Advertisement
ಭಾರತೀಯ ಸೇನಾಪಡೆಗಳ ಪೈಕಿ ರಜಪುತಾನಾ ರೈಫಲ್ಸ್ ಕೂಡ ಒಂದು. ಸ್ವಾತಂತ್ರ್ಯಾ ಅನಂತರ ಈ ತುಕಡಿಯು ಪಾಕಿಸ್ಥಾನದ ವಿರುದ್ಧದ ಹಲವು ಸಂಘರ್ಷಗಳಲ್ಲಿ ಭಾಗಿಯಾಗಿತ್ತು. 18ನೇ ಶತಮಾನದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ರಜಪೂತರನ್ನು ನೇಮಿಸಿಕೊಳ್ಳಲಾಗಿತ್ತು. ಫ್ರೆಂಚ್ ಅಧಿಕಾರಿಗಳು ಅಳವಡಿಸಿಕೊಂಡಿದ್ದ ಕಾರ್ಯಕ್ಷಮತೆ ಮತ್ತು ಸ್ಥಳೀಯ ಘಟಕಗಳ ನೇಮಕಾತಿಗಳು ರಜಪೂತನಾ ರೈಫಲ್ಸ್‌ಗೆ ಪ್ರೇರಣೆಯಾಯಿತು.
Related Articles
Advertisement
ಭಾರತೀಯ ಚರಿತ್ರೆಯ ಒಂದೊಂದು ಘಟನೆಗಳು ಇತಿಹಾಸದ ಮೈಲುಗಲ್ಲುಗಳು. ಅಸ್ಸಾಂ ರೈಫಲ್ಸ್, ಪಂಜಾಬ್ ರೈಫಲ್ಸ್ ಹೀಗೆ ಹಲವಾರು ತುಕಡಿಗಳು ರಚನೆಗೊಂಡು ಆಯಾ ಕಾಲಘಟ್ಟದ ಆಡಳಿತಾವಧಿಯಲ್ಲಿ ತಮ್ಮದೇ ಛಾಪು ಮೂಡಿಸಿವೆ. ಅದರಲ್ಲಿ ರಜಪೂತನಾ ರೈಫಲ್ಸ್ ಪಾತ್ರ ಪ್ರಮುಖವಾದುದು.
ಸಾಹಸಗಾಥೆ : ಎರಡನೇ ಆಫ್ಘಾನ್ ಯುದ್ಧದ ಸಂದರ್ಭ, ಫ್ರಾನ್ಸ್, ಪ್ಯಾಲೆಸ್ತೀನ್ ಹೋರಾಟಗಳಲ್ಲಿ ಈ ರೈಫಲ್ಸ್‌ನ ಪಾತ್ರ ಪ್ರಮುಖ. ರಜಪುತಾನಾ ರೈಫಲ್ಸ್‌ನ ಗರಿಮೆಗಳೆಂದೇ ಕರೆಯಬಹುದಾದ 1 ಪರಮ ವೀರ್ ಚಕ್ರ, 3 ಅಶೋಕ ಚಕ್ರ, 1 ಪದ್ಮಭೂಷಣ, 10 ಮಹಾ ವೀರ ಚಕ್ರ, 28 ಶೌರ್ಯ ಚಕ್ರ, 55 ಅರ್ಜುನ ಪ್ರಶಸ್ತಿ ಇತ್ಯಾದಿಗಳನ್ನು ತನ್ನದಾಗಿಸಿಕೊಂಡಿದೆ. ಈಗ ರಜಪೂತನಾ ರೈಫಲ್ಸ್ ರೆಜಿಮೆಂಟ್ ಮ್ಯೂಸಿಯಂ ದಿಲ್ಲಿಯ ಕಂಟೋನ್ಮೆಂಟ್ ಒಳಗಿದೆ. ಈ ವಸ್ತು ಸಂಗ್ರಹಾಲಯವು ಸುಮಾರು 7000 ಚದರ ಅಡಿ ಗಾತ್ರದಲ್ಲಿದೆ. ಇಲ್ಲಿರುವ ತುಕಡಿಗಳ ಶಸ್ತ್ರಾಸ್ತ್ರ, ಸಮವಸ್ತ್ರ, ದೊಡ್ಡ ಸ್ವರೂಪದ ಚಿತ್ರಗಳು ನೋಡುಗರ ಕಣ್ಣಿಗೆ ಇತಿಹಾಸವನ್ನು ಕಟ್ಟಿಕೊಡುತ್ತವೆ. ಇದನ್ನು ಭಾರತದ ಅತ್ಯುತ್ತಮ ಮಿಲಿಟರಿ ಮ್ಯೂಸಿಯಂ ಎಂದು ಪರಿಗಣಿಸಲಾಗಿದೆ.
ಹರೀಶ್ ಕಮ್ಮನಕೋಟೆ
ಕುವೆಂಪು ವಿ.ವಿ., ಶಿವಮೊಗ್ಗ