Advertisement

ಪರಿಹಾರ ಕೇಂದ್ರದಲ್ಲಿ ರಕ್ಷಾ ಬಂಧನ ಆಚರಣೆ

04:47 PM Aug 16, 2019 | Suhan S |

ಚಿಕ್ಕೋಡಿ: ತಾಲೂಕಿನ ಮಲಿಕವಾಡ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಶಾಸಕ ಗಣೇಶ ಹುಕ್ಕೇರಿ ಕುಟುಂಬ ಸಂತ್ರಸ್ತರಿಗೆ ರಾಖೀ ಕಟ್ಟುವ ಮೂಲಕ ಪರಿಹಾರ ಕೇಂದ್ರದಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಿದರು.

Advertisement

ದೂಧಗಂಗಾ ನದಿ ನೀರಿನ ಪ್ರವಾಹದಿಂದ ಮುಳುಗಡೆಗೊಂಡಿರುವ ಮಲಿಕವಾಡ ಗ್ರಾಮದ ಜನರು ಆಶ್ರಯ ಪಡೆದ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಪರಿಹಾರ ಕೇಂದ್ರದ ಸಂತ್ರಸ್ತರಿಗೆ ಶಾಸಕ ಗಣೇಶ ಹುಕ್ಕೇರಿ ತಾಯಿ ನೀಲಾಂಬಿಕಾ ಮತ್ತು ಪತ್ನಿ ಸ್ವಪ್ನಾಲಿ ರಾಖೀ ಕಟ್ಟಿ ಆರತಿ ಬೆಳಗಿ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸುಮಾರು ಮೂರು ನದಿಗಳು ಹರಿದಿರುವುದರಿಂದ ಭಾರಿ ಪ್ರಮಾಣದಲ್ಲಿ ಉಂಟಾದ ಪ್ರವಾಹದಲ್ಲಿ ಯಾವುದೇ ರೀತಿ ಜೀವಹಾನಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಸ್ಥಳಾಂತರಗೊಳ್ಳಲು ಮನವಿ ಮಾಡಲಾಗಿತ್ತು. ಮತ್ತು ಪ್ರವಾಹ ಪೀಡಿತ ಗ್ರಾಮದ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಸರ್ಕಾರದ ಬರುವ ಪರಿಹಾರ ಕೂಡಾ ನೀಡಲಾಗುತ್ತದೆ. ಸಂತ್ರಸ್ತರು ಮುಂದಿನ ಜೀವನ ಕಟ್ಟಿಕೊಳ್ಳಲು ಪ್ರಯತ್ನ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿಗೆ ಸಂತ್ರಸ್ತ ಮಹಿಳೆಯರು ರಾಖೀ ಕಟ್ಟಿದರು. ಪುಂಡಲಿಕ ಖೋತ, ಅಪ್ಪಾಸಾಹೇಬ ನಾಯಿಕ, ಸಂಬಾಜಿ ಪಾಟೀಲ, ಚಿದಾನಂದ ಸಂಕಪಾಳ, ವಿಶ್ವನಾಥ ಪಾಟೀಲ, ಮಹಾದೇವ ವಡಗಾಂವೆ, ಮಹಾದೇವ ಗಜಬರ, ಡಿ.ಎಚ್.ಕಾಂಬಳೆ, ಅಜಿತ ಮಾನೆ, ಯಶವಂತ ಮಾನೆ, ಚಂದ್ರಕಾಂತ ಶಿಂಧೆ, ರಾಜು ಕೋಳಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next