Advertisement

ರಾಕೇಶ್‌ ಟಿಕಾಯತ್‌-ಸಿಂಗ್‌ ಮೇಲಿನ ಹಲ್ಲೆಗೆ ಆಕ್ರೋಶ

03:06 PM Jun 02, 2022 | Team Udayavani |

ದಾವಣಗೆರೆ: ಭಾರತೀಯ ಕಿಸಾನ್‌ ಯೂನಿಯನ್‌ ನ ರಾಷ್ಟ್ರೀಯ ನಾಯಕರಾದ ರಾಕೇಶ್‌ ಟಿಕಾಯತ್‌, ಯುದ್ಧವೀರ್‌ ಸಿಂಗ್‌ ಅವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿದ ಘಟನೆ ಖಂಡಿಸಿ ಮಂಗಳವಾರ ಸಂಯುಕ್ತ ಕಿಸಾನ್‌ ಮೋರ್ಚಾ, ಪ್ರಗತಿಪರ ಚಿಂತಕರ ವೇದಿಕೆ ಪದಾಧಿಕಾರಿಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬೆಂಗಳೂರಿನ ಗಾಂಧಿಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿರುವಾಗಲೇ ರಾಕೇಶ್‌ ಟಿಕಾಯತ್‌ ಮೇಲೆ ಕಪ್ಪು ಮಸಿಯನ್ನು ಬಳಿದು ಹಲ್ಲೆ ನಡೆಸಲಾಗಿದೆ. ಯುದ್ಧವೀರ ಸಿಂಗ್‌ ಮೇಲೆ ಮೈಕ್‌ ನಿಂದ ಹಲ್ಲೆ ಇಡೀ ದೇಶದ ರೈತ ಸಮುದಾಯದ ಮೇಲೆ ನಡೆದ ಹಲ್ಲೆಯಾಗಿದೆ. ರಾಜ್ಯದ ಘನತೆಗೆ ಧಕ್ಕೆ ತಂದ ಘಟನೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ರಾಕೇಶ್‌ ಟಿಕಾಯತ್‌ ಹೇಳುತ್ತಿದ್ದಂತೆ ಘಟನೆ ನಡೆದಿರುವುದು ಗಮನಿಸಿದರೆ ಇದರ ಹಿಂದೆ ಕೋಡಿಹಳ್ಳಿ ಚಂದ್ರಶೇಖರ್‌ ಕೈವಾಡ ಕೂಡ ಇರಬಹುದು. ಹಲ್ಲೆಕೋರರು ಮೋದಿ ಮೋದಿ ಎಂದು ಕೂಗಿರುವುದು ಗಮನಿಸಿದರೆ ಹೋರಾಟದಿಂದ ಕೇಂದ್ರ ಸರ್ಕಾರವನ್ನು ಮಣಿಸಿದರೆಂದು ಸಿಟ್ಟಿನಿಂದ ಬಿಜೆಪಿ ಕಾರ್ಯಕರ್ತರು ಈ ರೀತಿ ಮಾಡಿರಬಹುದು ಅಥವಾ ಮುಖಂಡರು ಮಾಡಿಸಿರಬಹುದು. ಹಾಗಾಗಿ ಘಟನೆಯ ಬಗ್ಗೆ ಕೂಲಂಕುಷವಾದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್‌, ವಕೀಲ ಅನೀಸ್‌ ಪಾಷ, ಈ. ಶ್ರೀನಿವಾಸ್‌, ಹುಚ್ಚವ್ವನಹಳ್ಳಿ ಮಂಜುನಾಥ್‌, ಕೆ.ಎಚ್. ಆನಂದ್‌ರಾಜ್‌, ಮಧು ತೊಗಲೇರಿ, ಆದಿಲ್‌ ಖಾನ್‌, ಎಚ್‌. ಮಲ್ಲೇಶ್‌, ಅಬ್ದುಲ್‌ ಘನಿ ತಾಹಿರ್‌, ಜಬೀನಾ ಖಾನಂ, ಕರಿಬಸಪ್ಪ, ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಮುಸ್ತಾಫಾ ಮೊದಲಾದವರು ಭಾಗವಹಿಸಿದ್ದರು.

ಕೊಲೆ ಯತ್ನ ಪ್ರಕರಣ ದಾಖಲಿಸಿ

Advertisement

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತು ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ ಆಡಳಿತರೂಢ ಪಕ್ಷಗಳು ಕುತಂತ್ರಗಳನ್ನು ಮಾಡುತ್ತಾ ಬಂದಿವೆ. ಆದರೆ, ಭಯವನ್ನು ಹುಟ್ಟಿಸುವುದರಿಂದ ಅಥವಾ ಯಾವುದೇ ಒತ್ತಡದಿಂದ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಘಟನೆಯ ಆರೋಪಿಗಳನ್ನು ತೀವ್ರ ತನಿಖೆಗೆ ಒಳಪಡಿಸಿ ಹಿಂದೆ ಯಾರ ಕೈವಾಡ ಇದೆಯೋ ಅವರನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next