Advertisement

ವಿವಿಧೆಡೆ ರಾಜ್‌ಕುಮಾರ್‌ ಜಯಂತಿ

01:21 PM Apr 25, 2020 | mahesh |

ಮೈಸೂರು: ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಯಿಂದ ಸರಳವಾಗಿ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡಾ.ರಾಜ್‌ ಕುಮಾರ್‌ ಜಯಂತಿಯನ್ನು ನಗರದ ರಾಜ್‌ ಕುಮಾರ್‌ ಪಾರ್ಕ್‌ನಲ್ಲಿರುವ ವರನಟ ಡಾ.ರಾಜ್‌ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ ಅರ್ಪಿಸಿದರು. ವರನಟನ ಪ್ರತಿಮೆಗೆ ನಗರ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎಚ್‌.ಚನ್ನಪ್ಪ ಪಾಲ್ಗೊಂಡಿದ್ದರು.

Advertisement

ಮಯೂರ ಕನ್ನಡ ಯುವಕರ ಬಳಗದಿಂದ ಡಾ.ರಾಜಕುಮಾರ್‌ ಪ್ರತಿಮೆಗೆ ಬಳಿ ಮಾಲಾರ್ಪಣೆ ಮಾಡಿದರು. ನಂತರ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್‌, ಆಹಾರ ಕಿಟ್‌ ವಿತರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿದರು. ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಮಯೂರ ಕನ್ನಡ ಯುವಕರ ಸಂಘದ ಅಧ್ಯಕ್ಷ ಜಿ.ಶ್ರೀನಾಥ್‌ ಬಾಬು, ಕೆ.ಆರ್‌.ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌, ಮಯೂರ ಕನ್ನಡ ಯುವಕರ  ಬಳಗದ ಸಂಚಾಲಕ ಜಿ.ರಾಘವೇಂದ್ರ, ಕಿರಣ್‌, ವಿಶ್ವ , ಕಿಶೋರ್‌ ಕುಮಾರ್‌, ಸುಚೀಂದ್ರ, ಚಕ್ರ ಪಾಣಿ ಮತ್ತಿತರರು ಉಪಸ್ಥಿತರಿದ್ದರು.

ಸಮರ್ಪಣಾ ಶೈಕ್ಷಣಿಕ, ದಾನದತ್ತಿ ಸಂಸ್ಥೆ: ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆಯಿಂದ ಡಾ.ರಾಜ್‌ ಹುಟ್ಟುಹಬ್ಬ ಆಚರಿಸಲಾಯಿತು. ಗಾಯಕ ರಮೇಶ್‌ ಕುಮಾರ್‌, ಕನಕ ಯುವ ಸೇನೆಯ ಗೌರವ ಅಧ್ಯಕ್ಷ ಎಂ. ರವಿಕುಮಾರ್‌, ಸಮರ್ಪಣಾ ಟ್ರಸ್ಟ್‌ನ ಗೌರವ ಖಜಾಂಚಿ ರಾಜೇಂದ್ರಪ್ರಸಾದ್‌ ಹೊನ್ನಲಗೆರೆ, ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಎಸ್‌.ಬಾಲಸುಬ್ರಹ್ಮಣ್ಯಂ, ಟ್ರಸ್ಟ್‌ನ ಸದಸ್ಯ ಹೆಚ್‌.ಎ.ರಾಜಗೋಪಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next