ಮುಂಬಯಿ: ನಟಿ ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ದುರಾನಿ ʼಬಿಗ್ ಬಾಸ್ 12ʼ ಖ್ಯಾತಿಯ ಸೋಮಿ ಖಾನ್ ಅವರೊಂದಿಗೆ ಮದುವೆಯಾಗಿದ್ದಾರೆ.
ಜೈಪುರದಲ್ಲಿ ವಿವಾಹ ನಡೆದಿದ್ದು, ವಿವಾದಗಳಿಂದ ದೂರವಿರುವ ಕಾರಣದಿಂದ ಮದುವೆಯ ಬಗ್ಗೆ ಇನ್ನಷ್ಟೇ ಇಬ್ಬರು ಮಾಹಿತಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಸೋಮಿ ಖಾನ್ ತನ್ನ ಸಹೋದರಿ ಸಬಾ ಖಾನ್ ಅವರೊಂದಿಗೆ ‘ಬಿಗ್ ಬಾಸ್ 12’ ರಲ್ಲಿ ಭಾಗವಾಗಿದ್ದರು.
ಕಳೆದ ವರ್ಷ ಜುಲೈನಲ್ಲಿ ರಾಖಿ ಸಾವಂತ್ ಹಾಗೂ ಆದಿಲ್ ಕೋರ್ಟ್ ಮ್ಯಾರೇಜ್ ಆಗಿದ್ದರು. ಶುರು ಶುರುವಿಗೆ ಎಲ್ಲವೂ ಚೆನ್ನಾಗಿ ಇದ್ದ ಸಂಬಂಧದಲ್ಲಿ ಆ ಬಳಿಕ ಬಿರುಕು ಉಂಟಾಗಿತ್ತು. ಎಲ್ಲಿಯವರೆಗೆ ಅಂದರೆ ರಾಖಿ ತನ್ನ ಪತಿಯ ವಿರುದ್ಧ ಅತ್ಯಾಚಾರ ಹಾಗೂ ಅಕ್ರಮ ಸಂಬಂಧದ ಆರೋಪವನ್ನು ಮಾಡಿ ದೂರು ದಾಖಲಿಸಿದ್ದರು.
ಆತ ನನ್ನ ಚಿನ್ನವನ್ನು ತೆಗೆದುಕೊಂಡಿದ್ದಾನೆ. ಆತ ತುಂಬಾ ಜನರೊಂದಿಗೆ ಮೈ ಹಂಚಿಕೊಂಡಿದ್ದಾನೆ. ನಾನು ಅವನೊಂದಿಗೆ ಯಾವುದೇ ರೀತಿಯ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ. ಇನ್ನು ನಾನು ಅವನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇನೆ ಎಂದು ರಾಖಿ ಹೇಳಿದ್ದರು.
ಈ ಸಂಬಂಧ ಆದಿಲ್ ನನ್ನು ಪೊಲೀಸರು ಬಂಧಿಸಿದ್ದರು. ಜೈಲಿನಿಂದ ಬಂದ ಬಳಿಕ ಆದಿಲ್ ರಾಖಿ ವಿರುದ್ದವೂ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು.
ಆದಿಲ್‌ಗೂ ಮುನ್ನ ರಾಖಿ ರಿತೇಶ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ ಒಟ್ಟಿಗೆ ‘ಬಿಗ್ ಬಾಸ್ 15’ ಮನೆಗೆ ಪ್ರವೇಶಿಸಿದ್ದರು. ಆದರೆ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಂತರ ಶೀಘ್ರದಲ್ಲೇ ಬೇರ್ಪಟ್ಟರು.