Advertisement

Parliament Session: ಅದಾನಿ, ಸೊರೊಸ್‌ ಗದ್ದಲಕ್ಕೆ ಸಂಸತ್‌ ಕಲಾಪ ಬಲಿ

09:38 PM Dec 10, 2024 | Team Udayavani |

ನವದೆಹಲಿ: ಅದಾನಿ ಗ್ರೂಪ್‌ ವಿರುದ್ಧದ ಲಂಚ ಆರೋಪ, ಅಮೆರಿಕ-ಹಂಗೇರಿ ಮೂಲದ ಉದ್ಯಮಿ ಜಾರ್ಜ್‌ ಸೊರೊಸ್‌ ಬೆಂಬಲಿತ ಸಂಸ್ಥೆ ಜತೆಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ಲಿಂಕ್‌ ಇದೆ ಎಂಬ ವಿಚಾರ ಮಂಗಳವಾರ ಕೂಡ ಸಂಸತ್‌ ಕಲಾಪಕ್ಕೆ ಅಡ್ಡಿಯಾಯಿತು.

Advertisement

ಸತತ 2ನೇ ವಾರ ಕೂಡ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಲೋಕಸಭೆ ಬೆಳಗ್ಗೆ 11 ಗಂಟೆಗೆ ಸಮಾವೇಶಗೊಳ್ಳುತ್ತಿದ್ದಂತೆಯೇ ಸೊರೊಸ್‌ ವಿಚಾರ, ಅದಾನಿ ಲಂಚ ಪ್ರಕರಣ ಕೋಲಾಹಲಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ಮಾತಾಡಿದ ಸಚಿವ ಕಿರಣ್‌ ಕಾಂಗ್ರೆಸ್‌ ನಾಯಕರು ಉದ್ಯಮಿ ಸೊರೊಸ್‌ ಕೈಜೋಡಿಸಿದ್ದಾರೆ ಎಂದರು. ಅವರ ಮಾತು ಕೋಲಾಹಲ ಸೃಷ್ಟಿಸಿತು. ಹೀಗಾಗಿ, ಕಲಾಪ ನಡೆಸಲು ಸಾಧ್ಯವಾಗದೆ ಬುಧವಾರಕ್ಕೆ ಕಲಾಪ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಸಚಿವ ಜೆ.ಪಿ.ನಡ್ಡಾ ಕಾಂಗೆಸ್‌ ನಾಯಕರ ವಿರುದ್ಧ ಸೊರೊಸ್‌ ಜತೆಗಿನ ಲಿಂಕ್‌ ಬಗ್ಗೆ ಆರೋಪ ಮಾಡಿದಾಗ ಕೋಲಾಹಲ ಉಂಟಾಯಿತು. ನಂತರ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next