ಈ ಬಾರಿಯ ರಾಜ್ಯಸಭಾ ಕಲಾಪಗಳು ಎಷ್ಟರ ಮಟ್ಟಿಗೆ ಫಲಪ್ರದವಾದವು? ಸಂಸದರು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಯತ್ನಿಸಿದರು? ಈ ಪ್ರಶ್ನೆಗಳಿಗೆ ಖುದ್ದು ಸಂಸತ್ತಿನ ಕಾರ್ಯದರ್ಶಿ ಕಚೇರಿಯೇ ಉತ್ತರ ಕೊಟ್ಟಿದೆ. ಪ್ರಸಕ್ತ ಅಧಿ ವೇ ಶ ನದ ಈವ ರೆ ಗಿನ ಮೇಲ್ಮನೆಯ ಒಟ್ಟು ಕಲಾಪದಲ್ಲಿ ಶೇ. 79.04ರಷ್ಟು ಅವಧಿ ವ್ಯರ್ಥವಾಗಿರುವುದು ವಿಷಾದದ ಸಂಗತಿ.
ಎಷ್ಟರ ಮಟ್ಟಿಗೆ ಪ್ರಯೋಜನ? ;
ಕಲಾಪ ಆರಂಭವಾದ ಮೊದಲ ವಾರದಲ್ಲಿ ಮೇಲ್ಮನೆ ಕಲಾಪಗಳು ಶೇ.32.2ರಷ್ಟು ಫಲಪ್ರದವಾಗಿದ್ದವು. ಎರ ಡ ನೇ ವಾರದಲ್ಲಿ ಅದು ಶೇ.13.7ಕ್ಕೆ ಕುಸಿದಿದೆ. ಕಲಾಪ ಒಟ್ಟಾರೆಯಾಗಿ ಪ್ರಯೋಜನಕಾರಿಯಾಗಿದ್ದು ಶೇ. 21.6ರಷ್ಟು ಮಾತ್ರ.
ವಿಪಕ್ಷಗಳಿಗೆ ಸಲ್ಲಬೇಕಿರುವ “ಶ್ರೇಯಸ್ಸು’ :
ಪೆಗಾಸಸ್, ಕೃಷಿ ಕಾಯ್ದೆಗಳು ಇತ್ಯಾದಿ ವಿವಾದಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಸಂಸದರು ನಡೆಸಿದ ಗದ್ದಲ, ಹರತಾಳ, ಅನು ಚಿತ ವರ್ತನೆಗಳಿಂದಾಗಿ ಕಲಾಪದ ಅವಧಿ ವ್ಯರ್ಥವಾಗಿ ಹೋದವು. ಚರ್ಚೆಗಾಗಿ ಸಭಾಧ್ಯಕ್ಷರಿಂದಲೇ ಸ್ವೀಕರಿಸಲ್ಪಟ್ಟಿದ್ದ 130 ಶೂನ್ಯವೇಳೆಯ ಪ್ರಸ್ತಾವನೆಗಳು ಹಾಗೂ 87 ವಿಶೇಷ ಪ್ರಸ್ತಾವನೆಗಳು ಚರ್ಚೆಯಾಗಲೇ ಇಲ್ಲ.
50 ಗಂಟೆ :
ಈ ಬಾರಿಯ ಕಲಾಪದಲ್ಲಿ ನಿಗದಿಯಾಗಿದ್ದ ಚರ್ಚಾ ಅವಧಿ.
39.52 ಗಂಟೆ :
ಗಲಾಟೆ, ಗದ್ದಲಗಳಿಂದ ವ್ಯರ್ಥವಾದ ಚರ್ಚೆಯ ಅವಧಿ.
1.38 ಗಂಟೆ :
ಮೊದಲ ವಾರದ ಕಲಾಪದಲ್ಲಿ ನಡೆದ ಶೂನ್ಯವೇಳೆಯ ಚರ್ಚೆ.
ಗದ್ದಲದ ನಡುವೆ ಅಂಗೀಕೃತಗೊಂಡ ಮಸೂದೆ :
2021ರ ಜಲಸಾರಿಗೆ ಬೆಂಬಲ ಮಸೂದೆ
2021ರ ಬಾಲಾಪರಾಧಿ ತಿದ್ದುಪಡಿ ಮಸೂದೆ
2021ರ ಫ್ಯಾಕ್ಟರಿಂಗ್ ರೆಗ್ಯುಲೇಶನ್ ತಿದ್ದುಪಡಿ ಮಸೂದೆ
2021ರ ತೆಂಗು ಅಭಿವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ
ಬಾಕಿಯಿರುವ ಮಸೂದೆ:
2021ರ ಸೀಮಿತ ಸ್ವಾತಂತ್ರದ ಸಹಭಾಗಿತ್ವದ ಮಸೂದೆ
2021ರ ಠೇವಣಿ ವಿಮೆ ಹಾಗೂ ಸಾಲ ಖಾತ್ರಿ ನಿಗಮ ತಿದ್ದುಪಡಿ ಮಸೂದೆ