Advertisement

ರಾಜೀವ್‌ಗೆ ಬಂಧನ ಭೀತಿ

12:51 AM May 18, 2019 | Team Udayavani |
ನವದೆಹಲಿ: ಶಾರದಾ ಚಿಟ್ ಫ‌ಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಬಂಧನಕ್ಕೆ ನೀಡಿದ್ದ ತಡೆಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಆದರೆ ಮೇಲ್ಮನವಿ ಸಲ್ಲಿಸುವುದಕ್ಕೆ ಮುಂದಿನ 7 ದಿನಗಳವರೆಗೆ ರಾಜೀವ್‌ ಕುಮಾರ್‌ಗೆ ಅವಕಾಶವಿರಲಿದೆ. ಕಾನೂನಿಗೆ ಅನುಗುಣವಾಗಿ ಸಿಬಿಐ ಕ್ರಮ ತೆಗೆದುಕೊಳ್ಳಬಹುದು ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
Advertisement

Udayavani is now on Telegram. Click here to join our channel and stay updated with the latest news.

Next