Advertisement

ರಾಫೇಲ್ ಯುದ್ದವಿಮಾನದಲ್ಲಿ ಹಾರಾಟ ನಡೆಸಲಿರುವ ರಾಜನಾಥ್ ಸಿಂಗ್

10:17 AM Oct 05, 2019 | keerthan |

ಹೊಸದಿಲ್ಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಫೇಲ್ ಯುದ್ದವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಅಕ್ಟೋಬರ್ 8ರಂದು ಫ್ರಾನ್ಸ್ ದೇಶಕ್ಕೆ ತೆರಳಲಿರುವ ರಾಜನಾಥ್ ಸಿಂಗ್ ಅಲ್ಲಿ ರಾಫೇಲ್ ನಲ್ಲಿ ಹಾರಾಟ ನಡೆಸಲಿದ್ದಾರೆ.

Advertisement

ಭಾರತದ ವಾಯುಪಡೆಗೆ ಸೇರಲಿರುವ ಫ್ರಾನ್ಸ್ ಮೂಲದ ರಾಫೇಲ್ ಯುದ್ದವಿಮಾನಗಳು 2020ರ ವೇಳೆಗೆ ಭಾರತಕ್ಕೆ ಬರಲಿವೆ. ಅ.8ರಂದು ಭಾರತೀಯ ವಾಯುಪಡೆ ದಿನಾಚರಣೆಯ ಸಂದರ್ಭದಲ್ಲಿ ರಕ್ಷಣಾ ಸಚಿವರು ರಾಫೇಲ್ ಹಾರಾಟ ನಡೆಸಲಿದ್ದಾರೆ.

ಭಾರತದ ಮೊದಲ ರಾಫೇಲ್ ಯುದ್ದ ವಿಮಾನ ಆರ್ ಬಿ – 1 ಅನ್ನು ಇದಕ್ಕಾಗಿ ಬಳಸಲಾಗುವುದು. ಓರ್ವ ಫ್ರೆಂಚ್ ಪೈಲೆಟ್ ನ ಜೊತೆಗೆ ರಾಜನಾಥ್ ಸಿಂಗ್ ಯುದ್ದ ವಿಮಾನದ ಪ್ರಯಾಣ ನಡೆಸಲಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next