Advertisement

ಗಡಿದಾಟಿ ದಾಳಿ ಮಾಡಲು ಭಾರತವೀಗ ಹಿಂಜರಿಯಲ್ಲ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

11:15 AM Feb 27, 2020 | sudhir |

ನವದೆಹಲಿ: ಭಾರತದ ವಾಯುಪಡೆ, ಪಾಕಿಸ್ತಾನದ ಬಾಲಕೋಟ್‌ ಮೇಲೆ ಹಠಾತ್‌ ವೈಮಾನಿಕ ದಾಳಿ ಮಾಡಿ, 300ಕ್ಕೂ ಅಧಿಕ ಉಗ್ರರನ್ನು ಸದೆಬಡಿದ ಘಟನೆಗೆ ಫೆ.26ಕ್ಕೆ ಸರಿಯಾಗಿ ಒಂದು ವರ್ಷ.

Advertisement

ಇದರ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭಯೋತ್ಪಾದನೆಯನ್ನು ನಿಭಾಯಿಸುವ ವಿಚಾರದಲ್ಲಿ ಭಾರತದ ನಿಲುವು ಸಂಪೂರ್ಣ ಬದಲಾಗಿದೆ. ಆಪತ್ತು ಬಂದಾಗ ದೇಶದ ಗಡಿದಾಟಿ ದಾಳಿ ಮಾಡಲು ಭಾರತದ ಸೇನೆ ಈಗ ಹಿಂಜರಿಯುವುದಿಲ್ಲ. ಇಂತಹ ಮನೋಭಾವಕ್ಕೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಎಂದು ಹೇಳಿದ್ದಾರೆ.

ಇದೇ ವೇಳೆ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ವಾಯುಪಡೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯ, ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಅಷ್ಟೇ ತೀವ್ರವಾಗಿರುತ್ತದೆ ಎನ್ನುವುದಕ್ಕೆ ಬಾಲಕೋಟ್‌ ದಾಳಿ ಒಂದು ನಿದರ್ಶನ ಎಂದು ಹೇಳಿದ್ದಾರೆ.

ಘಟನೆ ಏನು?: 2019 ಫೆ.14ರಂದು ಜಮ್ಮು-ಕಾಶ್ಮೀರದ ಶ್ರೀನಗರದ ಸಮೀಪ ಪುಲ್ವಾಮದಲ್ಲಿ ಭಾರತೀಯ ಸೇನೆಯ ಮೇಲೆ ಭಯೋತ್ಪಾದಕ ದಾಳಿಯಾಗಿತ್ತು. ಆಗ 40 ಯೋಧರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಫೆ.26ರಂದು ಭಾರತೀಯ ವಾಯುಪಡೆ ಪಾಕ್‌ ಗಡಿದಾಟಿ ಹಠಾತ್‌ ದಾಳಿ ನಡೆಸಿ, 300 ಉಗ್ರರನ್ನು ಸದೆಬಡಿದಿತ್ತು. ಅದರ ಮರುದಿನವೇ ಪಾಕಿಸ್ತಾನದ ವಾಯುಪಡೆ ಪ್ರತಿದಾಳಿ ನಡೆಸಿದಾಗ, ಅದರ ವಿಮಾನವೊಂದನ್ನು ಭಾರತೀಯ ಯೋಧ ಅಭಿನಂದನ್‌ ವರ್ಧಮಾನ್‌ ಹೊಡೆದುರುಳಿಸಿದ್ದರು. ಬಳಿಕ ಪಾಕಿಸ್ತಾನಕ್ಕೆ ಸೆರೆಯಾಗಿ, ಬಿಡುಗಡೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next