Advertisement

ಸಮಸ್ಯೆಗಳಿಗೆ ಸಂದಿಸುವರೇ ರಾಜುಗೌಡ

03:11 PM May 25, 2018 | |

ಸುರಪುರ: ನೂತನ ಶಾಸಕರಾಗಿ ಆಯ್ಕೆಯಾದ ರಾಜುಗೌಡ ಅವರ ಎದುರು ಕ್ಷೇತ್ರದ ನೂರಾರು ಸಮಸ್ಯೆಗಳು ಸವಾಲಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ರಾಜುಗೌಡ ಪರಿಹಾರ ಕಂಡುಕೊಂಡು ಜನರ ಆಶೋತ್ತರಕ್ಕೆ ಸ್ಪಂದಿಸುವವರೇ ಎಂಬುದು ಕ್ಷೇತ್ರದ ಮತದಾರರ ನಿರೀಕ್ಷೆಯಾಗಿದೆ.

Advertisement

ನಗರದ ಕುಡಿಯವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ. ಬೋನ್ಹಾಳ ಏತ ನೀರಾವರಿ ಪುನಃ ಆರಂಭ, ಬೂದಿಹಾಳ ಬಪ್ಪರಗಿ ಏತ ನೀರಾವರಿ ಯೋಜನೆಗೆ ಕಾಯಕಲ್ಪ, ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಪಿಕಪ್‌ ಡ್ಯಾಮ್‌ ನಿರ್ಮಾಣ, ಕಾರ್ಮಿಕರ ಗುಳೆ ತಪ್ಪಿಸುವುದು ಸೇರಿದಂತೆ ಅನೇಕ ಸಮಸ್ಯೆಗಳು ತಾಂಡ ಆಡುತ್ತಿವೆ. ಈ ಎಲ್ಲಾ ಮಸ್ಯೆಗಳಿಗೆ ಶಾಸಕರು ಸ್ಪಂದಿಸುವರೆ ಎಂಬುದು ಜನರ ಯಕ್ಷ ಪ್ರಶ್ನೆ.

ತಮ್ಮದೆ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಬಹು ಗ್ರಾಮಗಳ ಯೋಜನೆ ಅಡಿಯಲ್ಲಿ ಶುದ್ಧ ನೀರಿನ ಘಟಕಗಳು ದಶಕಗಳೆ ಕಳೆದರು ಇನ್ನೂ ಪೂರ್ಣಗೊಂಡಿಲ್ಲ. ಈಗಾಗಿ ಕ್ಷೇತ್ರದ ಜನತೆ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವುದು ತಪ್ಪಿಲ್ಲ, ನಗರಕ್ಕೆ ನೀರು ಸರಬಾರುಜು ಮಾಡುವ ನೀರು ಶುದ್ಧೀಕರಣ ಘಟಕದಲ್ಲಿ ಯಂತ್ರಗಳು ಕೆಟ್ಟು ಹೋಗಿ ದಶಕವೇ ಕಳೆದಿದೆ. ಅದನ್ನು ದುರಸ್ಥಿಗೊಳಿಸುವ ಗೋಜಿಗೆ ಕೈ ಹಾಕಿಲ್ಲ. ಅಶುದ್ಧ ನೀರನ್ನೆ ಸರಬರಾಜು ಮಾಡಲಾಗುತ್ತಿದೆ. ಅದು 20-25 ದಿನಗಳಿಗೆ ಒಮ್ಮೆ ಮಾತ್ರ ಹೀಗಾಗಿ ನಗರದ ಜನತೆ ಜನಪ್ರತಿನಿಧಿಗಳು ಎಂದರೆ ಕೆಟ್ಟ ದೃಷ್ಟಿಯಿಂದ ನೋಡುವ ಪರಸ್ಥಿತಿ ನಿರ್ಮಾಣವಾಗಿದೆ.

ಬಹು ಗ್ರಾಮಗಳ ಯೋಜನೆ ಅಡಿಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಮಾವಿನ ಮಟ್ಟಿ, ಮಂಗಳೂರ, ಚಿಗಿರಿಹಾಳ, ವಾಗಣಗೇರಿ, ಬೋನ್ಹಾಳ, ಆಲ್ದಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ನಿರ್ಮಿಸಲಾಗಿದ್ದ ಶುದ್ಧ ನೀರಿನ ಘಟಕಗಳು ಆರಂಭದ ಹಂತದಲ್ಲಿಯೇ ಹಾಳಾಗಿ ಹೋಗಿವೆ. ಕೆಲ ಕಡೆ ಮಷಿನ ಕೂಡಿಸಲಾಗಿದ್ದು, ಬೋರ್‌ ಕೊರೆಸಿಲ್ಲ, ಕೆಲ ಕಡೆ ವಿದ್ಯುತ್‌ ಸಂಪರ್ಕ ನೀಡಿಲ್ಲ ನಾನಾ ಕಾರಣಗಳಿಂದ ಯೋಜನೆ ಹಳ್ಳ ಹಿಡಿದಿರುವುದು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. 

