Advertisement
ಮ್ಯೂಸಿಕಲ್ ರಾಖಿ ಕೈ ಮಣಿಕಟ್ಟನ್ನು ಪೂರ್ತಿಯಾಗಿ ಮುಚ್ಚುವಷ್ಟು ದೊಡ್ಡದಾಗಿರುವ ಈ ರಾಖಿ, ನೋಡಲೂ ಅಷ್ಟೇ ಆಕರ್ಷಕ. ಮುಟ್ಟಿದರೆ ಇಂಪಾದ ಸಂಗೀತ ಹೊರ ಹೊಮ್ಮುವಂಥ ರಚನೆ ಇದೆ.
ವಜ್ರವನ್ನು ಹೋಲುವ ಹರಳುಗಳ ಈ ರಾಖೀ ನೋಡಲು ಸಿಂಪಲ್ ಮತ್ತು ಕ್ಲಾಸಿ ಆಗಿವೆ. ಕೆಂಪು ಬಣ್ಣದ ದಾರದ ಮಧ್ಯದಲ್ಲಿ ಹೊಳೆಯುವ ಹರಳುಗಳನ್ನು ಪೋಣಿಸಿ ಮಾಡಲಾಗಿದೆ. ಬ್ರೇಸ್ಲೆಟ್ ರಾಖಿ
ಇದು ಟು ಇನ್ ಒನ್ ರಾಖಿ . ಅಂದರೆ, ರಾಖೀಯೂ ಹೌದು, ಬ್ರೇಸ್ಲೆಟ್ ಕೂಡ ಹೌದು. ಸಿಲ್ವರ್ ಕೋಟೆಡ್ ಅಥವಾ ಸಂಪೂರ್ಣ ಬೆಳ್ಳಿಯದ್ದೇ ಆಗಿರುವ ಈ ರಾಖಿಯನ್ನು ರಕ್ಷಾ ಬಂಧನದ ಅನಂತರ ಬ್ರೇಸ್ಲೆಟ್ ಆಗಿಯೂ ಧರಿಸಬಹುದು.
Related Articles
ಗುಲಾಬಿ ಹೂವು ಪ್ರೀತಿಯ ಸಂಕೇತ. ಕೆಂಪು ಗುಲಾಬಿ ಹೂವಿನ ವಿನ್ಯಾಸದ ರಾಖಿಯನ್ನು ಕಟ್ಟಿ ಪ್ರೀತಿ ವ್ಯಕ್ತಪಡಿಸಬಹುದು.
Advertisement
ಹೂವಿನ ಡಿಸೈನ್ ರಾಖಿ ಇದು ಎಲ್ಲೆಡೆ ಪ್ರಚಲಿತದಲ್ಲಿರುವ ರಾಖಿ. ವಿವಿಧ ಬಗೆಯ ಹೂವಿನ ಆಕಾರ ಹಾಗೂ ಬಣ್ಣದಲ್ಲಿ ಈ ರಾಖೀಗಳು ಲಭ್ಯ. ದಾರದಿಂದಲೇ ಹೂವಿನ ಚಿತ್ತಾರವನ್ನು ನೇಯ್ದು, ನಡುವೆ ಮಣಿಗಳನ್ನು ಪೋಣಿಸಿದ ರಾಖೀಗಳೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಕಮಲದ ರಾಖಿ
ಈ ರಾಖಿಯಲ್ಲಿ, ಕೆಂಪು ದಾರದ ಮಧ್ಯದಲ್ಲಿ, ಬಂಗಾರದ ಬಣ್ಣದ ಕಮಲದ ಡಿಸೈನ್ ಇರುತ್ತದೆ. ಪುರಾಣಗಳಲ್ಲಿ ಕಮಲದ ಹೂವನ್ನು ಶ್ರೇಷ್ಠ ಎಂದು ಪರಿಗಣಿಸುವುದರಿಂದ ಈ ರಾಖಿ ಪವಿತ್ರತೆಯ ಸಂಕೇತವಾಗಿದೆ. ಸೂಪರ್ ಮ್ಯಾನ್ ರಾಖಿ
ಸೂಪರ್‌ಮ್ಯಾನ್ ನ ಫ್ಯಾನ್ ಆಗಿರೋ ಮುದ್ದು ತಮ್ಮನಿಗೆ ಇಷ್ಟವಾಗುವ ರಾಖಿ ಇದು. ದಾರದ ಮಧ್ಯದಲ್ಲಿ ಬೇರೆ ಬೇರೆ ಡಿಸೈನ್‌ಗಳಿರುವಂತೆ ಇದರಲ್ಲಿ ಸೂಪರ್ ಮ್ಯಾನ್ ನ ಸಂಕೇತವಾದ ಎಸ್ ಆಕೃತಿ ಇದೆ. ನವಿಲಿನ ರಾಖಿ
ನವಿಲಿನ ಡಿಸೈನ್‌ನ ಮೆಹೆಂದಿ, ಕಿವಿಯೋಲೆ, ಸೀರೆ, ಟ್ಯಾಟೂ… ಹೀಗೆ ಫ್ಯಾಷನ್ ಜಗತ್ತಿನ ಫೇವರಿಟ್ ಪಕ್ಷಿ ನವಿಲು. ಈಗ ನವಿಲಿನ ಡಿಸೈನ್‌ನ ರಾಖೀಗಳೂ ಲಭ್ಯ. ಕಣ್ಸೆಳೆಯುವ ಬಣ್ಣದ ಈ ರಾಖೀ ತನ್ನದೇ ಟ್ರೆಂಡ್ ಅನ್ನೂ ಸೃಷ್ಟಿಸಿದೆ. ಚಂದನ್ ರಾಖೀ/ ಸ್ಯಾಂಡಲ್ ವುಡ್ ರಾಖಿ
ಕೆಂಪು ದಾರದ ಮಧ್ಯದಲ್ಲಿ ಶ್ರೀಗಂಧದ ಮಣಿಗಳನ್ನು ಪೋಣಿಸಿರುವ ಈ ರಾಖಿಗಳು ಸದ್ಯ ಅತಿಹೆಚ್ಚು ಬೇಡಿಕೆಯಲ್ಲಿವೆ. ಗಂಧದ ತುಣುಕುಗಳನ್ನು ಬೇರೆ ಬೇರೆ ವಿನ್ಯಾಸದಲ್ಲಿ ಕೂಡ ಬಳಸಲಾಗುತ್ತದೆ. ಗಂಧದ ಓಂ, ಸ್ವಸ್ತಿಕ್ ಹಾಗೂ ದೇವರ ಚಿತ್ರವಿರುವ ರಾಖಿಗಳು ಕೂಡ ಲಭ್ಯ. ಗೊಂಬೆ ಚಿತ್ರದ ರಾಖಿ
ಇದು ತಮ್ಮಂದಿರಿಗೆ ಕಟ್ಟುವ ರಾಖೀ. ಛೋಟಾ ಭೀಮ…, ಬಾಲ ಹನುಮಾನ್, ಬಾಲ ಗಣೇಶ, ಮಿಕ್ಕಿ ಮೌಸ್… ಹೀಗೆ ಪುಟಾಣಿಗಳಿಗೆ ಇಷ್ಟವಾಗುವ ಕಾರ್ಟೂನ್ ಪಾತ್ರಗಳ ಡಿಸೈನ್ ಇರುವ ರಾಖಿ.