Advertisement

ಜನವರಿಯಲ್ಲಿ ರಜನಿ ರಾಜಕೀಯ ಪ್ರವೇಶ?

07:00 AM Nov 30, 2017 | Team Udayavani |

ಧರ್ಮಪುರಿ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ 2018ರ ಜನವರಿಯಲ್ಲಿ ರಾಜಕೀಯ ಪ್ರವೇಶಿಸುವ ಘೋಷಣೆ ಮಾಡಲಿದ್ದಾರೆ ಎಂದು ರಜನಿಕಾಂತ್‌ ಸೋದರ ಸತ್ಯನಾರಾಯಣ ರಾವ್‌ ಗಾಯಕ್ವಾಡ್‌ ಹೇಳಿದ್ದಾರೆ. ಜನವರಿ ಯಲ್ಲಿ ಚೆನ್ನೈನಲ್ಲಿ ಅಭಿಮಾನಿಗಳೊಂದಿಗೆ ಫೋಟೋಶೂಟ್‌ ನಡೆಸಲಿದ್ದಾರೆ. ಅದೇ ಸಮಯದಲ್ಲೇ ಪಕ್ಷ ಸ್ಥಾಪಿಸುವ ಘೋಷಣೆಯನ್ನೂ ಮಾಡಲಿದ್ದಾರೆ.

Advertisement

ಆದರೆ ಡಿ.12ರಂದು ಹುಟ್ಟಿದ ದಿನದಂದೇ ರಾಜಕೀಯ ಸೇರುವ ಬಗ್ಗೆ ಘೋಷಣೆ ಮಾಡುವುದಿಲ್ಲ ಎಂದು ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ರಜನಿಕಾಂತ್‌ರನ್ನು ದೇಶದ ಎಲ್ಲರೂ ಇಷ್ಟಪಡುತ್ತಾರೆ. ರಾಜಕಾರಣಕ್ಕೆ ಬಂದು ಜನರಿಗೆ ಒಳಿತು ಮಾಡಲು ಬಯಸಿದ್ದಾರೆ ಎಂದು ಸತ್ಯ ನಾರಾಯಣ ರಾವ್‌ ಹೇಳಿದ್ದಾರೆ. ರಜನಿಕಾಂತ್‌ ಅಭಿಮಾನಿ ಸಂಘದ  ಜಿಲ್ಲಾ ಕಾರ್ಯದರ್ಶಿಯ ಪುತ್ರನ ವಿವಾಹ ಸಮಾರಂಭ ದಲ್ಲಿ ಭಾಗವಹಿಸಲು ರಾವ್‌ ಧರ್ಮಪುರಿಗೆ ಆಗಮಿಸಿದ್ದಾಗ ಈ ವಿಷಯ ಬಹಿರಂಗಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next