Advertisement
ಕನ್ನಡ ಮಾಧ್ಯಮದಲ್ಲಿ ಓದಿದ ಹಳ್ಳಿ ಹುಡುಗನೊಬ್ಬ, ವಿದೇಶಕ್ಕೆ ಹೋಗಿ ಏನೆಲ್ಲಾ ಸಾಧನೆ ಮಾಡುತ್ತಾನೆ. ಆ ಸಾಧನೆ ಮಧ್ಯೆ ಎಷ್ಟೆಲ್ಲಾ ತೊಂದರೆಗಳು ಎದುರಾಗುತ್ತವೆ ಎನ್ನುವ ಕಥೆ ಇರುವ “ರಾಜು ಕನ್ನಡ ಮೀಡಿಯಂ’ನಲ್ಲಿ ನಾಯಕನಾಗಿ “ಫಸ್ಟ್ ರ್‍ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ನಟಿಸಿದ್ದಾರೆ. “ಇದು ಟೀಮ್ ವರ್ಕ್‌ನಿಂದ ಮೂಡಿಬಂದ ಸಿನಿಮಾ. ನಿರ್ಮಾಪಕ ಹಾಗೂ ನಾಯಕಿ ಹೊರತುಪಡಿಸಿ, “ಫಸ್ಟ್ ರ್‍ಯಾಂಕ್ ರಾಜು’ ಚಿತ್ರದ ಸಕ್ಸಸ್ ತಂಡ ಸೇರಿಕೊಂಡು ಈ ಸಿನಿಮಾ ಮಾಡಿದೆ. ಎಲ್ಲರ ನಿರೀಕ್ಷೆ ಚಿತ್ರದ ಮೇಲಿದೆ. ಇಲ್ಲಿ ಒಂದೊಳ್ಳೆಯ ಸಂದೇಶವಿದೆ. ಆ ಸಂದೇಶವನ್ನು ಸಿನಿಮಾ ಮೂಲಕವೇ ತಿಳಿದುಕೊಳ್ಳಬೇಕು.
Related Articles
Advertisement
ಕೊಡೆ ಕುರಿತು ಒಂದು ಕವಿತೆ ಬರೆದಿದ್ದರಂತೆ ಗೀತರಚನೆಕಾರ ಹೃದಯಶಿವ. ಅದು ಚಿತ್ರದ ಒಂದು ಸನ್ನಿವೇಶಕ್ಕೆ ಸರಿಹೊಂದುತ್ತದೆ ಅಂತ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಇಲ್ಲಿ ಬಳಸಿಕೊಂಡಿದ್ದಾರೆ. ಕವಿಯ ಹಿಂದೆ ಸಾಕಷ್ಟು ನೋವಿರುತ್ತೆ. ಹಾಗಾಗಿ ಬೇಸರದ ಹಾಡು ಬರೆಯೋಕೆ ಒಂಥರಾ ಖುಷಿಯಾಗುತ್ತೆ ಅನ್ನೋದು ಹೃದಯ ಶಿವ ಮಾತು.
ನಟಿ ಆಶಿಕಾಗೆ ಈ ಚಿತ್ರದ ಕಥೆ ಕೇಳಿ ಒಪ್ಪಿಕೊಂಡಾಗ, ಸುದೀಪ್ ಅವರು ನಟಿಸುತ್ತಾರೆ ಅನ್ನೋದು ಗೊತ್ತಿರಲಿಲ್ಲವಂತೆ. “ಆಮೇಲೆ ಸುದೀಪ್ ಕಾಣಿಸಿಕೊಳ್ಳುತ್ತಾರೆ ಅಂದಾಗ ಹೆಚ್ಚು ಖುಷಿಯಾಯ್ತು. ಈ ಚಿತ್ರ ನೋಡೋಕೆ ನಾನು ತುದಿಗಾಲ ಮೇಲೆ ನಿಂತಿದ್ದೇನೆ’ ಅನ್ನುತ್ತಲೇ ಜೋರು ನಗೆ ಚೆಲ್ಲಿ ಸುಮ್ಮನಾಗುತ್ತಾರೆ ಆಶಿಕಾ.