Advertisement
ನಿರ್ಮಾಪಕ ಸುರೇಶ್ ಹಾಗೂ ನಟಿ ಆವಾಂತಿಕ ಶೆಟ್ಟಿ ನಡುವಿನ ಜಗಳ ಸುಖಾಂತ್ಯ ಕಂಡರೂ ಸಿನಿಮಾ ಬಿಡುಗಡೆಗೆ ಆವಂತಿಕಾ ನಡೆ ಅಡ್ಡಿಯಾಗಬಹುದೇ ಎಂಬ ಆತಂಕ ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಅವರನ್ನು ಕಾಡಿತ್ತು. ಆದರೆ ಇದೀಗ ಫಿಲಂ ಛೇಂಬರ್ ಮಧ್ಯಸ್ಥಿಕೆ ನಂತರ ಆವಂತಿಕಾ ತಾನು ಹೂಡಿದ್ದ ಎಲ್ಲಾ ದೂರುಗಳನ್ನು ಹಿಂಪಡೆಯಲು ತೀರ್ಮಾನಿಸಿದರು. ಇದೀಗ ಎಲ್ಲಾ ವಿವಾದಗಳೂ ಸುಖಾಂತ್ಯ ಕಂಡಿದೆ.
ನಟಿ ಆವಾಂತಿಕಾ ಶೆಟ್ಟಿ ಹಾಗೂ ನಿರ್ಮಾಪಕ ಸುರೇಶ್ ಜಟಾಪಟಿಯಿಂದಾಗಿ ‘ರಾಜು ಕನ್ನಡ ಮೀಡಿಯಂ’ ಚಿತ್ರ ಬಡವಾಗಿತ್ತು. ಅವಾಂತಿಕಾ ಶೆಟ್ಟಿ ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿ ತಮ್ಮನ್ನು ಚಿತ್ರದಿಂದ ಹೊರಗಿಟ್ಟು ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದರು. ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇನ್ನೊಂದೆಡೆ ನಿರ್ಮಾಪಕ ಸುರೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ವಿವಾದ ಬಗೆಹರಿಸುವಂತೆ ಕೋರಿದ್ದರು. ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್, ಈ ಇಬ್ಬರೊಂದಿಗೆ ಸಂಧಾನ ನಡೆಸಿ ವಿವಾದವನ್ನು ಬಗೆಹರಿಸಿದ್ದರು.
Related Articles
Advertisement
ಆದರೆ ಅನಂತರ ನಟಿ ತಾನು ಹೂಡಿರುವ ದಾವೆಯನ್ನೂ ವಾಪಸ್ ಪಡೆದಿರಲಿಲ್ಲ. ನಿರ್ಮಾಪಕರ ಕೈಗೂ ಸಿಗುತ್ತಿರಲಿಲ್ಲ. ಈ ನಡುವೆ ಶುಕ್ರವಾರ ಇವರಿಬ್ಬರ ಜಗಳ ಬಗೆಹರಿಸಲು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಿತು. ಈ ಸಭೆಯಲ್ಲಿ ಆವಂತಿಕಾ ಹಾಗೂ ಸುರೇಶ್ ಉಪಸ್ಥಿತರಿದ್ದರು.
ಚಿತ್ರೋದ್ಯಮದ ಗಣ್ಯರ ಸಲಹೆಗೆ ಒಪ್ಪಿಕೊಂಡ ನಟಿ ಆವಂತಿಕಾ ತಾನು ಸುರೇಶ ವಿರುದ್ಧ ಹೂಡಿರುವ ಎಲ್ಲಾ ಕೇಸ್ ಗಳನ್ನೂ ಹಿಂಪಡೆಯುವುದಾಗಿ ಹೇಳಿದರು. ಈ ಮೂಲಕ ಕನ್ನಡ ಮೀಡಿಯಂ ರಾಜು ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದ ಬಲು ದೊಡ್ಡ ವಿವಾದವೊಂದು ಬಗೆಹರಿದಂತಾಗಿದೆ.