Advertisement

ಮದ್ದಲೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರಿಗೆ ರಾಜ್ಯೋತ್ಸವ ಪ್ರಶಸ್ತಿ

07:44 PM Nov 28, 2018 | Karthik A |

ಬೆಂಗಳೂರು: 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೊರಬಿದ್ದಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 63 ಸಾಧಕರನ್ನು ರಾಜ್ಯ ಸರಕಾರ ಕೊಡಮಾಡುವ ಈ ದ್ವಿತೀಯ ಅತ್ಯುನ್ನತ ನಾಗರಿಕ ಗೌರವವಕ್ಕೆ ಆರಿಸಲಾಗಿದೆ. ರಾಜ್ಯದ ಗಂಡುಕಲೆಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಹಾಗೂ ಮದ್ದಳೆ ಮಾಂತ್ರಿಕರೆಂದೇ ಹೆಸರುವಾಸಿಯಾಗಿರುವ ಬಡಗುತಿಟ್ಟಿನ ಹಿರಿಯ ಮದ್ದಲೆವಾದಕ ಹಿರಿಯಡ್ಕ ಗೋಪಾಲರಾಯರಿಗೆ ಹಾಗೂ ಈಗಲೂ ಯಕ್ಷರಂಗದಲ್ಲಿ ಸಕ್ರಿಯವಾಗಿರುವ ಮತ್ತು ಉಭಯತಿಟ್ಟುಗಳಲ್ಲೂ ಸೈ ಅನ್ನಿಸಿಕೊಂಡಿರುವ ಹಾಸ್ಯಗಾರ ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿದೆ.

Advertisement

ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಮುಖರಲ್ಲಿ ರಾಜನ್, ಭಾರ್ಗವ, ಜೈಜಗದೀಶ್, ಕಾಮರೂಪಿ, ಮೇಜರ್ ಪ್ರದೀಪ್ ಆರ್ಯ, ಅಮ್ಮೆಂಬಳ ಆನಂದ, ಶ್ರೀಮತಿ ಮಾರ್ಗರೇಟ್ ಆಳ್ವ, ಡಿ. ಸುರೇಂದ್ರ ಕುಮಾರ್, ಶಿವಾನಂದ ಕೌಜಲಗಿ, ಡಾ. ಸೀತಾರಾಮ್ ಭಟ್, ಎಚ್. ಎಲ್. ದತ್ತು, ಸ್ವಾತಂತ್ರ್ಯಹೋರಾಟಗಾರ ಬಸವರಾಜ ಬಿಸರಳ್ಳಿ, ಡಾ. ಎ.ಎ.ಶೆಟ್ಟಿ ಮುಂತಾದವರು ಸೆರಿದ್ದಾರೆ.

ಈ ಹಿಂದೆಯೇ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣಗೊಳಿಸಿತ್ತು. ಆದರೆ ರಾಜ್ಯದಲ್ಲಿ ಉಪ ಚುನಾವಣೆ ನೀತಿ ಸಂಹಿತೆ ಕಾರಣವೊಡ್ಡಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವನ್ನು ಮುಂದೂಡಲಾಗಿತ್ತು. ಇದೀಗ ಬುಧವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 63 ಸಾಧಕರ ಪಟ್ಟಿಯನ್ನು ಪ್ರಕಟಿಸಿದ್ದು ನವಂಬರ್ 29, ಗುರುವಾರದಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.​​​​​​

ಉಳಿದ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರಾದ ಗಣ್ಯರ ಹೆಸರು ಹೀಗಿದೆ:

ಸಾಹಿತ್ಯ: ಎಂ.ಎಸ್. ಪ್ರಭಾಕರ (ಕಾಮರೂಪಿ), ಹಸನ್ ನಯೀಂ ಸುರಕೋಡ್, ಚ. ಸರ್ವಮಂಗಳ, ಚಂದ್ರಶೇಖರ ತಾಳ್ಯ.

Advertisement

ರಂಗಭೂಮಿ: ಎಸ್.ಎಸ್. ರಂಗಸ್ವಾಮಿ, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ.

ಸಂಗೀತ: ಅಣ್ಣು ದೇವಾಡಿಗ

ನೃತ್ಯ: ಎಂ.ಆರ್. ಕೃಷ್ಣಮೂರ್ತಿ

ಜಾನಪದ: ಗುರುವ ಕೊರಗ, ಗಂಗಹುಚ್ಚಮ್ಮ, ಚನ್ನಮಲ್ಲೇ ಗೌಡ, ಶರಣಪ್ಪ ಬೂತೇರ, ಶಂಕ್ರಪ್ಪ ಮಹಾದೇವಪ್ಪಾ, ಬಸವರಾಜ ಅಲಗೂಡ, ಚೂಡಾಮಣಿ ರಾಮಚಂದ್ರ.

