Advertisement

Delhi CM ಕೇಜ್ರಿವಾಲ್ ನಿವಾಸದಲ್ಲಿ 15 ಬಾತ್ ರೂಮ್‌ಗಳು…; ಡಾ. ಸುಧಾಂಶು ವಾಗ್ದಾಳಿ

04:33 PM Aug 07, 2023 | Team Udayavani |

ಹೊಸದಿಲ್ಲಿ: “ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ದೆಹಲಿ (ತಿದ್ದುಪಡಿ) ವಿಧೇಯಕ 2023′ ಕುರಿತು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸಂಸದರ ನಡುವೆ ಕಲಾಪದಲ್ಲಿ ವಾಕ್ಸಮರ ಮುಂದುವರಿದಿದ್ದು, ಸೋಮವಾರ ಬಿಜೆಪಿ ಸಂಸದ ಡಾ. ಸುಧಾಂಶು ತ್ರಿವೇದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಪರಿಗಣನೆಗೆ ಮತ್ತು ಅಂಗೀಕರಿಸಲು ಕೇಳಿಕೊಂಡರು.

ಡಾ. ಸುಧಾಂಶು ತ್ರಿವೇದಿ ರಾಜ್ಯಸಭೆಯಲ್ಲಿ ಮಾತನಾಡಿ, “2013 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಆಗಿನ ಸಿಎಂ ಶೀಲಾ ದೀಕ್ಷಿತ್ ಅವರ ನಿವಾಸದಲ್ಲಿ 10 ಏರ್ ಕಂಡಿಷನರ್‌ಗಳು ಮತ್ತು ಬಾತ್ ರೂಮ್‌ನಲ್ಲಿಯೂ ಸಹ ಎಸಿ ಇತ್ತು ಎಂದು ಟ್ವೀಟ್ ಮಾಡಿ ವಿದ್ಯುತ್ ಬಿಲ್‌ಗೆ ಯಾರು ಪಾವತಿಸಿದ್ದಾರೆ ಎಂದು ಕೇಳಿದ್ದರು. ಈಗ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲಿ, 15 ಸ್ನಾನಗೃಹಗಳು ಮತ್ತು ತಲಾ 1 ಕೋಟಿ ರೂ. ಮೌಲ್ಯದ ಪರದೆಗಳು ಇವೆ ಎಂದು ಹೇಳಿಕೆ ನೀಡಿದ್ದಾರೆ.

105 ಪುಟಗಳ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ದೆಹಲಿಯ ಮೇಲೆ ಕಾನೂನು ಜಾರಿಗೆ ತರುವುದರ ವಿರುದ್ಧ ಎಲ್ಲಿಯೂ ಏನನ್ನೂ ಉಲ್ಲೇಖಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶದಲ್ಲಿ, ಪ್ಯಾರಾ 86, 95 ಮತ್ತು 164 F ನಲ್ಲಿ, ಸಂಸತ್ತಿಗೆ ದೆಹಲಿಗೆ ಕಾನೂನು ರೂಪಿಸಲು ಎಲ್ಲಾ ಹಕ್ಕುಗಳಿವೆ ಎಂದು ಉಲ್ಲೇಖಿಸಲಾಗಿದೆ ಎಂದು ತ್ರಿವೇದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next