ಮೂರು ಶತಮಾನಗಳ ಹಿಂದೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಅಳವಡಿಸಿರುವ ಪೈಪ್‌ಗಳು ತುಕ್ಕ ಹಿಡಿದು ಎಲ್ಲೆಂದರಲ್ಲಿ ಒಡೆದು ಹೋಗಿವೆ. ಇದರಿಂದ ಪ್ರತಿ ಬಾರಿ ನೀರು ಸರಬರಾಜಿನಲ್ಲಿ ಸಮಸ್ಯೆ ಉಂಟಾಗಲಿದೆ. ನೀರಿನ ವ್ಯವಸ್ಥೆ ಸರಿಪಡಿಸಲು ಸರಕಾರ ಕೋಟ್ಯಂತರ ರೂ. ಅನುದಾನ ನೀಡಿದೆ. ಆದರೂ ಇದನ್ನು ಬದಲಿಸುವ ಗೋಜಿಗೆ ಹೋಗಿಲ್ಲ. ಹೊಸ ಪೈಪ್‌ ಲೈನ್‌ ಅವಳವಡಿಸಿ ನಗರದ ಲೆವಡಿ ಕೆರೆಗೆ ನೀರು ಸಂಗ್ರಹಿಸಿದರೆ ಪ್ರತಿ ದಿನವೂ ನೀರು ಸರಬರಾಜು ಮಾಡಬಹುದು. ಇದು ಜನರ ಸಂತಸಕ್ಕೂ ಕಾರಣ ಆಗುತ್ತದೆ. ಆದರೆ ಈ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದವರು ನಂತರ ಬಹುಬೇಗ ಮರೆತು ಬಿಡುತ್ತಾರೆ. ಹೀಗಾಗಿ ಜನಪ್ರತಿನಿಧಿಗಳನ್ನು ನಂಬುವಂತ್ತಿಲ್ಲ ಎಂದು ಜನತೆ ನಿರಾಶೆ ವ್ಯಕ್ತ ಪಡಿಸುತ್ತಾರೆ.

Advertisement

ಕೆರೆ-ಬಾವಿ ತುಂಬಿಸುವುದು ಅಗತ್ಯ: ಅಂತರ್ಜಲಮಟ್ಟ ರಕ್ಷಣೆಗೆ ಜನಪ್ರತಿನಿಧಿಗಳು ಎಳ್ಳಷ್ಟು ಪ್ರಯತ್ನಿಸಿಲ್ಲ. ನಗರ ಸೇರಿದಂತೆ ಕ್ಷೇತ್ರದಲ್ಲಿ ಅನೇಕ ಕೆರೆ ಬಾವಿಗಳಿವೆ. ಪಕ್ಕದಲ್ಲಿಯೇ ಕೃಷ್ಣಾನದಿ ಹರಿಯುತ್ತದೆ. ಕಾಲುವೆ ನೀರು
ವ್ಯರ್ಥವಾಗಿ ಹಳ್ಳ ಸೇರುತ್ತಿದೆ. ಇದನ್ನು ಬಳಸಿಕೊಂಡು ಕರೆ, ಬಾವಿ ತುಂಬಿಸುವ ಗೋಜಿಗೆ ಹೋಗಲಿಲ್ಲ. ಕೆರಗಳ ಹೂಳೆತ್ತುವ ಕೆಲಸ ಮಾಡಲ್ಲಿಲ್ಲ. ಐತಿಹಾಸಿಕತೆ ಉಳ್ಳ ದೇವರಭಾವಿ. ನಾಯಕನ ಬಾವಿ, ದೊಡ್ಡ ಬಾವಿ, ಹೊಸ ಬಾವಿ, ಯಲ್ಲಪ್ಪನ ಬಾವಿ ಸೇರಿದಂತೆ ಅನೇಕ ಬಾವಿಗಳು ನಗದಲ್ಲಿವೆ. ಆದರೆ ಅವುಗಳ ರಕ್ಷಣೆಗೂ ಮುಂದಾಗಿಲ್ಲ.

