ನವ ದೆಹಲಿ : ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ಐದು ನಿಮಿಷದ ಅಂತರದಲ್ಲಿ ಎರಡು ಬಾರಿ ಸ್ಫೋಟಗಳು ನಡೆದ ಘಟನೆ ತಡರಾತ್ರಿ ನಡೆದ ಸ್ಫೋಟಗಳಿಗೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಉಪಮುಖ್ಯಸ್ಥ ಏರ್ ಮಾರ್ಷಲ್ ಎಚ್.ಎಸ್.ಅರೋರಾ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ.
ಈ ಕುರಿತಾಗಿ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಭಾರತೀಯ ವಾಯುಪಡೆ, ‘ಏರ್ ಮಾರ್ಷಲ್ ವಿಕ್ರಮ್ ಸಿಂಗ್ ಅವರು ಜಮ್ಮು ತಲುಪಿದ್ದು, ಪರಿಸ್ಥಿತಿ ಅವಲೋಕಿಸುವರು’ ಎಂದು ಮಃಇತಿ ನೀಡಿದೆ.
ಇದನ್ನೂ ಓದಿ : ಮೂರನೇ ಕೋವಿಡ್ ಅಲೆ ಎದುರಿಸಲು ಸಜ್ಜಾಗಿ: ಕಲಬುರಗಿ ಜನಕ್ಕೆ ಮುರುಗೇಶ್ ನಿರಾಣಿ ಸೂಚನೆ
ವಾಯುನೆಲೆ ನಿಲ್ದಾಣದಲ್ಲಿ ಸಂಭವಿಸಿದ ಈ ಸ್ಫೋಟಗಳು ಭಯೋತ್ಪಾದಕ ದಾಳಿಯ ಭಾಗವಾಗಿವೆಯೇ ಎಂಬ ಬಗ್ಗೆ ವಾಯುಪಡೆ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮೂಲಗಳು ಹೇಳಿವೆ.
ಹ್ಯಾಂಗರ್ ಗಳ ಸಮೀಪವಿರುವ ತಾಂತ್ರಿಕ ಪ್ರದೇಶದಲ್ಲಿ ಸ್ಫೋಟಗಳು ನಡೆದಿದ್ದು, ಅಲ್ಲಿನ ಹೆಲಿಕಾಪ್ಟರ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವ ಸಂಚು ಎಂದು ಪ್ರಾಥಮಿಕ ತನಿಖಾ ವರದಿ ತಿಳಿಸಿದೆ. ಎರಡು ಸ್ಫೋಟಗಳು ತಡರಾತ್ರಿ 1.40 ಮತ್ತು 1.46 ಕ್ಕೆ ವಾಯುನೆಲೆ ಪ್ರದೇಶದ ಬಳಿ ಸಂಭವಿಸಿದೆ. ಈ ವಾಯುನೆಲೆಯಲ್ಲಿ ವಾಯುಪಡೆಗೆ ಸೇರಿದ ಹಲವಾರು ಸ್ವತ್ತುಗಳಿವೆ. ಇವುಗಳನ್ನೇ ಗುರಿಯಾಗಿಸಿಕೊಂಡು ಡ್ರೋನ್ ಗಳನ್ನು ಬಳಸಿ ಸ್ಫೋಟಕಗಳನ್ನು ಹಾಕಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಇವೇ ಮೂಲಗಳು ಹೇಳಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ : ವದಂತಿಗಳಿಗೆ ಕಿವಿಗೊಡಬೇಡಿ, ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಿರಿ: ಪ್ರಧಾನಿ ಮೋದಿ