Advertisement

ರಾಜೀವನಗರ ವಾಸಿಗಳಿಗೆ ಹಕ್ಕುಪತ್ರ: ಲೋಬೋ ಭರವಸೆ 

11:46 AM Oct 26, 2017 | Team Udayavani |

ಮಲ್ಲಿಕಟ್ಟೆ: ರಾಜೀವನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಲಿದ್ದಾರೆ
ಎಂದು ಶಾಸಕ ಜೆ.ಆರ್‌.ಲೋಬೋ ತಿಳಿಸಿದರು. ಮಲ್ಲಿಕಟ್ಟೆ ಕಚೇರಿಯಲ್ಲಿ ಶಕ್ತಿನಗರ ರಾಜೀವ ನಗರ ನಿವಾಸಿಗಳ ಸಭೆ ನಡೆಸಿ ಅಹವಾಲು ಸ್ವೀಕರಿಸಿ ಮಾತನಾಡಿದರು.

Advertisement

ಕೊಟ್ಟಿರುವ ಅರ್ಜಿಯ ಆಧಾರದಲ್ಲಿ ಅವುಗಳನ್ನು ಸ್ಥಳ ತನಿಖೆ ಮಾಡಲು ಅಧಿಕಾರಿಗಳು ಬಂದಾಗ ನಿಮ್ಮಲ್ಲಿರುವ ದಾಖಲೆಪತ್ರಗಳನ್ನು ಕೊಡಿ ಎಂದು ತಿಳಿಸಿದ ಶಾಸಕರು, ಯಾರು ಅಧಿಕೃತವಾಗಿ ಸ್ಥಳದಲ್ಲಿ ವಾಸಿಸುತ್ತಿದ್ದಾರೆ ಅವರಿಗೆ ಖಂಡಿತವಾಗಿಯೂ ಹಕ್ಕುಪತ್ರ ಸಿಗುತ್ತದೆ ಎಂದು ಹೇಳಿದರು.

ಸ್ಥಳೀಯ ಐದು ಮಂದಿಯ ಸಮಿತಿಯನ್ನು ಮಾಡಲಾಯಿತು. ಈ ಸಮಿತಿಯವರು ಅಧಿಕಾರಿಗಳಿಗೆ ನೆರವಾಗುತ್ತಾರೆ. ಮಹಿಳೆಯರಿಗೆ ಹಕ್ಕುಪತ್ರ ಕೊಡುವುದರಿಂದ ಮಹಿಳೆಯರು 32 ಸಾವಿರ ರೂಪಾಯಿ ಆದಾಯ ಪತ್ರವನ್ನು ಹೊಂದುವುದು ಕಡ್ಡಾಯವಾಗಲಿದೆ ಎಂದು ತಿಳಿಸಿದರು.

ಉಪಆಯುಕ್ತ ಗೋಕುಲ್‌ ದಾಸ್‌ ನಾಯ್ಕ, ಮರಿಯಮ್ಮ ಥೋಮಸ್‌, ಮಾಜಿ ಮೇಯರ್‌ ಅಬ್ದುಲ್‌ ಅಜೀಜ್‌ ಮುಂತಾದವರು ಉಪಸ್ಥಿತರಿದ್ದರು.

ಹಣ ಕೊಡಬೇಡಿ
ರಾಜೀವನಗರದಲ್ಲಿ ವಾಸವಿದ್ದವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಕೆಲವರಿಗೆ ಹಕ್ಕುಪತ್ರ ಕೊಡಲು 3- 4 ಲಕ್ಷ ರೂಪಾಯಿ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಹಣ ಕೊಡಲು ಹೋಗಬಾರದು. ಆದಷ್ಟು ಬೇಗ ಸ್ಥಳ ಪರಿಶೀಲಿಸಿ, ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ.
ಜೆ.ಆರ್‌.ಲೋಬೋ,
  ಸ್ಥಳೀಯ ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next