ಏತ ನೀರಾವರಿ ಪುನಃ ಆರಂಭಕ್ಕೆ ಕಾಯಕಲ್ಪ: 2011-12ರಲ್ಲಿ ಆರಂಭಗೊಂಡಿದ್ದ ಬೋನ್ಹಾಳ ಏತ ನೀರಾವರಿಯನ್ನು ಟಿಸಿ ನೆಪದಿಂದ ಕಳೆದ 5 ವರ್ಷಗಳಿಂದ ಯೋಜನೆಯನ್ನೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಸುಮಾರು 15 ಸಾವಿರ ಹೆಕ್ಟೇರ್‌ ಭೂಮಿ ನೀರಾವರಿಯಿಂದ ವಂಚಿತ ಗೊಂಡಿತ್ತು. ಈಗ ಪುನಃ ಅದಕ್ಕೆ ಕಾಯಕಲ್ಪ ನೀಡಿ ಯೋಜನೆಯನ್ನು ಪುನರಾರಂಭಿಸದಲ್ಲಿ 20 ಗ್ರಾಮಗಳ ನೀರಾವರಿ ವಂಚಿತ ರೈತರ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ನೀರಾವರಿ ವಂಚಿತ ರೈತರ ನಿರೀಕ್ಷೆಯಾಗಿದೆ.

ಬೂದಿಹಾಳ ಬೊಪ್ಪರಗಿ ಏತ ನೀರಾವರಿ ಅನುಷ್ಠಾನಕ್ಕೆ ಆದ್ಯತೆ ನೀಡಿದಲ್ಲಿ, ಸುಮಾರು 42 ಗ್ರಾಮಗಳ ಅಂದಾಜು 25 ಸಾವಿರ ಹೆಕ್ಟೇರ್‌ ಜಮೀನು ನೀರಾವರಿಗೆ ಒಳಪಡಲಿದೆ. ಇದರಿಂದ ಆ ಭಾಗದ ರೈತರ ಬದುಕು ಹಸನಾಗಲಿದೆ. ಇದಕ್ಕೆ ಶಾಸಕರು ಮುಂದಾಗುವರೆ ಎಂಬುದು ಅಲ್ಲಿಯ ರೈತರ ಆಶೋತ್ತರವಾಗಿದೆ. 

ಭರವಸೆ ಈಡೇರಿಸಲಿ ಉದ್ಯೋಗ ಖಾತ್ರಿ ಆರಂಭಿಸಿ ಕಾರ್ಮಿಕರಿಗೆ ಕೆಲಸ ನೀಡಿದಲ್ಲಿ ಕಾರ್ಮಿಕರು ಕೆಲಸ ಹರಸಿ
ಗುಳೆ ಹೋಗುವುದು ಸ್ವಲ್ಪ ಮಟ್ಟಿಗಾದರು ತಪ್ಪಿಸಿದಂತ್ತಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಪ್ರಯತ್ನಿಸುವರೆ ಎಂದು ಕಾರ್ಮಿಕರು ಎದುರು ನೋಡುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಜನರಿಗೆ ಭರವಸೆ ನೀಡಿದಂತೆ ಈ ಎಲ್ಲಾ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿ ಜನಪರವಾದ ಆಡಳಿತ ನೀಡುವವರೇ ಎಂಬುದು ಕ್ಷೇತ್ರದ
ಜನತೆಯ ಆಶಯವಾಗಿದೆ.

ನಗರದ ನೀರು ಸರಬರಾಜು ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತು ಬಹುಗ್ರಾಮ ಯೋಜನೆ ಅಡಿಯಲ್ಲಿ ಕುಡಿಯವ ನೀರು ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಪ್ರತಿ ಗ್ರಾಮಕ್ಕೂ ಮಹಿಳಾ ಹೈಟೆಕ್‌ ಶೌಚಾಲಯ, ಬೋನ್ಹಾಳ ಏತ ನೀರಾವರಿ ಪುನಃ ಆರಂಭ, ಬಪ್ಪರಗಿ ಬೂದಿಹಾಳ ಏತ ನೀರಾವರಿ ಅನುಷ್ಠಾನ, ದೇವಾಪುರ, ಲಕ್ಷ್ಮೀಪುರ ಸೇರಿದಂತೆ ಇತರೆ ಹಳ್ಳಗಳಿಗೆ ಪಿಕಪ್‌ ಡ್ಯಾಂ ನಿರ್ಮಿಸಿ ಸಮಗ್ರ ನೀರಾವರಿ ಕಲ್ಪಿಸುವುದು ನನ್ನ ಮುಖ್ಯ ಗುರಿಯಾಗಿದೆ. ಒಟ್ಟಾರೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕ್ಷೇತ್ರದ ಸಮಗ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜನಪರ ಆಡಳಿತ ನೀಡುತ್ತೇನೆ.  ನರಸಿಂಹ ನಾಯಕ (ರಾಜುಗೌಡ), ಶಾಸಕ

ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next