ಶಿಲ್ಪಕಲೆ: ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ.

ಚಿತ್ರಕಲೆ: ಬಸವರಾಜ ರೇವಣಸಿದ್ದಪ್ಪ ಉಪ್ಪಿನ

ಕ್ರೀಡೆ: ಕೆನೆತ್ ಪೊವೆಲ್, ವಿನಯ ವಿ.ಎಸ್., ಚೇತನ್ ಆರ್.

ಯಕ್ಷಗಾನ: ಹಿರಿಯಡ್ಕ ಗೋಪಾಲ ರಾವ್, ಸೀತಾರಾಮ ಕುಮಾರ್ ಕಟೀಲ್

ಬಯಲಾಟ: ಯಲ್ಲವ್ವಾ ರೊಡ್ಡಪ್ಪನವರ, ಭೀಮರಾಯ ಬೋರಗಿ

ಚಲನಚಿತ್ರ: ಭಾರ್ಗವ, ಜೈಜಗದೀಶ್, ರಾಜನ್, ದತ್ತುರಾಜ್

ಶಿಕ್ಷಣ: ಗೀತಾ ರಾಮಾನುಜಂ, ಎ.ವಿ.ಎಸ್. ಮೂರ್ತಿ, ಡಾ. ಕೆ.ಪಿ. ಗೋಪಾಲಕೃಷ್ಣ, ಶಿವಾನಂದ ಕೌಜಲಗಿ

ಎಂಜಿನಿಯರಿಂಗ್: ಪ್ರೊ. ಸಿ.ಇ.ಜಿ. ಜಸ್ಟೋ

ಸಂಕೀರ್ಣ ಕ್ಷೇತ್ರ: ಆರ್.ಎಸ್. ರಾಜಾರಾಂ, ಮೇಜರ್ ಪ್ರದೀಪ್ ಆರ್ಯ, ಸಿ.ಕೆ. ಜೋರಾಪುರ, ನರಸಿಂಹಯ್ಯ, ಡಿ. ಸುರೇಂದ್ರ ಕುಮಾರ್, ಶಾಂತಪ್ಪನವರ್ ಪಿ.ಬಿ., ನಮಶಿವಾಯಂ ರೇಗುರಾಜ್, ಪಿ. ರಾಮದಾಸ್, ಎಂ.ಜೆ. ಬ್ರಹ್ಮಯ್ಯ

ಪತ್ರಿಕೋದ್ಯಮ: ಜಿ.ಎನ್. ರಂಗನಾಥ ರಾವ್, ಬಸವರಾಜ ಸ್ವಾಮಿ, ಅಮ್ಮೆಂಬಳ ಆನಂದ

ಸಹಕಾರ: ಸಿ. ರಾಮು

ಸಮಾಜಸೇವೆ: ಆನಂದ್ ಸಿ. ಕುಂದರ್, ರಾಚಪ್ಪ ಹಡಪದ, ಕೃಷ್ಣಕುಮಾರ ಪೂಂಜ, ಮಾರ್ಗರೇಟ್ ಆಳ್ವ

ಕೃಷಿ: ಮಹಾದೇವಿ ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್

ಪರಿಸರ: ಕಲ್ಮನೆ ಕಾಮೇಗೌಡ

ಸಂಘ-ಸಂಸ್ಥೆ : ರಂಗದೊರೆ ಸ್ಮಾರಕ ಆಸ್ಪತ್ರೆ

ವೈದ್ಯಕೀಯ: ಡಾ. ನಾಡಗೌಡ ಜೆ.ವಿ., ಡಾ.ಸೀತಾರಾಮ ಭಟ್, ಪಿ. ಮೋಹನ ರಾವ್, ಡಾ. ಎಂ.ಜಿ. ಗೋಪಾಲ್

ನ್ಯಾಯಾಂಗ: ಎಚ್.ಎಲ್. ದತ್ತು

ಹೊರನಾಡು: ಡಾ. ಎ.ಎ. ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರರು: ಬಸವರಾಜ ಬಿಸರಳ್ಳಿ



Advertisement

Udayavani is now on Telegram. Click here to join our channel and stay updated with the latest news.

Next