ನವದೆಹಲಿ: ಕೇಂದ್ರ ಸಚಿವರಾದ ರವಿಶಂಕರ ಪ್ರಸಾದ್, ಪ್ರಕಾಶ್ ಜಾವಡೇಕರ್ ಸೇರಿದಂತೆ ಏಳು ಮಂದಿ ಕೇಂದ್ರ ಸಚಿವರು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಾ.23 ರಂದು ಆರು ರಾಜ್ಯಗಳಲ್ಲಿ ಚುನಾ ವಣೆ ನಡೆಯಲಿದೆ. ಬಿಹಾರದಿಂದ ರವಿಶಂಕರ ಪ್ರಸಾದ್, ಪ್ರಕಾಶ್ ಜಾವಡೇಕರ್, ಧರ್ಮೇಂದ್ರ ಪ್ರಧಾನ್, ಥಾವರ್ ಚಂದ್ ಗೆಹೊಟ್ ಮಧ್ಯಪ್ರದೇಶದಿಂದ, ಗುಜರಾತ್‌ನಿಂದ ಕೇಂದ್ರ ಸಚಿವರಾದ ಪುರುಷೋತ್ತಮ ರುಪಾಲ, ಮಾನ್ಸುಕ್ ಮಾಂಡವ್ಯ. ಹಿಮಾಚಲ ಪ್ರದೇಶದಿಂದ ಜೆ.ಪಿ.ನಡ್ಡಾ ರಾಜ್ಯಸಭೆಗೆ ಆಯ್ಕೆ ಯಾಗಿದ್ದಾರೆ. ಗುಜರಾತ್ ಸೇರಿ ದಂತೆ ಒಟ್ಟು 11 ರಾಜ್ಯಗಳಿಂದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಕೇಂದ್ರ ಸಚಿವ ಅರುಣ್ ಜೇಟ್ಲಿ, ಎಸ್‌ಪಿ ನಾಯಕಿ ಜಯಾ ಬಚ್ಚನ್ ಸೇರಿದಂತೆ 10 ಅಭ್ಯರ್ಥಿಗಳು ಉತ್ತರ ಪ್ರದೇಶದಿಂದ ಕಣದಲ್ಲಿದ್ದಾರೆ. ಹೀಗಾಗಿ ಇಲ್ಲಿ ಚುನಾವಣೆ ಅನಿವಾರ್ಯವಾಗಿದೆ. ಕರ್ನಾಟಕ ಸೇರಿದಂತೆ ಇತರ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.