Advertisement

ರಕ್ಷಾ ಪ್ರಕರಣ: ಸಿಒಡಿ ತನಿಖೆ ಆರಂಭ

01:54 AM Sep 09, 2020 | mahesh |

ಉಡುಪಿ: ರಕ್ಷಾ ಅವರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಸಿಒಡಿ ತನಿಖೆಗೆ ಆದೇಶಿಸಿದ್ದು, ತನಿಖೆ ಆರಂಭಗೊಂಡಿದೆ. ಜಿಲ್ಲಾ ಆಸ್ಪತ್ರೆ ವೈದ್ಯ ಡಾ| ಚಂದ್ರಶೇಖರ ಅಡಿಗ ಅವರ ನೇತೃತ್ವದಲ್ಲಿ 7 ಮಂದಿ ತಜ್ಞರನ್ನೊಳಗೊಂಡ ವೈದ್ಯಕೀಯ ತಂಡವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತನಿಖೆಯ ವರದಿಯನ್ನು ನೀಡಿದೆ. ಪೋಸ್ಟ್‌ಮಾರ್ಟಂ ಹಾಗೂ ಎಫ್ಎಸ್‌ಎಲ್‌ ವರದಿ ಬಂದ ಅನಂತರ ತನಿಖೆಯ ಬಗೆಗಿನ ಸಂಪೂರ್ಣ ವಿವರ ತಿಳಿದುಬರುವ ಸಾಧ್ಯತೆಗಳಿವೆ. ತನಿಖೆಯಲ್ಲಿ ಮೃತ ರಕ್ಷಾ ಅವರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ಮೇಲಿನ ಆರೋಪ ಸಾಬೀತಾದರೆ ಆಸ್ಪತ್ರೆಯ ಮೇಲೆ ಸೂಕ್ತ ಕ್ರಮ ಜರಗಿಸುವ ಸಾಧ್ಯತೆಗಳಿವೆ.

Advertisement

ಟ್ವಿಟರ್‌ ಮೊರೆ
ರಕ್ಷಾ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರಕ್ಷಾ ಮನೆಯವರು ಹಾಗೂ ಸಾರ್ವಜನಿಕರು “ಜಸ್ಟಿಸ್‌ ಫಾರ್‌ ರಕ್ಷಾ’ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಅಭಿಯಾನವನ್ನು ಮಂಗಳವಾರ ಸಂಜೆ 5ರಿಂದ 12 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಇದಕ್ಕೂ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಸಾಕಷ್ಟು ಅನುಮಾನ
ರಕ್ಷಾ ಅವರ ಸಾವಿನಲ್ಲಿ ಸಾಕಷ್ಟು ಗೊಂದಲವಿದ್ದ ಕಾರಣ ಖಾಸಗಿ ಆಸ್ಪತ್ರೆ ವೈದ್ಯರ ಚಿಕಿತ್ಸೆಯ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದ್ದವು. ಈ ಕಾರಣಕ್ಕಾಗಿ ರಕ್ಷಾ ಅವರ ಮನೆಯವರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಗೃಹ ಸಚಿವರು ಪ್ರಕರಣವನ್ನು ಸಿಒಡಿ ತನಿಖೆಗೆ ನೀಡುವ ಬಗ್ಗೆ ಆದೇಶಿಸಿದ್ದರು.

ರಕ್ಷಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಒಡಿ ತನಿಖೆ ಆರಂಭಗೊಂಡಿದೆ. ತನಿಖೆ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ಅದರ ಸಂಪೂರ್ಣ ವಿವರ ನೀಡಲಾಗುವುದು.
– ಪ್ರವೀಣ್‌ ಸೂದ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು

ತಜ್ಞರನ್ನೊಳಗೊಂಡ 7 ಮಂದಿಯ ತಂಡವು ವರದಿಯನ್ನು ನೀಡಿದೆ. ಪೋಸ್ಟ್‌ ಮಾರ್ಟಂ ಹಾಗೂ ಎಫ್ಎಸ್‌ಎಲ್‌ ವರದಿ ಬಂದ ಅನಂತರ ತನಿಖೆಯ ಎಲ್ಲ ವಿವರಗಳು ತಿಳಿದು ಬರಲಿವೆ.
– ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next