಕ್ಸ್ಟ್ ಲೆವೆಲ್‌ ಸಿನಿಮಾ. ರೆಗ್ಯುಲರ್‌ ಶೈಲಿ ಬಿಟ್ಟು, ಇಡೀ ಸಿನಿಮಾವನ್ನು ರಾಜ್‌ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ತುಂಬಾ ಖುಷಿಯಿಂದ ಈ ಸಿನಿಮಾವನ್ನು ನಾವು ಬಿಡುಗ‌ಡೆ ಮಾಡುತ್ತಿದ್ದೇವೆ. ಪ್ರೇಕ್ಷಕರಿಗೆ ಈ ಚಿತ್ರ ಹೊಸ ಅನುಭವ ನೀಡಲಿದೆ’ ಎನ್ನುವುದು ರಕ್ಷಿತ್‌ ಮಾತು.

ಇದನ್ನೂ ಓದಿ:ಇಂದು ಚಿತ್ರರಂಗದಿಂದ ‘ಪುನೀತ್‌ ನಮನ’: ಪಾಸ್‌ ಇದ್ದವರಿಗಷ್ಟೇ ಪ್ರವೇಶ

ಈ ಚಿತ್ರವನ್ನು ರಾಜ್‌ಬಿಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ರಾಜ್‌ ಶೆಟ್ಟಿ ಕೂಡಾ ಈ ಚಿತ್ರದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. “ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಅನೇಕರ ‌ ಲ್ಲಿ ಒಂದು ಭಾವನೆ ಇದೆ. ಅದೇನೆಂದರೆ ಕೆಲವು ದೃಶ್ಯಗಳು ನಾವು ಅಂದು ಕೊಂಡಂತೆಯೇ ಆಗುತ್ತದೆ ಎಂಬುದು. ಆ ತರಹದ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ನಾವು ಅದರಾಚೆ ಯೋಚನೆ ಮಾಡಿ‌ದ್ದೇವೆ. ಅದೇ ಕಾರಣದಿಂದ ನಿಮಗೆ ಟ್ರೇಲರ್‌ನಲ್ಲಿ ವಿಭಿನ್ನವಾದ ಹಿನ್ನೆಲೆ ಸಂಗೀತವಿದೆ. ಒಂದಷ್ಟು ವರ್ಷಗಳ ನಂತರ ಸಿನಿಮಾ ಮರೆತು ಹೋಗಬಹುದು, ಅದರ ಕಥೆ, ಸಂಗೀತವೂ ನೆನಪಿಗೆ ಬಾರದೇ ಇರಬಹುದು. ಆದರೆ ಆ ಸಿನಿಮಾ ಕೊಟ್ಟ ಅನುಭವ ಮಾತ್ರ ಸದಾ ನೆನಪಿನಲ್ಲಿರುತ್ತದೆ. ನಮ್ಮ ಸಿನಿಮಾವೂ ಈ ತರಹದ ಒಂದು ಫೀಲ್‌ ಕೊಡಬೇಕು ಎಂಬ ಆಶಯದೊಂದಿಗೆ ಕಟ್ಟಿಕೊಟ್ಟಿದ್ದೇವೆ. ಇಷ್ಟೇ ಸಾಕು ಎಂದು ಮಾಡಿಲ್ಲ, ನಮ್ಮ ಕೈಯಲ್ಲಿ ಏನೆಲ್ಲಾ ಹೊಸದು ಮಾಡಬಹುದೋ ಅದನ್ನು ಮಾಡಿದ್ದೇವೆ. ನನ್ನ ಪ್ರಕಾರ, ಸಿನಿಮಾದ ಅದರ ಆಶಯದಲ್ಲಿ ಗ್ಲೋಬಲ್‌ ಆಗಿರಬೇಕು, ಥೀಮ್‌ನಲ್ಲಿ ಲೋಕಲ್‌ ಆಗಿರಬೇಕು. ನಾವು ಮಾಡೋದು ಒಂದು ಗ್ಯಾಂಗ್‌ಸ್ಟಾರ್‌ ಸಿನಿಮಾ. ಅದನ್ನು ಮತ್ತೆ ಮತ್ತೆ ಮಾಡುವ ಉದ್ದೇಶವಿಲ್ಲ. ಒಮ್ಮೆ ಮಾಡುವ ಎಷ್ಟು ಚೆನ್ನಾಗಿ ಮಾಡಬಹುದೋ, ಅಷ್ಟು ಚೆನ್ನಾಗಿ ಕಟ್ಟಿಕೊಡಲು ಪ್ರಯತ್ನ ಪಡಬೇಕು. ಅದನ್ನಿಲ್ಲಿ ಪಟ್ಟಿದ್ದೇವೆ. ಇದು ಫ್ರೆಂಡ್‌ಶಿಪ್‌ ಹಿನ್ನೆಯಲ್ಲಿ ಸಾಗುವ ಸಿನಿಮಾ. ಅದಕ್ಕೆ ಗ್ಯಾಂಗ್ ಸ್ಟಾರ್‌ ಸೆಟಪ್‌ ಇದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ರಾಜ್‌ ಶೆಟ್ಟಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next