Advertisement

Umrah ಯಾತ್ರೆ ಮುಗಿಸಿ ಬಂದ ರಾಖಿ ಸಾವಂತ್: ನನ್ನನ್ನು ಫಾತಿಮಾ ಎಂದು ಕರೆಯಿರಿ!

04:49 PM Aug 31, 2023 | Team Udayavani |

ಮುಂಬಯಿ: ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗಲು ಬಯಸುವ ನಟಿ ರಾಖಿ ಸಾವಂತ್ ಉಮ್ರಾ ಯಾತ್ರೆ ಕೈಗೊಂಡು ವಿಚ್ಛೇದಿತ ಪತಿ ಆದಿಲ್ ನನಗೆ ವಂಚನೆ ಮಾಡಿದ್ದಾನೆ ಎಂದು ಕಣ್ಣೀರಿಟ್ಟು ಸುದ್ದಿಯಾಗಿದ್ದರು. ಅವರು ಮೆಕ್ಕಾದಿಂದ ಗುರುವಾರ ಮುಂಬೈಗೆ ಮರಳಿದ್ದು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಭವ್ಯವಾದ ಸ್ವಾಗತವನ್ನು ಪಡೆದರು.

Advertisement

ವಿಚ್ಛೇದಿತ ಪತಿ ಆದಿಲ್ ಜತೆಗಿನ ಜಗಳ ಚರ್ಚೆಯಾಗಿರುವ ವೇಳೆ ಮಾಜಿ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಸೌದಿ ಅರೇಬಿಯಾಕ್ಕೆ ಕೆಲವು ಸ್ನೇಹಿತರೊಂದಿಗೆ ಯಾತ್ರೆಗೆ ತೆರಳಿದ್ದರು.

ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ, ಸುತ್ತಲೂ ನೆರೆದಿದ್ದವರಿಗೆ ಫೋಟೋಗ್ರಾಫರ್ ಗಳಿಗೆ “ರಾಖಿ ಅಲ್ಲ, ನನ್ನನ್ನು ಫಾತಿಮಾ ಎಂದು ಕರೆಯಿರಿ (ರಾಖಿ ನಹಿ, ಫಾತಿಮಾ ಬೋಲೋ)” ಎಂದು ಹೇಳಿದರು. ಆ ಬಳಿಕ ಛಾಯಾಗ್ರಾಹಕರು ಫಾತಿಮಾ ಫಾತಿಮಾ.. ಎಂದು ಕರೆಯಲು ಪ್ರಾರಂಭಿಸಿದರು. ಒಬ್ಬಾತ ಆಕೆಯ ಕೊರಳಿಗೆ ಹಾರವನ್ನು ಹಾಕಲು ಪ್ರಯತ್ನಿಸಿದ. ಆದರೆ ರಾಖಿ ಅವನ ಕೈಯಿಂದ ಹಾರವನ್ನು ತೆಗೆದುಕೊಂಡರು.

ಜೈಲಿನಿಂದ ಹೊರಬಂದ ನಂತರ ರಾಖಿ ಸಾವಂತ್ ಮತ್ತು ಆಕೆಯ ಮಾಜಿ ಪತಿ ಆದಿಲ್ ನಡುವೆ ಮಾತಿನ ಚಕಮಕಿ ನಡೆದಿದೆ. ರಾಖಿ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರನ್ನು ಈ ವರ್ಷದ ಫೆಬ್ರವರಿ 7 ರಂದು ಬಂಧಿಸಲಾಗಿತ್ತು. ರಾಖಿ ಅವರು ಆದಿಲ್ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಿ ವಿವಾಹೇತರ ಸಂಬಂಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next