Advertisement

ರಾಜ್ಯೋತ್ಸವ ಪುರಸ್ಕೃತರಿಗೆ ರಂಗಾರ್ಪಣದಲ್ಲಿ ಸಮ್ಮಾನ

06:18 PM Dec 07, 2022 | Team Udayavani |

ತೆಕ್ಕಟ್ಟೆ: ಆರ್ಥಿಕವಾಗಿ ದುರ್ಬಲರಾದ ಕಲಾವಿದರಿಗೆ ಸುಭದ್ರತೆಯನ್ನು ಒದಗಿಸುವುದರ ಮೂಲಕ ಕಲಾವಿದರ ಕಾಮಧೇನು ಎನಿಸಿಕೊಂಡವರು ಮಂಜರು. ಕುಂದಾಪುರದ ಗ್ರಾಮ್ಯದ ಸೊಗಡನ್ನು, ಸೊಬಗನ್ನು ವಿಶ್ವಾದ್ಯಂತ ಪಸರಿಸಿ ಕುಂದಗನ್ನಡಕ್ಕೆ ಮಾನ್ಯತೆ ದೊರೆಯುವಂತೆ ಮಾಡಿದವರು ಹಂದಾಡಿಯವರು. ಇವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸೋಣ ಎಂದು ಉಪನ್ಯಾಸಕ ಎಚ್‌. ಸುಜಯೀಂದ್ರ ಹಂದೆ ಅಭಿನಂದನೆ
ಮಾತುಗಳನ್ನಾಡಿದರು.

Advertisement

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್‌ ತೆಕ್ಕಟ್ಟೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಬೆಂಗಳೂರು ಇವರ ಸಹಯೋಗದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ “ರಂಗಾರ್ಪಣ’ ಕಲಾಚಿಗುರುಗಳ ಕಲರವದಲ್ಲಿ ರಾಜ್ಯೋತ್ಸವ ಪುರಸ್ಕೃತ ಕೃಷ್ಣಮೂರ್ತಿ ಮಂಜರು, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮನು ಹಂದಾಡಿಯವರನ್ನು ಸಮ್ಮಾನಿಸಿ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿ, ಚಿಣ್ಣರಿಗೆ ಕೊಡುವ ಶಿಕ್ಷಣ ಅಭೂತಪೂರ್ವ. ತನ್ನಲ್ಲಿರುವ ವಿದ್ಯೆಯನ್ನು ಮಕ್ಕಳಿಗೆ ಹಂಚಿದರೆ ಮುಂದೊಂದು ದಿನ ಸಮಾಜ ಕಲೆಯ ಬೀಡಾಗುತ್ತದೆ. ಹಣದಿಂದ ನೆಮ್ಮದಿ ಸಿಗುವುದಿಲ್ಲ, ಆದರೆ ಕಲೆಯಿಂದ ನೆಮ್ಮದಿ ಸಾಧ್ಯ. ಜಾತಿ ಮತಗಳಿಲ್ಲದ ಕಲೆಯನ್ನು ಕಲಿತು ಸಮಾಜದಲ್ಲಿ ಗೌರವ ಸಂಪಾದನೆ ಮಾಡುವಂತಾಗಲಿ. ನಿಮ್ಮ ಮಕ್ಕಳಿಗೆ ಕಲೆಯ ಅಭಿರುಚಿ ಬೆಳೆಸಿ ಎಂದು ಹೇಳಿದರು.

ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಅಧ್ಯಕ್ಷತೆ ವಹಿಸಿದ್ದರು. ಪುಣ್ಯವತಿ ನಾವುಡ ಸ್ವಾಗತಿಸಿ, ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್‌ ಪ್ರಾಸ್ತಾವಿಕ ಮಾತ ನ್ನಾಡಿದರು. ಶ್ಯಾಮ್‌ ಕೀರ್ತನ್‌ ಹೊಳ್ಳ ಪ್ರಾರ್ಥನೆಗೈದು, ಸುಮನಾ ನೇರಂಬಳ್ಳಿ ನಿರೂಪಿಸಿ, ಮೇಘನಾ ಸಾಲಿಗ್ರಾಮ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸುಗಮ ಸಂಗೀತ, ಯಕ್ಷ ಕಂಠಗಳ ಗಾಯನ, ಚಂಡೆ ಮದ್ದಳೆ ಜುಗಲ್‌ಭಂದಿ, ಕರಾಟೆ, ಚಿತ್ರಕಲೆಗಳ ಪ್ರದರ್ಶನ, ಭರತನಾಟ್ಯ ರಂಗದಲ್ಲಿ ಪ್ರಸ್ತುತಿಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next